Syndicate Bank
banner
 

ಹಿರಿಯ ನಾಗರಿಕರ ಭದ್ರತಾ ಠೇವಣಿ

 

ಇದೊಂದು ಅತೀ ಹೆಚ್ಚು ಲಾಭದಾಯಕ, ಮೌಲ್ಯವರ್ಧಿತ , ವಿಶೇಷವಾಗಿ ನಮ್ಮೆಲ್ಲರ ಗೌರವಯುತ ಹಿರಿಯ ನಾಗರಿಕರಿಗೆಂದೇ (60 ವರ್ಷ ವಯಸ್ಸಿಗೆ ಮೇಲ್ಪಟ್ಟವರು) ರೂಪಿತವಾದ ಯೋಜನೆ, ಈ ಯೋಜನೆಯು ನಿಜವಾಗಿ ರೂಪುರೇಷೆಯಲ್ಲಿ ವಿಶೇಷವಾಗಿದ್ದು ಇತರೆ ಅನೇಕ ಮೌಲ್ಯವರ್ಧಿತ ಸೇವೆಗಳೊಂದಿಗೆ ಸಾಮಾನ್ಯ ಬಡ್ಡಿದರಕ್ಕಿಂತ 0.5% ಹೆಚ್ಚಿನ ಬಡ್ಡಿಯನ್ನು ಒದಗಿಸುತ್ತದೆ.

ಈ ಯೋಜನೆಯ ಪ್ರಮುಖ ಅಂಶಗಳು:

  • bulletಕನಿಷ್ಠ ಠೇವಣಿ ರೂ.1000/-
  • bullet ಠೇವಣಿಯ ಅವಧಿ 12 ರಿಂದ 120 ತಿಂಗಳುಗಳು.
  • bulletಸಾಮಾನ್ಯ ಬಡ್ಡಿಯ ದರಕ್ಕಿಂತ 0.5% ಅಧಿಕ ಬಡ್ಡಿ
  • bullet ಬಡ್ಡಿಯನ್ನು ತಿಂಗಳಿಗೊಮ್ಮೆ (ಕಡಿತಗೊಳಿಸಿದ ದರದಲ್ಲಿ) ಅಥವಾ ಮೂರು ತಿಂಗಳಿಗೊಮ್ಮೆ ನೀಡಲಾಗುವುದು.
  • bullet ಯಾವುದೇ ದಂಡ ವಿಧಿಸದೆ ಠೇವಣಿಯನ್ನು ಅವಧಿಪೂರ್ವಕವಾಗಿ ಹಿಂಪಡೆಯಲು ಅವಕಾಶವಿದೆ. ಆದರೆ, 12 ತಿಂಗಳೊಳಗೇ ಮುಚ್ಚಿದ ಖಾತೆಯು ಹೆಚ್ಚುವರಿ 0.5% ಬಡ್ಡಿಗೆ ಅರ್ಹವಾಗಿರುವುದಿಲ್ಲ.
  • bullet ಉಳಿತಾಯ ಖಾತೆಯಲ್ಲಿ ನಿಯಮಿತವಾಗಿ ನಿಗದಿ ಪಡಿಸಿದ ಕನಿಷ್ಠ ಮೊತ್ತವನ್ನು ಉಳಿಸಿಕೊಳ್ಳಬೇಕೆನ್ನುವ ನಿಯಮದಿಂದ ವಿನಾಯಿತಿಯಿದೆ.
  • bulletನಿಗದಿತ ಮಿತಿಯೊಳಗಿನ ಮೊತ್ತವನ್ನು ಬ್ಯಾಂಕಿನ ಇತರೆ ಶಾಖೆಗಳಿಗೆ ಉಚಿತವಾಗಿ ಹಣ ಕಳಿಸುವ ಸೌಲಭ್ಯವಿದೆ.
  • bullet ನಾಮನಿರ್ದೇಶನದ ಸೌಲಭ್ಯ ದೊರೆಯುತ್ತದೆ.
  • bulletಬಡ್ಡಿಯ ದರಬದಲಾವಣೆಗೆ ಅಧೀನವಾಗಿರುತ್ತವೆ ಮತ್ತು ಕಾಲ ಕಾಲಕ್ಕೆ ಬ್ಯಾಂಕಿನಿಂದ ನಿಗದಿಪಡಿಸಲಾಗುತ್ತದೆ.

longbanner

ಹಕ್ಕುತ್ಯಾಗ: ಈ ಜಾಲತಾಣದ ವಿಷಯ ಕೇವಲ ಮಾಹಿತಿ ಹಂಚಿಕೆಗಾಗಿ. ಯಾವುದೇ ರೀತಿಯ ವ್ಯವಹಾರಕ್ಕಾಗಿ ಆಕರ್ಷಿಸಲು ರೂಪಿಸಿದ್ದಲ್ಲ.

2015 ಸಿಂಡಿಕೇಟ್ ಬ್ಯಾಂಕ್ . ಎಲ್ಲ ಹಕ್ಕುಗಳನ್ನೂ ಕಾಯ್ದಿರಿಸಲಾಗಿದೆ     1280 x 800 ರಲ್ಲಿ ಈ ಜಾಲತಾಣವನ್ನು ಉತ್ತಮವಾಗಿ ವೀಕ್ಷಿಸಬಹುದು