Syndicate Bank
about
 

ಷೇರುದಾರರ ಮಾಹಿತಿ

 

16.10.2006 ರಂದು ಜಾರಿಗೆ ಬಂದ ಬ್ಯಾಂಕಿಂಗ್ ಕಂಪನಿಗಳು (ಸ್ವಾಧೀನ ಉದ್ದಿಮೆಗಳ ವರ್ಗಾವಣೆ) ಮತ್ತು ಹಣಕಾಸು ಸಂಸ್ಥೆಗಳ ಕಾನೂನು (ತಿದ್ದುಪಡಿ) ಕಾಯಿದೆ, 2006, ಪರಿಭಾಷೆಯಲ್ಲಿ, ವರ್ಗಾಯಿಸಿದ ದಿನಾಂಕದಿಂದ 7 ವರ್ಷಗಳ ಕಾಲ ನಮ್ಮ ದಾಖಲೆಗಳಲ್ಲಿ ಪಾವತಿಸದ ಲಾಭಾಂಶ, ಖಾತೆಗೆ ಪಾವತಿಸದೆ ಉಳಿದ ಲಾಭಾಂಶಗಳನ್ನು ಉಪ ವಿಭಾಗ(1), ಕಂಪನಿ ಕಾಯಿದೆ, 1956 ಸೆಕ್ಷನ್ 205C ಅಡಿಯಲ್ಲಿ ಸ್ಥಾಪಿಸಲಾದ ಹೂಡಿಕೆದಾರರ ಶಿಕ್ಷಣ ಮತ್ತು ರಕ್ಷಣಾ ನಿಧಿಗೆ ವರ್ಗಾಯಿಸಲಾಗುವುದು. ಆದ್ದರಿಂದ ಏಳು ವರ್ಷಗಳ ಕಾಲ ಪಾವತಿಸದೆ ಉಳಿದ ಅಥವಾ ಹಕ್ಕುದಾರರಿಲ್ಲದ ಇಂತಹ ಹಣವನ್ನು 16.10.2013 ರಿಂದ ಪ್ರಾರಂಭವಾಗುತ್ತಿರುವ ಹೂಡಿಕೆದಾರರ ಶಿಕ್ಷಣ ಮತ್ತು ರಕ್ಷಣಾ ನಿಧಿಗೆ ವರ್ಗಾಯಿಸಲಾಗುವುದು.
ಬ್ಯಾಂಕ್, ವರ್ಷ 1999-2000 ರಿಂದ ಪ್ರತಿ ವರ್ಷ ಲಾಭಾಂಶವನ್ನು ಘೋಷಿಸುತ್ತಾ ಬಂದಿದೆ. 2006-2007 ವರೆಗೆ ಬ್ಯಾಂಕ್ ಘೋಷಿಸಿದ ಲಾಭಾಂಶವನ್ನು (ಅಂದರೆ 2006-2007 ಕೊನೆಯವರೆಗೆ) ಜುಲೈ / ಆಗಸ್ಟ್ 2014 ಮಧ್ಯಂತರದ ವೇಳೆಗೆ ಹೂಡಿಕೆದಾರರ ಶಿಕ್ಷಣ ಮತ್ತು ಭಾರತ ಸರ್ಕಾರದ ರಕ್ಷಣಾ ನಿಧಿಗೆ (ಐಇಪಿಎಫ್) ಈಗಾಗಲೇ ವರ್ಗಾಯಿಸಲಾಗಿದೆ ಹಾಗೂ 2007-08 ರ ಅಂತಿಮ ಲಾಭಾಂಶದ ಮೊತ್ತವನ್ನು ಏಪ್ರಿಲ್ ಮತ್ತು ಜುಲೈ 2015 ರ ಅವಧಿಯಲ್ಲಿ ವರ್ಗಾಯಿಸುವುದು ಬಾಕಿ ಇದೆ.
ತಮ್ಮ ಷೇರುಗಳಿಗೆ ಪ್ರತಿಯಾಗಿ ಯಾವ ಷೇರುದಾರರು ತಮ್ಮ ಯಾವುದೇ ಡಿವಿಡೆಂಡ್ ಪಾವತಿ ಪತ್ರಗಳನ್ನು ನಗದು ಮಾಡಿಕೊಂಡಿಲ್ಲವೋ ಅವರನ್ನು , ಹೂಡಿಕೆದಾರರ ಶಿಕ್ಷಣ ಮತ್ತು ರಕ್ಷಣಾ ನಿಧಿಗೆ ಉಳಿದ ಲಾಭಾಂಶವನ್ನು ಪಾವತಿಸದಂತೆ ತಪ್ಪಿಸಲು, ಬ್ಯಾಂಕ್ ನ ಕಂಪನಿ ಸೆಕ್ರೆಟರಿ, ಹೂಡಿಕೆದಾರ ಸಂಬಂಧಗಳ ಕೇಂದ್ರ, ಕಾರ್ಪೊರೇಟ್ ಕಚೇರಿ, ಬೆಂಗಳೂರು (ದೂರವಾಣಿ: 080-22283030) ಇವರನ್ನು ತುರ್ತು ಆಧಾರದ ಮೇಲೆ ಸಹಾಯಕ್ಕಾಗಿ ಸಂಪರ್ಕಿಸಲು ಕೋರಲಾಗಿದೆ.

 

ಹೂಡಿಕೆದಾರರ ಸಂಪರ್ಕ ಕೇಂದ್ರ

 
tracker
 

ಸಿಂಡಿಕೇಟ್ ಬ್ಯಾಂಕ್, ಬೆಂಗಳೂರಿನ ಕಾರ್ಪೊರೇಟ್ ಕಚೇರಿಯಲ್ಲಿ ಹೂಡಿಕೆದಾರರ ಸಂಪರ್ಕ ಕೇಂದ್ರವನ್ನು ಸ್ಥಾಪಿಸಿದೆ. ಷೇರುದಾರರು ಶ್ರೀಮತಿ. ಟಿ. ಎಸ್. ಕೃಪಾದೇವಿ ಕಂಪನಿ ಸೆಕ್ರೆಟರಿ, ಹೂಡಿಕೆದಾರರ ಸಂಪರ್ಕ ಕೇಂದ್ರ, ಇವರನ್ನು ಈ ಕೆಳ ತಿಳಿಸಿದ ವಿಳಾಸದಲ್ಲಿ ಸಂಪರ್ಕಿಸಬಹುದು. :

ಸಿಂಡಿಕೇಟ್ ಬ್ಯಾಂಕ್, ಕಾರ್ಪೊರೇಟ್ ಕಚೇರಿ, 
ಹೂಡಿಕೆದಾರರ ಸಂಪರ್ಕ ಕೇಂದ್ರ, 
ಸಿಂಡಿಕೇಟ್ ಬ್ಯಾಂಕ್ ಕಟ್ಟಡ, 
2ನೇ ಅಡ್ಡ ರಸ್ತೆ, ಗಾಂಧಿನಗರ, 
ಬೆಂಗಳೂರು - 560 009  
ದೂರವಾಣಿ : 080-22283030
ಫ್ಯಾಕ್ಸ್ : 080-22268717
ಇ-ಮೇಲ್ (ಸಾರ್ವತ್ರಿಕ): inrc@syndicatebank.co.in 
ಇ-ಮೇಲ್ ಐ.ಡಿ (ಹೂಡಿಕೆದಾರರ ಕುಂದು ಕೊರತೆಗಳು):  syndinvest@syndicatebank.co.in 
ಹೂಡಿಕೆದಾರರ ಕುಂದು ಕೊರತೆಗಳಿಗಾಗಿ ಪ್ರತ್ಯೇಕ ಇ-ಮೇಲ್ ಐ.ಡಿ: syndinvest@syndicatebank.co.in

ಹೂಡಿಕೆದಾರರಿಗೆ ಒದಗಿಸುತ್ತಿರುವ ಸೇವೆಗಳ ಮಟ್ಟವನ್ನು ಹೆಚ್ಚಿಸುವ ಉಪಕ್ರಮದ ಭಾಗವಾಗಿ, ನಮ್ಮ ಬ್ಯಾಂಕ್ ಪ್ರತ್ಯೇಕವಾಗಿ ದೂರುಗಳನ್ನು ಉದ್ದೇಶಿಸಲು ಅನುಸರಣೆ ಆಫೀಸರ್ ಕೂಡಾ ಆಗಿರುವ ಕಂಪನಿ ಕಾರ್ಯದರ್ಶಿಯವರ ಇಮೇಲ್ ಐಡಿ syndinvest@syndicatebank.co.in, ನಿಗದಿ ಮಾಡಿದೆ, ದೂರುಗಳನ್ನು ಆದ್ಯತೆಯ ಮೇರೆಗೆ ಗಮನಿಸಲು ಬ್ಯಾಂಕನ್ನು ಸಕ್ರಿಯಗೊಳಿಸಲು ಹೂಡಿಕೆದಾರರು ದೂರುಗಳನ್ನು ನಿಗದಿ ಪಡಿಸಿದ ಇಮೇಲ್ ಐಡಿ ಗೆ ಕಳುಹಿಸಬಹುದು.  
ಬ್ಯಾಂಕಿನ ನೋಂದಣಾಧಿಕಾರಿ ಹಾಗೂ ಷೇರು ವರ್ಗಾವಣೆ ಏಜೆಂಟ್ಸ್: ಮೆ.ಕಾರ್ವಿ ಕಂಪ್ಯೂಟರ್ ಷೇರ್ ಪ್ರೈ. ಲಿಮಿಟೆಡ್ ಹೈದರಾಬಾದ್ ಎನ್ನುವ ಕಂಪನಿಯನ್ನು ಅದರ ನೋಂದಣಾಧಿಕಾರಿ ಹಾಗೂ ಷೇರು ವರ್ಗಾವಣೆ ಏಜೆಂಟ್ಸ್, ಆಗಿ ಬ್ಯಾಂಕ್ ನೇಮಕ ಮಾಡಿರುತ್ತದೆ. ಷೇರುಗಳನ್ನು ಹೊಂದಿರುವವರು ಕೆಳಗಿನ ವಿಳಾಸದಲ್ಲಿ ನೋಂದಣಾಧಿಕಾರಿ ಹಾಗೂ ಷೇರು ವರ್ಗಾವಣೆ ಏಜೆಂಟ್ಸ್ ಇವರನ್ನು ಸಂಪರ್ಕಿಸಬಹುದು:

ಶ್ರೀ.ಎಂ.ವಿ.ಆರ್.ಸುಬ್ರಹ್ಮಣ್ಯಂ
ಪ್ರಧಾನ ವ್ಯವಸ್ಥಾಪಕರು 
ಘಟಕ : ಸಿಂಡಿಕೇಟ್ ಬ್ಯಾಂಕ್ 
ಮೆ.ಕಾರ್ವಿ ಸೆಲೇನಿಯಂ ಟವರ್ ಬಿ
ಪ್ಲಾಟ್ ನಂ. : 31-32, ಗಾಚಿಬೌಲಿ,
ಹಣಕಾಸು ಜಿಲ್ಲೆ
ನಾನಕರಾಮಗುಡಾ, ಹೈದರಾಬಾದ್ – 500032
ದೂರವಾಣಿ 040 - 67162222 ಅಥವಾ 040 - 67161516 (ಕಚೇರಿ)
ಫ್ಯಾಕ್ಸ್ ನಂ.: 04023001153
ಶುಲ್ಕ ರಹಿತ ಕರೆ.: 1800-345-4001
ಇಮೇಲ್ ಐಡಿ: shastry.mvn@karvy.comsrikrishna.p@karvy.com

ಎಲೆಕ್ಟ್ರಾನಿಕ್ ಕ್ಲಿಯರಿಂಗ್ ಸರ್ವೀಸ್ (ಇಸಿಎಸ್) ಮೂಲಕ ಲಾಭಾಂಶ ಪಾವತಿ, ಲಾಭಾಂಶ ನೀಡಲು ಅಗತ್ಯವಾದ ಬ್ಯಾಂಕ್ ವಿವರಗಳನ್ನು ಸೇರಿಸಲು, ನಾಮನಿರ್ದೇಶನ ಸೌಲಭ್ಯ, ಷೇರು ಪ್ರಮಾಣಪತ್ರಗಳ ನಕಲು ಪ್ರತಿಗಳು, ಲಾಭಾಂಶ ಪಾವತಿ ಹಾಗೂ ಮರುಪಾವತಿ ಆದೇಶಗಳು, ಇತ್ಯಾದಿ ಹಾಗೂ ಮರು ದೃಢೀಕರಣ ಮೂಲಕ ಲಾಭಾಂಶ ರವಾನೆ ಸೌಲಭ್ಯಗಳನ್ನು ಪಡೆಯಲು ಷೇರುದಾರರು ನಮ್ಮ ನೋಂದಣಾಧಿಕಾರಿಗಳನ್ನು ಸಂಪರ್ಕಿಸಬಹುದು.

ಭೌತಿಕ ಸ್ವರೂಪದ ಷೇರುಗಳನ್ನು ಹೊಂದಿದ ಷೇರುದಾರರು ತಮ್ಮ ವಿಳಾಸದಲ್ಲಿ ಬದಲಾವಣೆ ಇದ್ದಲ್ಲಿ ಈ ಕೆಳಗಿನವುಗಳನ್ನು ಸಲ್ಲಿಸುವ ಮೂಲಕ ನಮ್ಮ ದಾಖಲೆಗಳನ್ನು ನವೀಕರಿಸಲು ಕೋರಲಾಗಿದೆ:

1. ಇತ್ತೀಚಿನ ವಿಳಾಸವಿರುವ, ಸಹಿ ಮಾಡಿರುವ ವಿನಂತಿ ಪತ್ರವನ್ನು ಕಳಿಸುವುದು 
2. ಪಾನ್ ಕಾರ್ಡ್ ನಕಲು ಪ್ರತಿಯನ್ನು ಸ್ವಯಂ ದೃಢೀಕರಿಸಿ ಸಹಿ ಮಾಡಿ ಸಲ್ಲಿಸುವುದು 
3. ಸ್ವಯಂ ದೃಢೀಕರಿಸಲಾದ ವಿಳಾಸದ ಪುರಾವೆಯ ಪ್ರತಿ (ಇತ್ತೀಚಿನ ದೂರವಾಣಿ ಬಿಲ್ / ವಿದ್ಯುಚ್ಛಕ್ತಿಯ ಬಿಲ್ / ಪಾಸ್‌ಪೋರ್ಟ್ / ಮತದಾರರ ಗುರುತಿನ ಚೀಟಿ / ಪಡಿತರ ಚೀಟಿ / ವಾಹನ ಚಾಲನಾ ಪರವಾನಗಿ / ದೃಢೀಕರಿಸಿದ ಬ್ಯಾಂಕ್ ವಿವರದ ಪ್ರತಿ ಇತ್ಯಾದಿ)

ಭೌತಿಕ ಸ್ವರೂಪದ ಷೇರುಗಳನ್ನು ಹೊಂದಿದ ಷೇರುದಾರರು ಸ್ವಯಂ ದೃಢೀಕರಿಸಿದ ಪಾನ್ ಕಾರ್ಡ್ ಹಾಗೂ ರದ್ದು ಮಾಡಲಾದ ಒಂದು ಚೆಕ್ಕಿನ ಹಾಳೆಯನ್ನು ಇಸಿಎಸ್ ನಮೂನೆಯ ಜೊತೆಗೆ (ಡೌನ್‌ಲೋಡ್ ಮಾಡಲು ಲಭ್ಯವಿದೆ) ನಮ್ಮ ಕಚೇರಿಗೆ ಸಲ್ಲಿಸುವ ಮೂಲಕ ಬ್ಯಾಂಕ್ ಖಾತೆಯ ವಿವರಗಳನ್ನು ನವೀಕರಿಸಬಹುದು
ವಿದ್ಯುನ್ಮಾನ ಸ್ವರೂಪದಲ್ಲಿ ಷೇರುಗಳನ್ನು ಹೊಂದಿದ ಷೇರುದಾರರು ವಿಳಾಸ ಬದಲಾವಣೆ, ಬ್ಯಾಂಕ್ ಖಾತೆಯ ವಿವರಗಳನ್ನು ನವೀಕರಿಸಲು ಹಾಗೂ ತಮ್ಮ ಖಾತೆಗಳಿಗೆ ಬ್ಯಾಂಕಿನ ಲಾಭಾಂಶವನ್ನು ನೇರ ಕ್ರೆಡಿಟ್ ಮಾಡುವ ಸೌಲಭ್ಯವನ್ನು ಪಡೆದುಕೊಳ್ಳಲು ತಾವು ಡಿಮ್ಯಾಟ್ ಖಾತೆಯನ್ನು ಹೊಂದಿರುವ ಡಿಪಿ ಯನ್ನು ಸಂಪರ್ಕಿಸಲು ಕೋರಲಾಗಿದೆ.
ಷೇರುದಾರರು ನಾಮನಿರ್ದೇಶನದ ಸೌಲಭ್ಯವನ್ನೂ ಪಡೆದುಕೊಳ್ಳಬಹುದು. ಭೌತಿಕ ಸ್ವರೂಪದ ಷೇರುಗಳನ್ನು ಹೊಂದಿದ ಷೇರುದಾರರು ಸ್ವಯಂ ದೃಢೀಕರಿಸಿದ ಪಾನ್ ಕಾರ್ಡಿನ ಪ್ರತಿಯೊಂದಿಗೆ ಸೂಕ್ತವಾಗಿ ಭರ್ತಿ ಮಾಡಿದ ನಾಮನಿರ್ದೇಶನದ ನಮೂನೆಯನ್ನು (ಡೌನ್‌ಲೋಡ್ ಮಾಡಲು ಲಭ್ಯವಿದೆ) ನಕಲು ಪ್ರತಿಯೊಂದಿಗೆ ನಮ್ಮ ಕಚೇರಿಗೆ ಸಲ್ಲಿಸುವ ಮೂಲಕ ನಾಮನಿರ್ದೇಶನದ ಸೌಲಭ್ಯಕ್ಕೆ ನೋಂದಣಿ ಮಾಡಿಕೊಳ್ಳಬಹುದು. ವಿದ್ಯುನ್ಮಾನ ಸ್ವರೂಪದಲ್ಲಿ ಷೇರುಗಳನ್ನು ಹೊಂದಿದ ಷೇರುದಾರರು ನಾಮನಿರ್ದೇಶನದ ಸೌಲಭ್ಯಕ್ಕೆ ನೋಂದಣಿ ಮಾಡಿಕೊಳ್ಳಲು ತಮ್ಮ ಡಿಪಿ ಯನ್ನು ಸಂಪರ್ಕಿಸಲು ಕೋರಲಾಗಿದೆ.

ಪಟ್ಟಿಗಳು: ಸಿಂಡಿಕೇಟ್ ಬ್ಯಾಂಕ್ ಸ್ಟಾಕ್ ಮಾರುಕಟ್ಟೆಯಲ್ಲಿ ಸಕ್ರಿಯವಾದ ವಹಿವಾಟಾಗಿದೆ. ಹಾಗೂ ಮುಂಬೈ ನ ಸ್ಟಾಕ್ ಎಕ್ಸಚೇಂಜ್ ನ “ಎ” ಶ್ರೇಣಿಯ ಗುಂಪಿನಲ್ಲಿ ಗುರುತಿಸಿಕೊಂಡಿದೆ. ಬ್ಯಾಂಕು ಹಣಕಾಸು ವರ್ಷ 2010-11 ರಲ್ಲಿ ಸ್ಟಾಕ್ ಎಕ್ಸಚೇಂಜ್ ಪಟ್ಟಿಯ ವಾರ್ಷಿಕ ಶುಲ್ಕವನ್ನು ಪಾವತಿಸಿದೆ. ಸಿಂಡಿಕೇಟ್ ಬ್ಯಾಂಕು ಈ ಕೆಳಗಿನ ಸ್ಟಾಕ್ ಎಕ್ಸಚೇಂಜ್ ಗಳ ಪಟ್ಟಿಯಲ್ಲಿ ಗುರುತಿಸಿಕೊಂಡಿದೆ.

ನ್ಯಾಷನಲ್ ಸ್ಟಾಕ್ ಎಕ್ಸಚೇಂಜ್ ಆಫ್ ಇಂಡಿಯಾ ಲಿಮಿಟೆಡ್  
ಎಕ್ಸಚೇಂಜ್ ಪ್ಲಾಜಾ 
ಬಾಂದ್ರಾ – ಕುರ್ಲಾ ಸಂಕೀರ್ಣ 
ಬಾಂದ್ರಾ (ಪೂರ್ವ), ಮುಂಬೈ - 400 051.  
ದೂರವಾಣಿ : 022-2659 8100, 26598235 / 36.  
ಫ್ಯಾಕ್ಸ್ : 022-2659 8237 / 38.
ಇಮೇಲ್ : cmlist@nse.co.in 
ಜಾಲತಾಣ : www.nseindia.com 

ಬಾಂಬೆ ಸ್ಟಾಕ್ ಎಕ್ಸಚೇಂಜ್ ಲಿಮಿಟೆಡ್ 
ಫಿರೋಜ್ ಜೀಜೀಭಾಯ್ ಟವರ್ಸ್ 
ದಲಾಲ್ ಸ್ಟ್ರೀಟ್, ಫೋರ್ಟ್ 
ಮುಂಬೈ - 400 001.  
ದೂರವಾಣಿ : 022-22721234, 022-2272 1233.  
ಫ್ಯಾಕ್ಸ್ : 022-2272 2041 / 39 / 37 / 61.  
ಇಮೇಲ್ : listing@bseindia.com 
ಜಾಲತಾಣ : www.bseindia.com 

 

ಪ್ರಸ್ತುತ ಘೋಷಣೆಗಳು / ಪ್ರಕಟಣೆಗಳು

 

ಸಭೆಗಳು

ಮಂಡಳಿಯ ನಿರ್ದೇಶಕರ ಸಭೆ

ಸಾಮಾನ್ಯ ಸದಸ್ಯರ ವಾರ್ಷಿಕ ಮಹಾಸಭೆ

 

ವಿಶೇಷ ಸಾಮಾನ್ಯ ಸಭೆ

 

ಕಾರ್ಪೊರೇಟ್ ಆಡಳಿತ

 

ಷೇರುಗಳನ್ನು ಹೊಂದುವ ವಿಧಾನ

 

ವಾರ್ಷಿಕ ಅನುಪಾಲನಾ ವರದಿ

 

ವಾರ್ಷಿಕ ವರದಿ

 

ಸೇವೆಗಳು – ಡಿಬೆಂಚರುಗಳು, ಟ್ರಸ್ಟಿಗಳು

 

ಷೇರುದಾರರ ಸಂತೃಪ್ತಿಯ ಬಗ್ಗೆ ಸಮೀಕ್ಷೆ

ಡೌನ್‌ಲೋಡ್‌ಗಳು

 

ಅಭೌತೀಕರಣದ ಸ್ಥಿತಿಗತಿ

ಸೆಬಿ ನೀಡಿದ ನಿರ್ದೇಶನದ ಅನುಗುಣವಾಗಿ, ಜೂನ್ 26, 2000 ರಿಂದ ಜಾರಿಗೆ ಬರುವಂತೆ, ನಮ್ಮ ಬ್ಯಾಂಕಿನ ಷೇರುಗಳನ್ನು. ಅಭೌತಿಕ ರೂಪದಲ್ಲಿ ವ್ಯವಹರಿಸುವಂತೆ ಎಲ್ಲಾ ಹೂಡಿಕೆದಾರರಿಗೆ ಕಡ್ಡಾಯ ಮಾಡಲಾಗಿದೆ. ಇದು ಉತ್ತಮ ರಕ್ಷಣೆ ಮತ್ತು ದ್ರವ್ಯತೆಯನ್ನು ಷೇರುದಾರರಿಗೆ ಒದಗಿಸುತ್ತದೆ.
ನ್ಯಾಷನಲ್ ಸೆಕ್ಯೂರಿಟೀಸ್ ಡಿಪಾಸಿಟರಿ ಲಿಮಿಟೆಡ್ (ಎನ್ ಎಸ್ ಡಿ ಎಲ್) ಹಾಗೂ ಸೆಂಟ್ರಲ್ ಡಿಪಾಸಿಟರಿ ಸರ್ವಿಸಸ್ (ಇಂಡಿಯಾ) ಲಿಮಿಟೆಡ್, ಇವುಗಳೊಂದಿಗೆ ಅಭೌತಿಕ ಷೇರುಗಳನ್ನು ವ್ಯವಹರಿಸುವ ಕಂಪನಿಯಾಗಿ ಬ್ಯಾಂಕು ಒಪ್ಪಂದ ಮಾಡಿಕೊಂಡಿದೆ.
ನಮ್ಮ ನೋಂದಣಾಧಿಕಾರಿ ಮತ್ತು ಷೇರು ವರ್ಗಾವಣಾ ಏಜೆಂಟರಿಗೆ ಆಯಾ ಠೇವಣಿದಾರರು ಷೇರುಗಳನ್ನು ಅಭೌತೀಕರಣಗೊಳಿಸಲು ಕೋರಿಕೊಳ್ಳಬಹುದು
30.09.2014 ರಷ್ಟು ಅವಧಿಗೆ 96.32% ರಷ್ಟು ಷೇರುಗಳನ್ನು ಅಭೌತೀಕರಣಗೊಳಿಸಲಾಗಿದೆ.
longbanambition

ಹಕ್ಕುತ್ಯಾಗ: ಈ ಜಾಲತಾಣದ ವಿಷಯ ಕೇವಲ ಮಾಹಿತಿ ಹಂಚಿಕೆಗಾಗಿ. ಯಾವುದೇ ರೀತಿಯ ವ್ಯವಹಾರಕ್ಕಾಗಿ ಆಕರ್ಷಿಸಲು ರೂಪಿಸಿದ್ದಲ್ಲ.

2015 ಸಿಂಡಿಕೇಟ್ ಬ್ಯಾಂಕ್ . ಎಲ್ಲ ಹಕ್ಕುಗಳನ್ನೂ ಕಾಯ್ದಿರಿಸಲಾಗಿದೆ     1280 x 800 ರಲ್ಲಿ ಈ ಜಾಲತಾಣವನ್ನು ಉತ್ತಮವಾಗಿ ವೀಕ್ಷಿಸಬಹುದು