Syndicate Bank
banner
 

ಮ್ಯೂಚುಯಲ್ ಫಂಡ್ ಸೇವೆಗಳು

 
banner
 

ಹಣಕಾಸಿನ ಸೂಪರ್ ಮಾರ್ಕೆಟ್ ರೀತಿಯಲ್ಲಿ ಕಾರ್ಯ ನಿರ್ವಹಿಸಲು ಬ್ಯಾಂಕ್ ಕಾರ್ಪೊರೇಟ್ ವಿತರಕರಾಗಿ ಈ ಕೆಳಗಿನ ಮ್ಯೂಚುಯಲ್ ಫಂಡ್ ಅಸೆಟ್ ಮ್ಯಾನೇಜ್ ಮೆಂಟ್ ಕಂಪನಿ (ಎ ಎಂ ಸಿ) ಗಳೊಂದಿಗೆ ಕೈ ಜೋಡಿಸಿದೆ

 1. 1. ಬಿರ್ಲಾ ಸನ್ ಲೈಫ್ ಅಸೆಟ್ ಮ್ಯಾನೇಜ್ ಮೆಂಟ್ ಕಂಪನಿ ಲಿಮಿಟೆಡ್
 2. 2. ಡಿ ಎಸ್ ಪಿ ಬ್ಲಾಕ್ ರಾಕ್ ಇನ್ವೆಸ್ಟ್ ಮೆಂಟ್ ಮ್ಯಾನೇಜರ್ಸ್ ಪ್ರೈವೇಟ್ ಲಿಮಿಟೆಡ್
 3. 3. ಫ್ರಾಂಕ್ಲಿನ್ ಟೆಂಪಲ್ಟನ್ ಅಸೆಟ್ ಮ್ಯಾನೇಜ್ ಮೆಂಟ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್
 4. 4. ಹೆ ಡಿ ಎಫ್ ಸಿ ಅಸೆಟ್ ಮ್ಯಾನೇಜ್ ಮೆಂಟ್ ಕಂಪನಿ ಲಿಮಿಟೆಡ್
 5. 5. ಐ ಸಿ ಐ ಸಿ ಐ ಪ್ರುಡೆನ್ಷಿಯಲ್ ಅಸೆಟ್ ಮ್ಯಾನೇಜ್ ಮೆಂಟ್ ಕಂಪನಿ ಲಿಮಿಟೆಡ್
 6. 6. ಐ ಡಿ ಬಿ ಐ ಅಸೆಟ್ ಮ್ಯಾನೇಜ್ ಮೆಂಟ್ ಲಿಮಿಟೆಡ್
 7. 7. ರಿಲಾಯನ್ಸ್ ಕ್ಯಾಪಿಟಲ್ ಅಸೆಟ್ ಮ್ಯಾನೇಜ್ ಮೆಂಟ್ ಲಿಮಿಟೆಡ್
 8. 8. ಎಸ್ ಬಿ ಐ ಫಂಡ್ಸ್ ಮ್ಯಾನೇಜ್ ಮೆಂಟ್ ಪ್ರೈವೇಟ್ ಲಿಮಿಟೆಡ್
 9. 9. ಯು ಟಿ ಐ ಅಸೆಟ್ ಮ್ಯಾನೇಜ್ ಮೆಂಟ್ ಕಂಪನಿ ಪ್ರೈವೇಟ್ ಲಿಮಿಟೆಡ್

ವೈಶಿಷ್ಟ್ಯಗಳು ಮತ್ತು ಲಾಭ

 
banner
 

ಒಂದೇ ಸಾಮಾನ್ಯ ಗುರಿಯನ್ನು ಹೊಂದಿದ ಹಲವಾರು ಹೂಡಿಕೆದಾರರ ಉಳಿತಾಯವನ್ನು ಒಟ್ಟುಹಾಕುವಂಥ ಒಂದು ಟ್ರಸ್ಟ್ ಮ್ಯೂಚುಯಲ್ ಫಂಡ್. ಈ ರೀತಿ ಶೇಖರಣೆಯಾದ ಹಣವನ್ನು ಬೇರೆ ಬೇರೆ ರೀತಿಯ ಮಾರುಕಟ್ಟೆಯಲ್ಲಿ ಪ್ರಚಲಿತವಿರುವ ಸಾಧನಗಳಾದ ಷೇರುಗಳು, ಡಿಬೆಂಚರ್ ಗಳು ಮತ್ತು ಇತರ ಭದ್ರತಾ ಠೇವಣಿಗಳಲ್ಲಿ ಹೂಡಲಾಗುತ್ತದೆ. ಈ ಹೂಡಿಕೆಗಳ ಮೂಲಕ ಗಳಿಸಿದ ಆದಾಯ ಮತ್ತು ಬಂಡವಾಳ ಗಳಿಸಿದ ಬೆಲೆಯನ್ನು ಒಟ್ಟು ಸೇರಿಸಿ ಪ್ರತಿಯೊಬ್ಬರೂ ಹೊಂದಿದ ಯೂನಿಟ್ ಗಳ ಪ್ರಮಾಣದ ಆಧಾರದ ಮೇಲೆ ಹಂಚಲಾಗುತ್ತದೆ. ಆದ್ದರಿಂದ ಒಬ್ಬ ಸಾಮಾನ್ಯ ವ್ಯಕ್ತಿಗೆ ಮ್ಯೂಚುಯಲ್ ಫಂಡ್ ಬಹಳ ಸೂಕ್ತವಾದ ಹೂಡಿಕೆ.ಯಾಕೆಂದರೆ ಇದು ಬೇರೆ ಬೇರೆ ಕಡೆ, ವೃತ್ತಿಪರವಾಗಿ ನಿರ್ವಹಿಸಲ್ಪಡುವ ಭದ್ರತೆಗಳಲ್ಲಿ ಆದರೆ, ತುಲನಾತ್ಮಕವಾಗಿ ಕಡಿಮೆ ವೆಚ್ಚದಲ್ಲಿ ಹೂಡಿಕೆ ಮಾಡಲು ಅವಕಾಶ ಒದಗಿಸುತ್ತದೆ.

 

ಅನುಕೂಲತೆಗಳು

“ನಿಮ್ಮ ಎಲ್ಲ ಮೊಟ್ಟೆಗಳನ್ನೂ ಒಂದೇ ಬಾಸ್ಕೆಟ್ ನಲ್ಲಿ ಇಡಬೇಡಿ” ಎನ್ನುವ ಗಾದೆಮಾತಿನಂತೆ ಬೇರೆ ಬೇರೆ ಸಾಧನಗಳಲ್ಲಿ ಹೂಡಿಕೆ ಮಾಡುವುದು ಒಂದೇ ಹೂಡಿಕೆಯಲ್ಲಿ ಇದ್ದಿದ್ದರೆ ಉಂಟಾಗುವ ಅಪಾಯವನ್ನು ಕಡಿಮೆ ಮಾಡುತ್ತದೆ.

ವೃತ್ತಿಪರ ಹೂಡಿಕೆ ನಿರ್ವಹಣೆ
ಆಸ್ತಿ ನಿರ್ವಹಣಾ ಕಂಪನಿಗಳನ್ನು (ಎ ಎಂ ಸಿ) ವಿಶೇಷವಾದ ಹೂಡಿಕೆ ಮಾಡುವ ವೃತ್ತಿಪರ ಹಣಕಾಸು ನಿರ್ವಾಹಕರು ನಿರ್ವಹಣೆ ಮಾಡುತ್ತಾರೆ.

ದ್ರವ್ಯತೆ (ಲಿಕ್ವಿಡಿಟಿ)
ತೆರೆದ ಕೊನೆಯಂತಿರುವ ಯೋಜನೆಗಳು ನಿರಂತರವಾಗಿ ಮಾರುವ ಮತ್ತು ಖರೀದಿಸುವ ಸೌಲಭ್ಯವನ್ನು ಒದಗಿಸುವ ಮೂಲಕ ದ್ರವ್ಯತೆ (ಲಿಕ್ವಿಡಿಟಿ) ಯನ್ನು ಒದಗಿಸುತ್ತವೆ. ಆದ್ದರಿಂದ ಹೂಡಿಕೆದಾರ ತನ್ನ ಹೂಡಿಕೆಯನ್ನು ಕೊಳ್ಳುವವರಿಗಾಗಿ ಹುಡುಕುವ ಬಗ್ಗೆ ಚಿಂತಿಸಬೇಕಾಗಿಲ್ಲ.

ಕಡಿಮೆ ವ್ಯಾವಹಾರಿಕ ಖರ್ಚು
ನಮಗೆಲ್ಲ ತಿಳಿದಿರುವಂತೆ, ನಾವೇನಾದರೂ ಸಗಟಿನಲ್ಲಿ ಖರೀದಿಸಿದರೆ, ಪ್ರಮಾಣದ ಅನುಸಾರ, ನಮಗೆ ಚಿಲ್ಲರೆ ಬೆಲೆಗಿಂತ ಉತ್ತಮ ಬೆಲೆ ದೊರೆಯುತ್ತದೆ. ಅದರಂತೆಯೇ, ಹೂಡಿಕೆಗಳನ್ನು ಮಾರುವಾಗ ಮತ್ತು ಖರೀದಿಸುವಾಗ, ಎ ಎಂ ಸಿ ಸಂಸ್ಥೆಗಳಿಗೆ ಚೌಕಾಶಿ ಮಾಡುವ ಅಧಿಕಾರವೂ ಮತ್ತು ಮಧ್ಯವರ್ತಿಗಳಿಗೆ ಉತ್ತಮ ಬೆಲೆ ಸಿಗುವಂತೆ ಚೌಕಾಶಿ ಮಾಡುವ ಸ್ಥಾನವೂ ದೊರೆಯುತ್ತವೆ

ಹೂಡಿಕೆ ಉತ್ಪನ್ನಗಳಲ್ಲಿನ ವಿಸ್ತಾರವಾದ ವಿವಿಧತೆ
ಹೂಡಿಕೆಯ ಉದ್ದೇಶಗಳು ಬೇರೆ ಬೇರೆಯಾಗಿರುವುದರಿಂದ, “ಒಂದು ಅಳತೆ ಎಲ್ಲರಿಗೂ ಸರಿಹೊಂದುತ್ತದೆ” ಎನ್ನುವ ತರ್ಕ ಸರಿ ಹೊಂದುವುದಿಲ್ಲ. ಆದ್ದರಿಂದ, ಹೂಡಿಕೆಯ ಉದ್ದೇಶ ಮತ್ತು ಅವಧಿಯನ್ನು ಆಧರಿಸಿ, ಹೂಡಿಕೆದಾರ ಮ್ಯೂಚುಯಲ್ ಫಂಡ್ ಯೋಜನೆಗಳ ಆಯ್ಕೆಗಳಲ್ಲಿ ಯಾವುದನ್ನು ಬೇಕಾದರೂ ಆಯ್ಕೆ ಮಾಡಿಕೊಳ್ಳಬಹುದು, ಉದಾ; ಇಕ್ವಿಟಿ, ಸಾಲ, ಮಾರುಕಟ್ಟೆಯಲ್ಲಿ ಹೂಡಿಕೆ, ಎ ಎಲ್ ಎಸ್ ಎಸ್, ಇತ್ಯಾದಿ.

ಹೊಂದಿಕೊಳ್ಳುವಿಕೆ
ಹೂಡಿಕೆದಾರರ ಹೂಡಿಕೆಯ ಉದ್ದೇಶಗಳಿಗೆ ಹೊಂದಿಕೊಳ್ಳುವಂತಹ ಹೂಡಿಕೆ ಯೋಜನೆಗಳ ಆಯ್ಕೆಯ ಅವಕಾಶವನ್ನು ಮ್ಯೂಚುಯಲ್ ಫಂಡ್ ಒದಗಿಸುತ್ತದೆ.

ಪಾರದರ್ಶಕತೆ
ಹೂಡಿಕೆದಾರರಿಗೆ ಅವರ ಹೂಡಿಕೆಯ ಬಗ್ಗೆ ವಾಸ್ತವ ವರದಿಗಳು, ಪ್ರಸ್ತಾಪ ದಾಖಲೆಗಳು, ವಾರ್ಷಿಕ ವರದಿ ಮತ್ತು ಪ್ರಚಾರ ವಸ್ತುಗಳು ತಿಳುವಳಿಕೆ ನೀಡುತ್ತವೆ.

ಸೂಕ್ತವಾಗಿ ನಿಯಂತ್ರಿಸಲಾಗುತ್ತದೆ
ಭಾರತದಲ್ಲಿನ ಮ್ಯೂಚುಯಲ್ ಫಂಡ್ ಗಳನ್ನು ಮತ್ತು ಮ್ಯೂಚುಯಲ್ ಫಂಡ್ ಸಂಸ್ಥೆಗಳ ಚಟುವಟಿಕೆಗಳನ್ನು ಸೆಬಿ ಮೇಲ್ವಿಚಾರಣೆ ಮಾಡುವ ಜೊತೆಗೆ ಅವನ್ನು ನಿಯಂತ್ರಿಸುತ್ತದೆ

ತೆರಿಗೆ ಲಾಭಗಳು
ಮ್ಯೂಚುಯಲ್ ಫಂಡ್ಸ್ (ಅಂದರೆ 65% ಗೂ ಅಧಿಕವಾಗಿ ಹೂಡಿಕೆಯಾದ ಇಕ್ವಿಟಿ ಯೋಜನೆಗಳಿಗೆ) ಗಳ ಇಕ್ವಿಟಿ ಯೋಜನೆಗಳು ಗಳಿಸಿದ ಲಾಭಾಂಶವು ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿರುತ್ತವೆ. ಮ್ಯೂಚುಯಲ್ ಫಂಡ್ ಸಂಸ್ಥೆಗಳು ಲಾಭ ಹಂಚಿಕೆಯ ಶುಲ್ಕ ನೀಡಬೇಕಾಗಿಲ್ಲ ಅಥವಾ ಹೂಡಿಕೆದಾರರು ಆದಾಯ ತೆರಿಗೆಯನ್ನು ನೀಡಬೇಕಾಗಿಲ್ಲ.

 

ಮ್ಯೂಚುಯಲ್ ಫಂಡ್ ನ ವಿಧಗಳು

ಸ್ವರೂಪದ ಆಧಾರದ ಮೇಲೆ ನಿರ್ಧಾರಿತ ವಿಧಗಳು

  ತೆರೆದ ಕೊನೆಯ ವಿಧ-
     ಈ ಯೋಜನೆಗಳು ಸ್ಥಿರವಾದ ಪರಿಪಕ್ವತೆಯನ್ನು ಹೊಂದಿರುವುದಿಲ್ಲ. ತೆರೆದ ಕೊನೆಯ ರೀತಿಯ ಫಂಡ್ ನ ಮಾರಾಟ ಮತ್ತು ಮರುಖರೀದಿಯ ಬೆಲೆಯನ್ನು ಘೋಷಣೆ ಮಾಡುವ ಮೂಲಕ ದ್ರವ್ಯತೆ ಇರುವಂತೆ ಖಾತರಿ ಪಡಿಸಲಾಗುತ್ತದೆ.

  ಮುಚ್ಚಿದ ಕೊನೆಯ ವಿಧ -
  ಈ ಯೋಜನೆಗಳು ಸ್ಥಿರವಾದ ಪರಿಪಕ್ವತೆಯನ್ನು ಹೊಂದಿರುತ್ತವೆ. ಹೂಡಿಕೆದಾರನ ಹಣವನ್ನು ಆ ಅವಧಿಗೆ ಕೂಡಿಹಾಕಲಾಗುತ್ತದೆ. ಕೆಲವೊಮ್ಮೆ, ಮುಚ್ಚಿದ ಕೊನೆಯ ವಿಧದ ಯೋಜನೆಗಳು ಕೆಲವು ನಿರ್ಧಿಷ್ಟ ಅವಧಿಗೆ ಅಥವಾ ಕೆಲವು ನಿರ್ಧಿಷ್ಟ ಅವಧಿಯ ನಂತರ ಹೂಡಿಕೆದಾರನಿಗೆ ಮರುಖರೀದಿಯ ಅವಕಾಶ ನೀಡುತ್ತವೆ. ಷೇರು ಮಾರುಕಟ್ಟೆಯಲ್ಲಿ ಪಟ್ಟಿ ಮಾಡುವ ಮೂಲಕ ಈ ಯೋಜನೆಗಳಲ್ಲಿ ದ್ರವ್ಯತೆಯನ್ನು ಒದಗಿಸಲಾಗುತ್ತದೆ.

ಹೂಡಿಕೆಯ ಉದ್ದೇಶಗಳ ಆಧಾರದ ಮೇಲೆ ನಿರ್ಧಾರಿತ ವಿಧಗಳು

  ಇಕ್ವಿಟಿ ಯೋಜನೆಗಳು -
  ಇಕ್ವಿಟಿ ಯೋಜನೆಗಳು ಪ್ರಮುಖವಾಗಿ ಷೇರುಗಳಲ್ಲಿ ಹೂಡಿಕೆ ಮಾಡುತ್ತವೆ. ಉದ್ದೇಶಗಳ ಆಧಾರದ ಮೇಲೆ, ಗಳಿಕೆಯ ಬೆಳವಣಿಗೆ ಹೆಚ್ಚಾಗಿರುವ ವೃದ್ಧಿಸುವ ಷೇರುಗಳ ಮೇಲೆ ಹೂಡಿಕೆ ಮಾಡಬಹುದು ಅಥವಾ ಮೌಲ್ಯಯುತ ಷೇರುಗಳ ಮೇಲೆ ಹೂಡಬಹುದು, ಇಲ್ಲಿ, ನಿಧಿ ನಿರ್ವಾಹಕರ ಪ್ರಕಾರ, ಮಾರುಕಟ್ಟೆಯ ಪ್ರಸಕ್ತ ಮೌಲ್ಯಮಾಪನಗಳು ನೈಜ ಮೌಲ್ಯವನ್ನು ಪ್ರತಿಬಿಂಬಿಸುವುದಿಲ್ಲ. :

   ವಿವಿಧ ರೀತಿಯ ಇಕ್ವಿಟಿ ಯೋಜನೆಗಳು:

   ವೈವಿಧ್ಯಗೊಳಿಸಿದ (ಬಂಡವಾಳವನ್ನು ಬೇರೆ ಬೇರೆ ಉದ್ಯಮಗಳಲ್ಲಿ ಹೂಡುವ) ನಿಧಿ:
   ಈ ನಿಧಿಗಳು ಬಂಡವಾಳವನ್ನು ಬೇರೆ ಬೇರೆ ಕ್ಷೇತ್ರಗಳ ಉದ್ಯಮಗಳಲ್ಲಿ ಮತ್ತು ಬಂಡವಾಳ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಅವಕಾಶವನ್ನು ಒದಗಿಸುತ್ತವೆ. ಇವು ಸಾಮಾನ್ಯವಾಗಿ ಒಂದೇ ನಿರ್ದಿಷ್ಟ ವಲಯಕ್ಕೆ ಸೀಮಿತವಾಗಿರದೆ ಮಾರುಕಟ್ಟೆಯಲ್ಲಿನ ಬೇರೆ ಬೇರೆ ವಲಯಗಳಲ್ಲಿ ಹೂಡಿಕೆ ಮಾಡಲು ಇಚ್ಚಿಸುವ ಹೂಡಿಕೆದಾರರಿಗಾಗಿ ಇರುವ ನಿಧಿಗಳು.

   ವಲಯ ನಿಧಿ
   ಈ ನಿಧಿಗಳು ಪ್ರಮುಖವಾಗಿ ಒಂದೇ ರೀತಿಯ ವ್ಯವಹಾರ ನಡೆಸುವ ಕಂಪನಿಗಳು ಅಥವಾ ಉದ್ಯಮಗಳಲ್ಲಿ ಹೂಡಿಕೆ ಮಾಡುತ್ತವೆ. ಈ ನಿಧಿಗಳು ಹೆಚ್ಚಿನ ಆದಾಯ ನೀಡಿದರೂ ವೈವಿಧ್ಯಗೊಳಿಸಿದ ನಿಧಿಗಳಿಗಿಂತ ಇವು ಅಪಾಯಕಾರಿಯಾಗಿರುತ್ತವೆ. ಹೂಡಿಕೆದಾರರು ಈ ವಲಯ / ಉದ್ಯಮಗಳ ಕಾರ್ಯನಿರ್ವಹಣೆಯನ್ನು ಜಾಗರೂಕತೆಯಿಂದ ನಿರೀಕ್ಷಿಸುತ್ತಿದ್ದು ಸೂಕ್ತ ಸಮಯದಲ್ಲಿ ಮಾರಾಟ ಮಾಡಬೇಕು.

   ಸೂಚ್ಯಂಕ ನಿಧಿ
   ಜನಪ್ರಿಯ ಷೇರು ಮಾರುಕಟ್ಟೆ ಸೂಚ್ಯಂಕ ವಿಧಗಳಾದ ಸಿಎನ್ಎಕ್ಸ್, ನಿಫ್ಟಿ ಸೂಚ್ಯಂಕ, ಮತ್ತು ಎಸ್ ಆ್ಯಂಡ್ ಪಿ, ಬಿಎಸ್ಇ ಸೆನ್ಸೆಕ್ಸ್ ಗಳಂತಹ ರೀತಿಯಲ್ಲಿಯೇ ಈ ನಿಧಿಗಳೂ ಸಹ ಹೂಡಿಕೆ ಮಾಡುತ್ತವೆ. ಮಾನದಂಡವಾಗಿ ಪರಿಗಣಿಸಿರುವ ಸೂಚ್ಯಂಕದ ಅನುಪಾತದ ಆಧಾರದ ಮೇಲೆ ಸೂಚ್ಯಂಕದ ನಿಧಿಯ ಮೌಲ್ಯ ಬದಲಾಗುತ್ತದೆ. ಇಂತಹ ಯೋಜನೆಗಳ ಎನ್ಎವಿ ಯ ಏರಿಳಿತವು ಸೂಚ್ಯಂಕದಲ್ಲಿನ ಏರಿಳಿತಕ್ಕೆ ಅನುಗುಣವಾಗಿರುತ್ತದೆ. ಮಾನದಂಡಕ್ಕೆ ಹೋಲಿಕೆ ಮಾಡಿದಲ್ಲಿ, ಇದು "ಟ್ರ್ಯಾಕಿಂಗ್ ದೋಷ" ಎಂಬ ಅಂಶದ ಕಾರಣದಿಂದ ಬದಲಾಗುತ್ತದೆ. .

   ಇಎಲ್ಎಸ್ಎಸ್ (ಇಕ್ವಿಟಿಯ ಸಹಯೋಗದ ಉಳಿತಾಯ ಯೋಜನೆ)
   ಇಕ್ವಿಟಿ ಸಹಯೋಗದ ಉಳಿತಾಯ ಯೋಜನೆಯು ಪ್ರಸ್ತುತ ಅಸ್ತಿತ್ವದಲ್ಲಿರುವ ಇಎಲ್ಎಸ್ಎಸ್ ಮಾರ್ಗದರ್ಶಿಯ ಅನುಗುಣವಾಗಿರುವ ಮ್ಯೂಚುಯಲ್ ಫಂಡ್ ಒದಗಿಸುತ್ತಿರುವ, ಒಂದು ತೆರೆದ-ಕೊನೆಯ ಇಕ್ವಿಟಿ ಬೆಳವಣಿಗೆಯ ಯೋಜನೆಯಾಗಿದೆ. ಈ ರೀತಿಯ ಯೋಜನೆಯ ಅಡಿಯಲ್ಲಿ ಮಾಡಿರುವ ಹೂಡಿಕೆಗಳು 3 ವರ್ಷಗಳ ಲಾಕ್-ಇನ್ ಅವಧಿಗೆ ಒಳಪಟ್ಟಿರುತ್ತವೆ ಹಾಗೂ ಹಣಕಾಸು ಕಾಯಿದೆ 2005 ರ ಪ್ರಕಾರ ರೂ.1,೦೦,೦೦೦ ದ ವರೆಗೆ ಆದಾಯ ನಿರ್ಣಯದ ಅನುಮತಿಯ ಲಾಭವೂ ಇರುತ್ತದೆ. ಇಎಲ್ಎಸ್ಎಸ್ ತೆರಿಗೆ ಉಳಿತಾಯ ಮತ್ತು ಬಂಡವಾಳ ಗಳಿಕೆಗಳ ಅನುಕೂಲವನ್ನು ಒದಗಿಸುತ್ತದೆ. ಇಎಲ್ಎಸ್ಎಸ್ ಅಡಿಯಲ್ಲಿ ಲಭ್ಯವಿರುವ ಪೂರ್ತಿ ಮಿತಿಯಷ್ಟು ಹಣವನ್ನು ಅಂದರೆ, ರೂ.1,00,00೦ ವನ್ನು ಹೂಡಿಕೆ ಮಾಡಿ ಸೆಕ್ಷನ್ 80ಸಿ ಯ ಪ್ರಯೋಜನ ಪಡೆಯಬಹುದು.

   ಇಎಲ್ಎಸ್ಎಸ್ ನ ಅನುಕೂಲಗಳು

   ಹೂಡಿಕೆ ಮಾಡಬಹುದು : ಇಕ್ವಿಟಿ ಮತ್ತು ಇಕ್ವಿಟಿ ಸಂಬಂಧಿ ಭದ್ರತೆಗಳಲ್ಲಿ 
   ಸೆಕ್ಷನ್ 80 ಸಿ : ಒಂದು ಲಕ್ಷದ ವರೆಗೆ ತೆರಿಗೆ ವಿನಾಯಿತಿ
   ಲಾಕ್-ಇನ್ ಅವಧಿ : 3 ವರ್ಷಗಳು (ಎಲ್ಲಾ ತೆರಿಗೆ ಉಳಿತಾಯದ ಸಾಧನಗಳಲ್ಲಿ ಅತೀ ಕಡಿಮೆ)
   ಆದಾಯ : ಅತೀ ಹೆಚ್ಚಿನ ಸಂಭವನೀಯತೆ 
   ಲಾಭ : ತೆರಿಗೆ ವಿನಾಯಿತಿ
   ತೆರಿಗೆ ಹೊಣೆಗಾರಿಕೆ : ಯಾವುದೂ ಇಲ್ಲ, ಯಾಕೆಂದರೆ, ಹೂಡಿಕೆ ಮೂರು ವರ್ಷಗಳ ನಂತರ ಬಿಡುಗಡೆಯಾಗುತ್ತದೆ.
   ಎಸ್ಐಪಿ : ಎಸ್ಐಪಿ ಯ ಮೂಲಕ ಸಣ್ಣ ಮೊತ್ತವನ್ನು ಹೂಡಿಕೆ ಮಾಡುವ ಹೊಂದಾಣಿಕೆ

  ಸಾಲ ಅಥವಾ ಆದಾಯ ಯೋಜನೆಗಳು
  ಈ ರೀತಿಯ ನಿಧಿಯು ಬಡ್ಡಿ ಬರುವ ಭದ್ರತಾ ಠೇವಣಿಗಳಲ್ಲಿ, ಮುಖ್ಯವಾಗಿ ಸರಕಾರಿ ಭದ್ರತಾ ಠೇವಣಿಗಳಲ್ಲಿ ಮತ್ತು ಕಾರ್ಪೊರೇಟ್ ಬಾಂಡ್ ಗಳಲ್ಲಿ ಹೂಡಿಕೆ ಮಾಡುತ್ತವೆ. ಈ ನಿಧಿಯು ಭದ್ರತಾ ಠೇವಣಿಗಳನ್ನು ಕೊಳ್ಳುವುದು ಮತ್ತು ಮಾರಾಟ ಮಾಡಿ ಅದರ ಮೇಲೆ ಬಡ್ಡಿ ಗಳಿಸುವ ಮೂಲಕ ಹೂಡಿಕೆದಾರರಿಗಾಗಿ ಆದಾಯವನ್ನು ಗಳಿಸುತ್ತದೆ. ಅಪಾಯಗಳನ್ನು ಗಮನಿಸಿದರೆ, ಈ ರೀತಿಯ ನಿಧಿಯ ಮೇಲಿನ ಹೂಡಿಕೆ ಕಡಿಮೆ ಅಪಾಯಕಾರಿ.

  ಹಣದ ಮಾರುಕಟ್ಟೆ ಯೋಜನೆಗಳು
  ಈ ಯೋಜನೆಗಳು ಸರಕಾರಿ, ಕಾರ್ಪೊರೇಟ್ ಅಥವಾ ಬ್ಯಾಂಕುಗಳ ಸಣ್ಣ ಅವಧಿಯ ಸಾಲದ ಸಾಧನಗಳ ಮೇಲೆ ಹೂಡಿಕೆ ಮಾಡುತ್ತವೆ. ಇವು ಸಾಮಾನ್ಯವಾಗಿ, ಸಣ್ಣ ಅವಧಿಯ ಹೂಡಿಕೆಗಳಾದ ಸಿ.ಪಿ ಗಳು, ಸಿ.ಡಿ ಗಳು, ಇತ್ಯಾದಿ.

ಹೈಬ್ರಿಡ್ ಯೋಜನೆಗಳು

  ಸಮತೋಲಿತ ಯೋಜನೆಗಳು
  ಸಮತೋಲಿತ ಯೋಜನೆಗಳು ಇಕ್ವಿಟಿ ಮತ್ತು ಸಾಲ ಎರಡರ ಮೇಲೂ ಹೂಡಿಕೆ ಮಾಡುತ್ತವೆ. ಸಾಲದ ಸಾಧನಗಳು ಮೂಲ ಬಡ್ಡಿಯ ಆದಾಯದ ಖಾತರಿ ಹೊಂದಿರುತ್ತವೆ, ಹಾಗೆಯೇ, ನಿಧಿ ನಿರ್ವಾಹಕರು ಅತೀ ಹೆಚ್ಚಿನ ಬಂಡವಾಳ ಗಳಿಕೆಯ ಆಶಯದಿಂದ ಇಕ್ವಿಟಿಗಳ ಮೇಲೆ ಹೂಡಿಕೆ ಮಾಡುತ್ತಾರೆ. ಆದರೂ, ನಷ್ಟವಾದಲ್ಲಿ, ಅದು ಮೂಲ ಬಡ್ಡಿಯ ಆದಾಯ ಮತ್ತು ಬಂಡವಾಳ ಎರಡನ್ನೂ ಕಳೆದುಕೊಳ್ಳಬಹುದು.

  ಪ್ರತಿ ತಿಂಗಳ ಆದಾಯದ ಯೋಜನೆಗಳು
  ಎಂಐಪಿ ಯೋಜನೆಗಳು ಹೆಚ್ಚಿನ ಪ್ರಮಾಣವನ್ನು ಸಾಲದ ಮೇಲೆ ಹೂಡಿಕೆ ಮಾಡುವ ಜೊತೆಗೆ ಸ್ವಲ್ಪ ಪ್ರಮಾಣದಲ್ಲಿ ಇಕ್ವಿಟಿಯ ಮೇಲೆ ಹೂಡಿಕೆ ಮಾಡಲು ಇಚ್ಚಿಸುವ ಸಾಂಪ್ರದಾಯಿಕ ಹೂಡಿಕೆದಾರರಿಗೆ ಸೂಕ್ತವಾದಂತಹ ಹೂಡಿಕೆಗಳು. ಈ ನಿಧಿಗಳು ಆದಾಯದ ಸ್ಥಿರತೆಯನ್ನು ಒದಗಿಸುವ ಗುರಿ ಹೊಂದಿರುವುದರಿಂದ ತಮ್ಮ ಬಂಡವಾಳದ ಹೆಚ್ಚಿನ ಪ್ರಮಾಣದ ಹೂಡಿಕೆಯನ್ನು ಸಾಲ ಮಾರುಕಟ್ಟೆ ಸಾಧನಗಳ ಮೇಲೆ ಹೂಡುವುದರ ಜೊತೆಗೆ ಸಣ್ಣ ಪ್ರಮಾಣದ ಬಂಡವಾಳವನ್ನು ಇಕ್ವಿಟಿಗಳ ಮೇಲೆ ಹೂಡುತ್ತವೆ. ಎಂಐಪಿಗಳು ಇಕ್ವಿಟಿಗಳ ಮೇಲೆಯೂ ಹೂಡಿಕೆ ಮಾಡುವುದರಿಂದ, ಬಂಡವಾಳದ ಭದ್ರತೆಯನ್ನು ಅಪೇಕ್ಷಿಸುವ, ಜೊತೆಗೆ ಬಂಡವಾಳದ ವೃದ್ಧಿಯನ್ನೂ ಅಪೇಕ್ಷಿಸುವ ಸಾಂಪ್ರದಾಯಿಕ ಹೂಡಿಕೆದಾರರಿಗೆ ಈ ಯೋಜನೆಗಳು ಸೂಕ್ತವಾಗಿವೆ. ಆದರೆ, ಪ್ರತಿ ತಿಂಗಳ ಆದಾಯದ ಭರವಸೆ ಇರುವುದಿಲ್ಲ.

ಕ್ರಮಬದ್ಧ ಯೋಜನೆ

  ಕ್ರಮಬದ್ಧ ಹೂಡಿಕೆ ಯೋಜನೆ (ಎಸ್ಐಪಿ)
  ಎಸ್ಐಪಿ ದೀರ್ಘಕಾಲದ ಅವಧಿಯಲ್ಲಿ ಶಿಸ್ತುಬದ್ಧ ರೀತಿಯಲ್ಲಿ ಸಂಪತ್ತು ಸಂಗ್ರಹಿಸಲು ಒಂದು ಅನುಕೂಲಕರ ಮಾರ್ಗವಾಗಿದೆ. ನೀವು ದೀರ್ಘ ಅವಧಿಗೆ ಸಣ್ಣ ಕಂತುಗಳಲ್ಲಿ ನಿಯಮಿತವಾಗಿ ಸ್ಥಿರ ಪ್ರಮಾಣದ ಹೂಡಿಕೆ ಮತ್ತು ತನ್ಮೂಲಕ ಸಂಪತ್ತು ಸಂಗ್ರಹಿಸಲು ಸಹಾಯವಾಗುತ್ತದೆ

  ಕ್ರಮಬದ್ಧ ಹಿಂಪಡೆತ ಯೋಜನೆ (ಎಸ್ ಡಬ್ಲೂ ಪಿ)
  ಈ ಯೋಜನೆಯಲ್ಲಿ, ಹೂಡಿಕೆದಾರರ ನಿಯತಕಾಲಿಕವಾಗಿ ಸ್ಥಿರ ಪ್ರಮಾಣದಲ್ಲಿ ಹಣವನ್ನು ಹಿಂಪಡೆಯಬಹುದು. ಎಸ್ ಡಬ್ಲೂ ಪಿ ಯು ಎಸ್ಐಪಿ ಒಂದು ಪ್ರತಿಬಿಂಬವಾಗಿದೆ. ಹೂಡಿಕೆದಾರರು ಮಾರುಕಟ್ಟೆ ಉತ್ತುಂಗದಲ್ಲಿ ಎಲ್ಲಾ ತಮ್ಮ ಘಟಕಗಳ ಖರೀದಿಮಾಡಲು ಹೇಗೆ ಬಯಸುವುದಿಲ್ಲವೋ ಅದೇ ರೀತಿ ಅವರು ತಮ್ಮ ಎಲ್ಲಾ ಘಟಕಗಳನ್ನು ಮಾರುಕಟ್ಟೆಯ ತೊಟ್ಟಿಯಲ್ಲಿ ಬಿಸಾಡಿದಂತೆ ಕಡಿಮೆ ಬೆಲೆಗೆ ಮಾರಲೂ ಬಯಸುವುದಿಲ್ಲ. ಆದ್ದರಿಂದ ಹೂಡಿಕೆದಾರರು ತಮ್ಮ ಘಟಕಗಳ ಮರುಖರೀದಿಯ ಸಮಯದಲ್ಲಿ ನಿರ್ಧಾರಿತ ಮೌಲ್ಯವನ್ನು ನೀಡುವ ಸುರಕ್ಷಿತ ಮಾರ್ಗ ಆಯ್ಕೆ ಮಾಡಬಹುದು

  ಕ್ರಮಬದ್ಧ ವರ್ಗಾವಣೆ ಯೋಜನೆ (ಎಸ್ ಟಿ ಪಿ)
  ಇದು ಎಸ್ ಡಬ್ಲೂ ಪಿ ಮತ್ತು ಎಸ್ ಐ ಪಿ ಗಳ ಸಂಯೋಜನೆಯಾಗಿದೆ. ಇದು ಅಸ್ತಿತ್ವದಲ್ಲಿರುವ ಒಂದು ಯೋಜನೆಗೆ ಎಸ್ ಡಬ್ಲೂ ಪಿ ಯಾಗಿದೆ ಮತ್ತು ಅದೇ ಮ್ಯೂಚುಯಲ್ ಫಂಡ್ ನ ಇನ್ನೊಂದು ಯೋಜನೆಗೆ ಎಸ್ ಐ ಪಿ (ಎಲ್ಲವನ್ನೂ ಒಟ್ಟುಗೂಡಿಸಿ) ಯಾಗಿದೆ.

  ಎಸ್ ಐ ಪಿ ಯ ಅನುಕೂಲಗಳು

   ಸಂಯೋಜನೆಯ ಸಾಮರ್ಥ್ಯ
   ನಿಮ್ಮ ಜೀವನದ ಹೆಚ್ಚಿನ ವೆಚ್ಚಗಳನ್ನು ಸರಿದೂಗಿಸಲು ಯುವ ವಯಸ್ಸಿನಲ್ಲೇ ಹೂಡಿಕೆ ಆರಂಭಿಸಲು ಎಸ್ ಐ ಪಿ ಸಹಾಯ ಮಾಡುತ್ತದೆ. ಒಂದು ಸಣ್ಣ ಮೊತ್ತದಲ್ಲಿ ಹಣವನ್ನು ನಿಯಮಿತವಾಗಿ ಉಳಿಸುವುದು ಅದಕ್ಕೆ ಸೇರುವ ಚಕ್ರಬಡ್ಡಿಯಿಂದ ಹೆಚ್ಚಿನ ಹಣ ಗಳಿಸುವ ಮೂಲಕ ಸಂಪತ್ತಿನ ಶೇಖರಣೆ ಮಾಡಲು ಗಮನಾರ್ಹ ಪರಿಣಾಮ ಬೀರುತ್ತದೆ.

   ರೂಪಾಯಿ ವೆಚ್ಚವನ್ನು ಸರಾಸರಿ ಮಾಡುವುದು
   ಎಸ್ಐಪಿ ಯಲ್ಲಿನ ಹೂಡಿಕೆಯು, ತ್ವರಿತವಾಗಿ ಬದಲಾಗುವ ಮಾರುಕಟ್ಟೆಯಲ್ಲಿ ಮಾಡುವ ಹೂಡಿಕೆಯಿಂದಾಗುವ ಪರಿಣಾಮಗಳನ್ನು ಕಡಿಮೆಗೊಳಿಸುತ್ತದೆ. ದೀರ್ಘಾವಧಿಯಲ್ಲಿ ಹೆಚ್ಚಿನ ಆದಾಯ ಉತ್ಪಾದಿಸುವ ಮೂಲಕ ನಿಮ್ಮ ವೆಚ್ಚವನ್ನು ಸರಾಸರಿ ಮಾಡುತ್ತದೆ. ಇದು ಭಾರೀ ಮೊತ್ತದ ಹೂಡಿಕೆಗಳನ್ನು ಸಂಬಂಧಿಸಿದ ಅಪಾಯವನ್ನು ತಗ್ಗಿಸುತ್ತದೆ. ಎನ್ ಎ ವಿ ಇಳಿತದ ಸಮಯದಲ್ಲಿ ಹೆಚ್ಚು ಮತ್ತು ಏರಿದಾಗ ಕಡಿಮೆ ಘಟಕಗಳು ದೊರೆಯುವುದರಿಂದ ಕಾಲಾನುಕ್ರಮದಲ್ಲಿ ಅದರ ವೆಚ್ಚವೂ ಸರಾಸರಿಯಾಗಿ ಸರಿಹೊಂದುತ್ತದೆ. ಆದ್ದರಿಂದ, ಹೂಡಿಕೆಯ ಸರಾಸರಿ ವೆಚ್ಚವು ಕಡಿಮೆಯಾಗುತ್ತದೆ.

   ಅನುಕೂಲತೆ ಮತ್ತು ನಿಯಮಿತ
   ಎಸ್ ಐ ಪಿ ಯು ನೀವು ಸಿಂಡಿಕೇಟ್ ಬ್ಯಾಂಕಿನ ಎಲೆಕ್ಟ್ರಾನಿಕ್ ಕ್ಲಿಯರೆನ್ಸ್ ಸೇವೆ (ಇಸಿಎಸ್) ಅಥವಾ ಆಟೋ ಡೆಬಿಟ್ ಅಥವಾ ಸೂಚನೆಗಳ ಮೂಲಕ ಹಣ ಪಾವತಿಸುವ ಅನುಕೂಲತೆ ನೀಡುತ್ತದೆ. ನೀವು ಮ್ಯೂಚುಯಲ್ ಫಂಡ್ ಯೋಜನೆ ಮತ್ತು ಮೊತ್ತವನ್ನು ನಿರ್ಧರಿಸಬಹುದು. ಒಂದು ನಿರ್ದಿಷ್ಟ ಮೊತ್ತವು ಸ್ವಯಂಚಾಲಿತವಾಗಿ ನೀವು ಸೂಚಿಸಿದ ದಿನಾಂಕದಂದು ನಿಮ್ಮ ಖಾತೆಯಿಂದ ಡೆಬಿಟ್ ಆಗುತ್ತದೆ.

   ಹೂಡಿಕೆಯ ಕಡೆಗೆ ಶಿಸ್ತಿನ ವಿಧಾನ
   ನಿಯಮಿತವಾಗಿ ಹೂಡಿಕೆ ಮಾಡುವುದರಿಂದಾಗಿ ನೀವು ಉಳಿತಾಯ ಮಾಡುವುದರಲ್ಲಿ ಶಿಸ್ತು ಪಾಲಿಸುವಂತೆ ಮಾಡುತ್ತದೆ ಮತ್ತು ಇದು ಸಂಪತ್ತು ಕ್ರೋಢೀಕರಣಕ್ಕೆ ಕಾರಣವಾಗುತ್ತದೆ. ಶಿಸ್ತಿನ ಹೂಡಿಕೆ ಒಂದು ಸುದೀರ್ಘ ಸಮಯದ ಚೌಕಟ್ಟಿಗೆ ಒಳ್ಳೆಯ ಆದಾಯ ಗಳಿಸಲು ಆಧಾರವಾಗಿದೆ

ಮ್ಯೂಚುಯಲ್ ಫಂಡ್ ಪದಕೋಶ

 1. 1. ಆಸ್ತಿ ನಿರ್ವಹಣೆ ಕಂಪನಿ (ಎಎಂಸಿ) ಅಂದರೆ ಮ್ಯೂಚುಯಲ್ ಫಂಡ್ ಕಂಪನಿ.

 2. 2. ಅಧಿಕೃತ ನೋಂದಣಾಧಿಕಾರಿ – ಶಾಖಾ ಜಾಲದ ಮೂಲಕ ವ್ಯವಹಾರಗಳನ್ನು ನಡೆಸುವ / ಖಾತರಿ ನೀಡುವ ವ್ಯವಸ್ಥೆ ಇರುವ ಎಎಂಸಿ ಹೊಂದಿರುವ ಅಥವಾ ಹೊಂದಿರುವ ಬಗ್ಗೆ ಪ್ರಸ್ತಾಪಿಸುವ ಯಾವುದೇ ನೋಂದಣಾಧಿಕಾರಿ ಅಥವಾ ಷೇರುಗಳ ವರ್ಗಾವಣೆಯ ಏಜೆಂಟ್.

 3. 3. ಪ್ರಸ್ತಾಪದ ದಸ್ತಾವೇಜು / ಯೋಜನೆಯ ಮಾಹಿತಿ ದಸ್ತಾವೇಜು – ಎಎಂಸಿಯಿಂದ ನೀಡಲ್ಪಟ್ಟ, ಕಾಲಕಾಲಕ್ಕೆ ತಿದ್ದುಪಡಿ ಮಾಡಲಾದ (ಟಿಪ್ಪಣಿಯ ರೀತಿಯಲ್ಲಿ ಅಥವಾ ಯಾವುದೇ ರೀತಿಯನ್ನೂ ಒಳಗೊಂಡು), ಆಯಾ ಯೋಜನೆಗಳ ಘಟಕಗಳನ್ನು ಒದಗಿಸುವ ಪ್ರಸ್ತಾಪವಿರುವ, ಚಂದಾದಾರಿಕೆಗೆ ಲಭ್ಯವಿರುವ ಮತ್ತು ಎಎಂಎಫ್ಐ ಹಾಗೂ ಎಎಂಸಿ ಗಳ ವೆಬ್ ಸೈಟಿನಲ್ಲಿ ಹೆಚ್ಚುವರಿ ಮಾಹಿತಿಯ ಲಭ್ಯತೆಯಿರುವ ಕುರಿತು ಉಲ್ಲೇಖಿಸಿರುವ ದಸ್ತಾವೇಜು.

 4. 4. ಪ್ರಮುಖ ಮಾಹಿತಿ ಸುತ್ತೋಲೆ ಅಥವಾ ಕೆ ಐ ಎಂ - ಪ್ರಮುಖ ಮಾಹಿತಿ ಮತ್ತು ನಿಧಿ ಯೋಜನೆ (ಗಳ) ಅರ್ಜಿ ಒಳಗೊಂಡಿರುವ ಒಂದು ಸಂಕ್ಷಿಪ್ತ ಆವೃತ್ತಿಯ ಮಾಹಿತಿ ದಸ್ತಾವೇಜು.

 5. 5. ಎನ್ ಎ ವಿ – ಯೋಜನೆಯ ಪ್ರಸ್ತಾಪದ ದಸ್ತಾವೇಜು / ಯೋಜನೆಯ ಮಾಹಿತಿ ದಸ್ತಾವೇಜಿಗೆ ಅನುಗುಣವಾಗಿ ಲೆಕ್ಕಾಚಾರ ಹೊಂದಿದ ಹಾಗೂ ಪ್ರಕಟ ಮಾಡಿದ ಅಥವಾ ನಿಯಮಗಳ ಅನ್ವಯ ಕಾಲಕಾಲಕ್ಕೆ ಸಲಹೆ ಮಾಡಲಾದ ಆಯಾ ಯೋಜನೆಗಳ ಪ್ರತಿ ಘಟಕದ ನಿವ್ವಳ ಆಸ್ತಿ ಮೌಲ್ಯ.

 6. 6. ಖರೀದಿ – ವಿತರಣೆಗಾರರಿಂದ ಒದಗಿಸಲಾಗುವ ನಿಧಿ ಯೋಜನೆಯ ಘಟಕಗಳ ಗ್ರಾಹಕರು ಚಂದಾದಾರಿಕೆ ಪಡೆದುಕೊಳ್ಳಬಹುದು

 7. 7. ಗಳಿಕೆ – ಯಾವುದೇ ನಿಧಿ ಯೋಜನೆಗಳ ಘಟಕಗಳನ್ನು ಗ್ರಾಹಕರು ಮಾರಾಟ ಮಾಡಬಹುದು.

 8. 8. ಬದಲಾವಣೆ – ಗ್ರಾಹಕನಿಗೆ ಆತನ ಪ್ರಸ್ತುತ ಹೂಡಿಕೆಯ ಯೋಜನೆಯಿಂದ ಎಎಂಸಿ ಯ ಇನ್ನೊಂದು ಯೋಜನೆಗೆ ಬದಲಾಯಿಸುವ ಸೌಲಭ್ಯ ಒದಗಿಸಲಾಗಿದೆ. ಮ್ಯೂಚುಯಲ್ ಫಂಡ್ ನ ಒಂದು ಯೋಜನೆಯ ಘಟಕಗಳನ್ನು (ಅವುಗಳ ಯೋಜನೆ ಮತ್ತು ಆಯ್ಕೆಗಳ ಸಮೇತ) ಖರೀದಿ ಮಾಡಿದಲ್ಲಿ ಇನ್ನೊಂದು ಯೋಜನೆಯ ಘಟಕಗಳನ್ನು (ಅವುಗಳ ಯೋಜನೆ ಮತ್ತು ಆಯ್ಕೆಗಳ ಸಮೇತ) ಗಳಿಸಿಕೊಳ್ಳಬಹುದಾಗಿದೆ. ಲಾಕ್-ಇನ್ ಅವಧಿಯ ಯಾವುದೇ ಶರತ್ತುಗಳಿದ್ದಲ್ಲಿ, ಅವು ಅನ್ವಯವಾಗುತ್ತವೆ.

 9. 9. ಘಟಕ - ಘಟಕದ ಪ್ರಮಾಣಪತ್ರ / ಖಾತೆಯ ವಿವರಣೆ ಆ ಘಟಕ ಒಳಗೊಂಡಿರುವ ಯಾವುದೇ ಯೋಜನೆ ಆ ಷೇರಿನ ಒಂದು ಅವಿಭಜಿತ ಪಾಲನ್ನು ಪ್ರತಿನಿಧಿಸುತ್ತಿದ್ದು, ಅದು ಹೂಡಿಕೆದಾರರ ಆಸಕ್ತಿಗೆ ಸಾಕ್ಷಿಯಾಗಿದೆ.

 10. 10. ಲಾಭದ ಆಯ್ಕೆ – ಎಎಂಸಿ ಒದಗಿಸುವ ಆಯಾ ಯೋಜನೆಗಳ ಪ್ರಸ್ತಾಪದ ದಸ್ತಾವೇಜು / ಯೋಜನೆಗಳ ಮಾಹಿತಿ ಹಾಗೂ ಅದಕ್ಕೆ ಸೇರಿಸಲ್ಪಟ್ಟ ಹೆಚ್ಚುವರಿ ಮಾಹಿತಿ ದಸ್ತಾವೇಜಿನಲ್ಲಿ ಲಭ್ಯವಿರುವ ಮಾಹಿತಿಯಂತೆ, ಗ್ರಾಹಕರು ತಮ್ಮ ಹೂಡಿಕೆಯಿಂದ ಗಳಿಸಿದ ಲಾಭವನ್ನು ಹೊರತೆಗೆಯಬಹುದು ಅಥವಾ ಮರುಹೂಡಿಕೆ ಮಾಡಬಹುದು

 11. 11. ಲಾಭದ ಪಾವತಿ - ಎಎಂಸಿ ಒದಗಿಸುವ ಆಯಾ ಯೋಜನೆಗಳ ಪ್ರಸ್ತಾಪದ ದಸ್ತಾವೇಜು / ಯೋಜನೆಗಳ ಮಾಹಿತಿ ಹಾಗೂ ಅದಕ್ಕೆ ಸೇರಿಸಲ್ಪಟ್ಟ ಹೆಚ್ಚುವರಿ ಮಾಹಿತಿ ದಸ್ತಾವೇಜಿನಲ್ಲಿ ಲಭ್ಯವಿರುವ ಮಾಹಿತಿಯಂತೆ, ಗ್ರಾಹಕರು ತಮ್ಮ ಹೂಡಿಕೆಯಿಂದ ಬಂದ ಲಾಭವನ್ನು ಅದಕ್ಕೆ ಅನ್ವಯಿಸುವ ತೆರಿಗೆಗಳನ್ನು ಕಳೆದು ಪಾವತಿಸಲು ಕೋರಿಕೊಳ್ಳುವ ಆಯ್ಕೆ ಮಾಡಬಹುದು

 12. 12. ಲಾಭದ ಮರುಹೂಡಿಕೆ - ಎಎಂಸಿ ಒದಗಿಸುವ ಆಯಾ ಯೋಜನೆಗಳ ಪ್ರಸ್ತಾಪದ ದಸ್ತಾವೇಜು / ಯೋಜನೆಗಳ ಮಾಹಿತಿ ಹಾಗೂ ಅದಕ್ಕೆ ಸೇರಿಸಲ್ಪಟ್ಟ ಹೆಚ್ಚುವರಿ ಮಾಹಿತಿ ದಸ್ತಾವೇಜಿನಲ್ಲಿ ಲಭ್ಯವಿರುವ ಮಾಹಿತಿಯಂತೆ, ಗ್ರಾಹಕರು ತಮ್ಮ ಹೂಡಿಕೆಯಿಂದ ಬಂದ ಲಾಭವನ್ನು ಅದಕ್ಕೆ ಅನ್ವಯಿಸುವ ತೆರಿಗೆಗಳನ್ನು ಕಳೆದು ಮರುಹೂಡಿಕೆ ಮಾಡಲು ಕೋರಿಕೊಳ್ಳುವ ಆಯ್ಕೆ ಮಾಡಬಹುದು,

 13. 13. ದಾಖಲಾತಿಯ ದಿನಾಂಕ – ಎಎಂಸಿ ಯು ನಿಧಿಯ ಘಟಕದ ಲಾಭದ ಒಡೆತನ ಹೊಂದಿರುವ ಕುರಿತು ರಿಜಿಸ್ಟರಿನಲ್ಲಿ ದಾಖಲೆ ಮಾಡಿರುವ ದಿನಾಂಕ

ಮ್ಯೂಚುಯಲ್ ಫಂಡ್ ನ ಪ್ರಕಟಣೆ

ಹಕ್ಕುತ್ಯಾಗ

ಮ್ಯೂಚುಯಲ್ ಫಂಡ್ ನಲ್ಲಿನ ಹೂಡಿಕೆಗೆ ಮಾರುಕಟ್ಟೆಯ ಏರಿಳಿತದ ಅಪಾಯದ ಸಾಧ್ಯತೆ ಇದೆ. ಹೂಡಿಕೆ ಮಾಡುವ ಮೊದಲು ಪ್ರಸ್ತಾಪದ ದಸ್ತಾವೇಜು / ಯೋಜನೆಗಳ ಮಾಹಿತಿ ದಸ್ತಾವೇಜುಗಳನ್ನು ದಯವಿಟ್ಟು ಗಮನವಿಟ್ಟು ಓದಿ

 

longbanner rect1 rect2 rect3 rect4

ಹಕ್ಕುತ್ಯಾಗ: ಈ ಜಾಲತಾಣದ ವಿಷಯ ಕೇವಲ ಮಾಹಿತಿ ಹಂಚಿಕೆಗಾಗಿ. ಯಾವುದೇ ರೀತಿಯ ವ್ಯವಹಾರಕ್ಕಾಗಿ ಆಕರ್ಷಿಸಲು ರೂಪಿಸಿದ್ದಲ್ಲ.

2015 ಸಿಂಡಿಕೇಟ್ ಬ್ಯಾಂಕ್ . ಎಲ್ಲ ಹಕ್ಕುಗಳನ್ನೂ ಕಾಯ್ದಿರಿಸಲಾಗಿದೆ     1280 x 800 ರಲ್ಲಿ ಈ ಜಾಲತಾಣವನ್ನು ಉತ್ತಮವಾಗಿ ವೀಕ್ಷಿಸಬಹುದು