Syndicate Bank
banner
 

ವಿಕಾಸ್ ನಗದು ಸರ್ಟಿಫಿಕೇಟ್

ಹಣವನ್ನು ದ್ವಿಗುಣಗೊಳಿಸುವ ಯೋಜನೆ - ವಿಕಾಸ್ ನಗದು ಸರ್ಟಿಫಿಕೇಟ್ ಬಡ್ಡಿಗೆ ಬಡ್ಡಿಯನ್ನು ಗಳಿಸುತ್ತಾ ಅವಧಿ ಮುಕ್ತಾಯದ ಆನಂತರ ಗಣನೀಯ ಮೊತ್ತವನ್ನು ಒದಗಿಸುವ ಅನುಕೂಲಕರ ಮತ್ತು ಆಕರ್ಷಕ ಮರುಹೂಡಿಕೆ ಯೋಜನೆ. ಭವಿಷ್ಯದಲ್ಲಿ ದೊಡ್ಡ ಅವಶ್ಯಕತೆಗಳಾದ ಮಕ್ಕಳ ವಿದ್ಯಾಭ್ಯಾಸ, ಮದುವೆ, ಮನೆ ಖರೀದಿ, ಇತ್ಯಾದಿಗಳಿಗೆ ಇದು ಒಂದು ಮಾದರಿ ಯೋಜನೆ.

ಈ ಯೋಜನೆಯ ಪ್ರಮುಖ ಅಂಶಗಳು:

  • bulletಕನಿಷ್ಠ ಠೇವಣಿ ರೂ.1000/- ಮತ್ತು ರೂ.100/- ರ ಗುಣಕಗಳು.
  • bulletಠೇವಣಿಯ ಅವಧಿಯು 6 ತಿಂಗಳಿಂದ ತ್ರೈಮಾಸಿಕ ಅವಧಿಯಂತೆ 10 ವರ್ಷಗಳ ವರೆಗೆ.
  • bullet ಮೂರು ತಿಂಗಳಿಗೊಮ್ಮೆ ಬಡ್ಡಿಗೆ ಬಡ್ಡಿಯನ್ನು ಸೇರಿಸಲಾಗುತ್ತದೆ.
  • bullet ಬ್ಯಾಂಕಿನ ಸಿಬ್ಬಂದಿ ಮತ್ತು ಹಿರಿಯ ನಾಗರಿಕರು ಅನ್ವಯಿಸುವ ನಿಯಮಗಳೊಂದಿಗೆ ಹೆಚ್ಚಿನ ಬಡ್ಡಿಗೆ ಅರ್ಹರಿರುತ್ತಾರೆ.
  • bullet ನಿಗದಿತ ದಂಡದೊಂದಿಗೆ ಠೇವಣಿಯನ್ನು ಅವಧಿಪೂರ್ವವಾಗಿ ಹಿಂಪಡೆಯಲು ಅನುಮತಿ ಇದೆ.
  • bullet ಠೇವಣಿಯ ಉಳಿಕೆ ಅವಧಿ ಕೊನೆಗೊಳ್ಳುವ ಆಧಾರದ ಮೇಲೆ ಗರಿಷ್ಟ 95% ವರೆಗೆ ಸಾಲ ಪಡೆದುಕೊಳ್ಳಬಹುದು.
  • bullet ನಾಮನಿರ್ದೇಶನದ ಸೌಲಭ್ಯ ದೊರೆಯುತ್ತದೆ.
  • bulletಠೇವಣಿಯ ಮೇಲಿನ ಬಡ್ಡಿಯ ದರವನ್ನು ಕಾಲ ಕಾಲಕ್ಕೆ ಬ್ಯಾಂಕು ನಿಗದಿ ಪಡಿಸುತ್ತದೆ.

longbanner

ಹಕ್ಕುತ್ಯಾಗ: ಈ ಜಾಲತಾಣದ ವಿಷಯ ಕೇವಲ ಮಾಹಿತಿ ಹಂಚಿಕೆಗಾಗಿ. ಯಾವುದೇ ರೀತಿಯ ವ್ಯವಹಾರಕ್ಕಾಗಿ ಆಕರ್ಷಿಸಲು ರೂಪಿಸಿದ್ದಲ್ಲ.

2015 ಸಿಂಡಿಕೇಟ್ ಬ್ಯಾಂಕ್ . ಎಲ್ಲ ಹಕ್ಕುಗಳನ್ನೂ ಕಾಯ್ದಿರಿಸಲಾಗಿದೆ     1280 x 800 ರಲ್ಲಿ ಈ ಜಾಲತಾಣವನ್ನು ಉತ್ತಮವಾಗಿ ವೀಕ್ಷಿಸಬಹುದು