ಮೌಲ್ಯಗಳ ಬಲವಾದ ಅಡಿಪಾಯದ ಮೇಲೆ ಗ್ರಾಹಕ-ಕೇಂದ್ರಿತ ಬ್ಯಾಂಕು ಎಂದು ನಮ್ಮ ಬ್ಯಾಂಕಿಗೆ ಖ್ಯಾತಿಯಿದೆ. ನಿಮ್ಮ ಅನುಕೂಲಗಳಿಗೆ ಸರಿಹೊಂದುವಂತೆ ನಮ್ಮ ಕೌಶಲ್ಯಗಳನ್ನು ನಾವು ನಿರಂತರವಾಗಿ ತೀಕ್ಷ್ಣಗೊಳಿಸುತ್ತೇವೆ ಮತ್ತು ಅಭಿವೃದ್ಧಿಪಡಿಸುತ್ತೇವೆ. ನಮ್ಮೊಂದಿಗಿನ ನಿಮ್ಮ ಬ್ಯಾಂಕಿಂಗ್ ಅನುಭವವು ಶ್ರೇಷ್ಠತೆಯಲ್ಲೇ ಅಪ್ರತಿಮವಾಗಿದೆ ಎಂದು ಖಚಿತಪಡಿಸಿಕೊಳ್ಳುವುದು ನಮ್ಮ ಉದ್ದೇಶವಾಗಿದೆ. ನಾಗರಿಕ ಸನ್ನದು ಗ್ರಾಹಕರ ಗಮನ ಕುರಿತ ನಮ್ಮ ಸುಧಾರಣಾ ಕ್ರಮದ ಒಂದು ಪ್ರಯತ್ನವಾಗಿದೆ. ಒಬ್ಬ ಗ್ರಾಹಕರಾಗಿ ನಿಮ್ಮ ಹಕ್ಕುಗಳ ಬಗ್ಗೆ ಇದು ನಿಮಗೆ ಮಾಹಿತಿಯನ್ನು ನೀಡುತ್ತದೆ, ಅಗತ್ಯವಿದ್ದಲ್ಲಿ ನಮ್ಮನ್ನು ಹಾಗೂ ನಾವು ಒದಗಿಸುವ ಉತ್ಪನ್ನಗಳು ಮತ್ತು ಸೇವೆಗಳನ್ನು ಸರಿಪಡಿಸಲು ಇದು ಲಭ್ಯವಿರುವ ಒಂದು ಯಾಂತ್ರಿಕ ವ್ಯವಸ್ಥೆ, ನಿಮ್ಮ ಸಂತೋಷವೇ ನಮ್ಮ ಗುರಿಯಾಗಿದೆ. ಈ ಸನ್ನದು ನಮ್ಮ ಮಾರ್ಗವೆಂದು ಆತ್ಮವಿಶ್ವಾಸದಿಂದ ಹೇಳಬಹುದು. ನಮ್ಮನ್ನು ಆಯ್ಕೆ ಮಾಡಿದ್ದಕ್ಕಾಗಿ ಧನ್ಯವಾದಗಳು. ಇದು ನಿಜಕ್ಕೂ ಸರಿಯಾದ ಆಯ್ಕೆಯಾಗಿದೆ.
ನಾಗರಿಕ ಸನ್ನದು ಮೂಲಕ ಬ್ಯಾಂಕು ತನ್ನ ವ್ಯಾಪಕವಾದ ಗ್ರಾಹಕರ ನೆಲೆಯ ವಿವಿಧ ವಿಭಾಗಗಳ ವಿವಿಧ ಅಗತ್ಯತೆಗಳನ್ನು ಪೂರೈಸಲು ಅಗತ್ಯಕ್ಕೆ ತಕ್ಕಂತೆ ಉಪಕ್ರಮಗಳನ್ನು ರೂಪಿಸಲು ನಿರಂತರವಾಗಿ ಪ್ರಯತ್ನಿಸುತ್ತಿದೆ. ಈ ಬದ್ಧತೆಯನ್ನು ನೆರವೇರಿಸಲು, ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಎಸ್ಎಂಇ) ವಿಭಾಗದ ಗ್ರಾಹಕರ ಪ್ರತ್ಯೇಕ ಬಳಕೆಗಾಗಿ ಪ್ರತ್ಯೇಕ ಗ್ರಾಹಕ ಸನ್ನದನ್ನು ರೂಪಿಸಿದೆ. ಈ ಸನ್ನದು ತನ್ನ ಎಸ್ಎಂಇ ಗ್ರಾಹಕರಿಗೆ ಬ್ಯಾಂಕ್ ನೀಡುವ ವಿಶೇಷ ನಿಯಮಗಳು ಮತ್ತು ಪ್ರಯೋಜನಗಳ ವಿವರಗಳನ್ನು ಒದಗಿಸುತ್ತದೆ.
|