Syndicate Bank
banner
 

ಸಿಂಡ್ ಕಾರ್ಪೋರೇಟ್ ಸುವಿಧಾ ಠೇವಣಿ

 

ಸಿಂಡ್ ಕಾರ್ಪೋರೇಟ್ ಸುವಿಧಾ ಠೇವಣಿ ಯೋಜನೆ ಎನ್ನುವ ಹೊಸ ಯೋಜನೆಯನ್ನು ಪ್ರಾರಂಭಿಸುತ್ತಿರುವ ಬಗ್ಗೆ ನಿಮಗೆ ತಿಳಿಸಲು ಸಂತೋಷವೆನಿಸುತ್ತಿದೆ.

ಈ ಯೋಜನೆಯ ಪ್ರಮುಖ ಅಂಶಗಳು:

  • bullet ಠೇವಣಿಯ ಮೊತ್ತ:ಈ ಯೋಜನೆಯಲ್ಲಿ ಠೇವಣಿ ಇಡಲು ನಿಗದಿ ಪಡಿಸಲಾದ ಕನಿಷ್ಠ ಮೊತ್ತ ರೂ.500 ಲಕ್ಷಗಳು ಮತ್ತು ಹೆಚ್ಚುವರಿಯಾಗಿ ರೂ.100 ಲಕ್ಷದ ಗುಣಕಗಳಲ್ಲಿ.
  • bullet ಠೇವಣಿಯ ಅವಧಿ:7 ದಿನಗಳಿಂದ 180 ದಿನಗಳು.
  • bullet ಬಡ್ಡಿಯ ದರ:ಇತರೆ ದೇಶೀಯ ಠೇವಣಿಗಳಿಗೆ ಅನ್ವಯಿಸುವ ದರಗಳು. ಹೆಚ್ಚಿನ ಅಥವಾ ವಿಶೇಷ ದರಗಳನ್ನು ಕೊಡಲಾಗುವುದಿಲ್ಲ.
  • bullet ನೀಡಲಾಗುವ ಬಡ್ಡಿ:ತ್ರೈಮಾಸಿಕ ಅವಧಿಗೊಮ್ಮೆ ನಿಗದಿತ ಸರಳ ಬಡ್ಡಿಯನ್ನು ನೀಡಲಾಗುವುದು.
  • bullet ಅವಧಿಪೂರ್ವ ಹಿಂಪಡೆತ.
  • bulletಕನಿಷ್ಠ ಬಾಕಿ ರೂ.5 ಕೋಟಿಗೆ ಮಿಕ್ಕ ಮೊತ್ತವನ್ನು ಒಂದು ದಿನದ ಮುಂಚಿತ ಸೂಚನೆಯ ಮೇರೆಗೆ ರೂ. 100 ಲಕ್ಷದ ಗುಣಕಗಳಲ್ಲಿ ಹಿಂಪಡೆತಕ್ಕೆ ಅನುಮತಿಯಿದೆ.
  • bulletಎಷ್ಟು ಸಲ ಹಿಂಪಡೆಯಬೇಕು ಎನ್ನುವುದಕ್ಕೆ ಯಾವುದೇ ನಿರ್ಬಂಧವಿಲ್ಲ.
  • bullet ಈ ರೀತಿಯ ಭಾಗಶಃ ಹಿಂಪಡೆದ ಠೇವಣಿಯು ಬ್ಯಾಂಕಿನಲ್ಲಿ ಉಳಿದಿದ್ದ ಅವಧಿಗೆ ಠೇವಣಿ ಸ್ವೀಕರಿಸುವ ಸಮಯದಲ್ಲಿ ಒಪ್ಪಿಕೊಂಡ ಬಡ್ಡಿದರದಂತೆ ಬಡ್ಡಿಗೆ ಅರ್ಹವಾಗಿರುತ್ತದೆ..
  • bullet ಠೇವಣಿಯ ಮೇಲೆ ಸಾಲ:ಬ್ಯಾಂಕಿನಲ್ಲಿ ಉಳಿದಿರುವ ಮೊತ್ತದ ಮೇಲೆ ಮಾತ್ರ ಠೇವಣಿ ಆಧಾರಿತ ಸಾಲ ಒದಗಿಸಬಹುದು. ಯಾವುದೇ ಸಂದರ್ಭದಲ್ಲಿಯೂ ಠೇವಣಿ ಆಧಾರಿತ ಸಾಲದ ಮಿತಿ ಮೀರಿದ ಹಿಂಪಡೆತವನ್ನು ಅನುಮತಿಸಲಾಗುವುದಿಲ್ಲ.
longbanner

ಹಕ್ಕುತ್ಯಾಗ: ಈ ಜಾಲತಾಣದ ವಿಷಯ ಕೇವಲ ಮಾಹಿತಿ ಹಂಚಿಕೆಗಾಗಿ. ಯಾವುದೇ ರೀತಿಯ ವ್ಯವಹಾರಕ್ಕಾಗಿ ಆಕರ್ಷಿಸಲು ರೂಪಿಸಿದ್ದಲ್ಲ.

2015 ಸಿಂಡಿಕೇಟ್ ಬ್ಯಾಂಕ್ . ಎಲ್ಲ ಹಕ್ಕುಗಳನ್ನೂ ಕಾಯ್ದಿರಿಸಲಾಗಿದೆ     1280 x 800 ರಲ್ಲಿ ಈ ಜಾಲತಾಣವನ್ನು ಉತ್ತಮವಾಗಿ ವೀಕ್ಷಿಸಬಹುದು