Syndicate Bank
banner
 

ಸಾಲ ಯೋಜನೆಗಳು

 

ಸಾಲಗಳು ಹಾಗೂ ಮುಂಗಡಗಳು:

ಸಮಾಜದ ವಿವಿಧ ಭಾಗಗಳ ವಿಭಿನ್ನ ಆರ್ಥಿಕ ಅಗತ್ಯಗಳನ್ನು ಪೂರೈಸಲು ಸಾಲ ಯೋಜನೆಗಳನ್ನು ಬ್ಯಾಂಕು ಜಾಗರೂಕತೆಯಿಂದ ವಿನ್ಯಾಸಗೊಳಿಸಿದೆ ಹಾಗೂ ಸಾಲ ಮರುಪಾವತಿಯ ವೇಳಾಪಟ್ಟಿಗಳನ್ನು ಸಾರ್ವಜನಿಕರ ಆದಾಯಕ್ಕೆ ಅನುಗುಣವಾಗಿ ರೂಪಿಸಲಾಗಿದೆ. ನಮ್ಮ ವೈಯಕ್ತಿಕ ಬ್ಯಾಂಕಿಂಗ್ ಸಾಲ ಯೋಜನೆಗಳು, ಸಿಂಡ್ ಸರಳ್, ಸಿಂಡ್ ಸುವಿಧಾ, ಸಿಂಡ್ ವಾಹನ, ಸಿಂಡ್ ಕಿಸಾನ್, ಸಿಂಡ್ ಮಾರ್ಟಗೇಜ್ ಯೋಜನೆಗಳು ಮನೆಯ ಬಾಳಿಕೆ ವಸ್ತುಗಳು, ವಾಹನಗಳ ಖರೀದಿಯಂತಹ ವೈಯಕ್ತಿಕ ಹಣಕಾಸಿನ ಅಗತ್ಯಗಳನ್ನು ಪೂರೈಸಲು ಅಥವಾ ಯಾವುದೇ ಇತರ ಅವಶ್ಯಕ ಸಾಲದ ಅವಶ್ಯಕತೆಗಳನ್ನು ಪೂರೈಸುವ ಗುರಿ ಹೊಂದಿದೆ. ಉನ್ನತ ಶಿಕ್ಷಣ ಪೂರೈಸ ಬಯಸುವ ವಿದ್ಯಾರ್ಥಿಗಳಿಗೆ ನಮ್ಮ ಸಿಂಡ್ ವಿದ್ಯಾ ಯೋಜನೆಯಡಿ ಸಾಲ ನೀಡಲಾಗುತ್ತದೆ. ರೈತರು, ವೃತ್ತಿಪರರು, ಸಂಬಳದ ವರ್ಗ, ಅಧಿಕಾರಿಗಳು, ವ್ಯಾಪಾರಿಗಳು, ಪಿಂಚಣಿದಾರರು, ರಕ್ಷಣಾ ಸಿಬ್ಬಂದಿ, ಕೈಗಾರಿಕೋದ್ಯಮಿಗಳು ತಮ್ಮ ಹಣಕಾಸಿನ ಅಗತ್ಯಗಳನ್ನು ಬ್ಯಾಂಕಿನ ವಿವಿಧ ಸಾಲ ಯೋಜನೆಗಳ ಮೂಲಕ ಪೂರೈಸಬಹುದು. ಮನೆಯನ್ನು ಹೊಂದುವ ಸಾರ್ವಜನಿಕರ ಆಕಾಂಕ್ಷೆಯನ್ನು ಪೂರೈಸಲು ಸಿಂಡ್ ನಿವಾಸ್ ನೆರವಾಗುತ್ತದೆ. ಚಿನ್ನದ ಆಭರಣಗಳು, ಎನ್ ಎಸ್ ಸಿ, ಕೆವಿಪಿ, ಜೀವವಿಮಾ ಪಾಲಿಸಿಗಳು, ಭಾರತ ಸರ್ಕಾರದ ಬಾಂಡುಗಳು, ಸಾರ್ವಜನಿಕ ವಲಯದ ಕಂಪನಿಗಳ ಷೇರುಗಳು, ಯುಟಿಐ ಘಟಕಗಳು ಮತ್ತು ಪಡೆದ/ಸ್ವೀಕರಿಸಬಹುದಾದ ಬಾಡಿಗೆ ಇತ್ಯಾದಿಗಳನ್ನು ಭದ್ರತೆಗೆ ಇರಿಸಿ ಸಹ ಸಾಲವನ್ನು ಒದಗಿಸಲು ಸಾಲ ಉತ್ಪನ್ನಗಳನ್ನು ವಿನ್ಯಾಸಗೊಳಿಸಲಾಗಿದೆ. ಪಿಂಚಣಿದಾರರು ಮತ್ತು ನಮ್ಮ ಶಾಖೆಗಳ ಮೂಲಕ ವೇತನ ಪಡೆಯುವ ಜನರ ತಾತ್ಕಾಲಿಕ ಹಣಕಾಸಿನ ಅಗತ್ಯಗಳು ಸಿಂಡ್ ಒವರ್‌ಲೈನ್ ಮೂಲಕ ಮತ್ತು ಎಸ್ ಬಿ ಖಾತೆಗಳಲ್ಲಿ ತಾತ್ಕಾಲಿಕ ಓವರ್ ಡ್ರಾಫ್ಟ್ ಮೂಲಕ ಪೂರೈಕೆಯಾಗುತ್ತವೆ.  

Tಕೃಷಿಕರು ಬೆಳೆ ಉತ್ಪಾದನೆ, ಭೂ ಅಭಿವೃದ್ಧಿ, ಸಣ್ಣ ನೀರಾವರಿ ಹಾಗೂ ಅದರ ಸಂಬಂಧಿ ಚಟುವಟಿಕೆಗಳು, ತೋಟಗಾರಿಕೆ, ಹೈಟೆಕ್ ಕೃಷಿ ಇತ್ಯಾದಿಗಳಿಗೆ ನಮ್ಮ ಕೃಷಿ-ಹಣಕಾಸು ಯೋಜನೆಗಳ ಮೂಲಕ ಹೂಡಿಕೆಯ ಅಗತ್ಯಗಳನ್ನು ಪೂರೈಸಿಕೊಳ್ಳಬಹುದು. ಸಿಂಡಿಕೇಟ್ ಕಿಸಾನ್ ಕ್ರೆಡಿಟ್ ಕಾರ್ಡ್ (ಎಸ್ ಕೆ ಸಿ ಸಿ) ಮತ್ತು ಸಿಂಡಿಕೇಟ್ ಕಿಸಾನ್ ಸಮೃದ್ಧಿ ಕ್ರೆಡಿಟ್ ಕಾರ್ಡ್ (ಎಸ್ ಕೆ ಕೆ ಸಿ ಸಿ) ಕೃಷಿಕರಿಗಾಗಿರುವ ಉತ್ಪನ್ನಗಳಾಗಿವೆ. ಇವುಗಳು ಬೆಳೆ ಉತ್ಪಾದನೆ, ಸಂಬಂಧಿ ಚಟುವಟಿಕೆಗಳು, ರಿಪೇರಿ ಯಂತ್ರಗಳು ಮತ್ತು ಬಳಕೆಗಾಗಿ ತಮ್ಮ ಅಗತ್ಯಗಳನ್ನು ಪೂರೈಸುವ ಉದ್ದೇಶ ಹೊಂದಿವೆ. ಉದ್ಯಮಿಗಳು, ಕುಶಲಕರ್ಮಿಗಳು, ವ್ಯಾಪಾರಿಗಳು, ವೃತ್ತಿಪರರು ಹಾಗೂ ಸ್ವಯಂ ಉದ್ಯೋಗಿಗಳು, ಎಸ್ಎಂಇ ವಲಯ, ವ್ಯವಹಾರ ಘಟಕಗಳು, ತಯಾರಿಕಾ ಘಟಕಗಳು ಮತ್ತು ಸೇವಾ ಘಟಕಗಳ ಸಾಲದ ಅಗತ್ಯಗಳನ್ನು ಪೂರೈಸಲು ಸಿಂಡ್ ಲಘು ಉದ್ಯಮಿ, ಸಿಂಡ್ ವ್ಯಾಪಾರ, ಸಿಂಡ್ ಸ್ವರ್ಣ, ಸಿಂಡ್ ಪಿಗ್ಮಿ, ಸಿಂಡ್ ರೆಂಟ್, ಸಿಂಡ್ ಉದ್ಯೋಗ್ ನಂತಹ ಯೋಜನೆಗಳನ್ನು ರೂಪಿಸಲಾಗಿದೆ. ಬಡವರು ಹಾಗೂ ಕಡೆಗಣಿಸಲ್ಪಟ್ಟವರ ಉನ್ನತಿಗಾಗಿ ಬ್ಯಾಂಕ್ ವಿವಿಧ ಯೋಜನೆಗಳ ಅಡಿಯಲ್ಲಿ ಸಾಲ ನೀಡುತ್ತಿದೆ. ಬ್ಯಾಂಕುಗಳ ಮೂಲಕ ಜಂಟಿ ಪ್ರಾಯೋಜಿತ ಸಂಸ್ಥೆಗಳಾದ ರುಡ್‍ಸೆಟಿ, ಸಿಐಆರ್‌ಡಿ ಇತ್ಯಾದಿಗಳ ಸಹಯೋಗದಲ್ಲಿ ನಿರುದ್ಯೋಗಿ ಯುವಜನರನ್ನು ಗುರುತಿಸಲು ಮತ್ತು ತರಬೇತಿ ನೀಡುವಲ್ಲಿ ಸಹ ಬ್ಯಾಂಕ್ ತೊಡಗಿದೆ ಹಾಗೂ ಸ್ವಯಂ-ಉದ್ಯೋಗ ಚಟುವಟಿಕೆಗಳಿಗೆ ಸಾಲ ಒದಗಿಸುತ್ತದೆ. ವ್ಯಕ್ತಿಗಳು, ಸಂಸ್ಥೆಗಳು, ನಿಗಮಗಳು ಇತ್ಯಾದಿಗಳ ಪ್ರತಿಯೊಂದು ವಾಸ್ತವಿಕ ಸಾಲದ ಅವಶ್ಯಕತೆಗಳನ್ನು ಪೂರೈಸಲು ಬ್ಯಾಂಕ್ ಉತ್ಪನ್ನಗಳನ್ನು ಹೊರತಂದಿದೆ ಹಾಗೂ ಗೊಂದಲಮುಕ್ತ ಕಾರ್ಯವಿಧಾನಗಳನ್ನು ಪಾಲಿಸುತ್ತಿದೆ ಮತ್ತು ಸಾರ್ವಜನಿಕರಿಗೆ / ಗ್ರಾಹಕರಿಗೆ ತಗಲುವ ವೆಚ್ಚ ಸಹಿತ ಎಲ್ಲಾ ಅಗತ್ಯ ಮಾಹಿತಿಯನ್ನು ಒದಗಿಸುತ್ತಿದೆ. ಮಹಿಳಾ ಆರ್ಥಿಕ ಸಬಲೀಕರಣವನ್ನು ಗುರುತಿಸಿ, ಬ್ಯಾಂಕ್ ಸಿಂಡ್ ಮಹಿಳಾ ಯೋಜನೆಯನ್ನು ನಿಯಮಿತ ಆದಾಯವಿಲ್ಲದ ಮಹಿಳೆಯರಿಗೆ ಸಾಲ ಸೌಲಭ್ಯಗಳನ್ನು ಒದಗಿಸಲು ಪ್ರಾರಂಭಿಸಿದೆ. ಎನ್.ಆರ್.ಐ ಗ್ರಾಹಕರಿಗೆ ರೂಪಾಯಿ ಸಾಲವನ್ನು ನೀಡಲು ಸಿಂಡ್ ಪ್ರವಾಸಿ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಸಿಂಡ್ ನಿವಾಸ್ (ವಸತಿ ಸಾಲ) ದ ಫಲಾನುಭವಿಗಳಿಗೆ ನಿಗದಿತ ಪ್ರೀಮಿಯಂಗೆ ವಿಮೆಯನ್ನು ಒದಗಿಸಲು ವಿಮೆ ಕಂಪೆನಿಗಳೊಂದಿಗೆ ಬ್ಯಾಂಕ್ ಒಪ್ಪಂದ ಮಾಡಿಕೊಂಡಿದೆ.  

ವಿದೇಶಿ ವಿನಿಮಯ, ರಫ್ತು ಸಾಲ, ಔದ್ಯಮಿಕ ಹಣಕಾಸು, ಮನೆ ಸಾಲ, ಹಾಗೂ ಖಜಾನೆ ಕಾರ್ಯಾಚರಣೆಗಳಲ್ಲಿ ವಿಶೇಷತೆ ಹೊಂದಿರುವ ಬ್ಯಾಂಕು ಆಧುನಿಕ ಬ್ಯಾಂಕಿಂಗ್ ಬೇಡಿಕೆಗಳ ಲಯಕ್ಕೆ ಹೊಂದಿಕೊಂಡಿದೆ.

ಪಡೆಯಲು ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ ವಿವಿಧ ಸಾಲ ಉತ್ಪನ್ನಗಳ ವಿವರಗಳನ್ನು
longbanner

ಹಕ್ಕುತ್ಯಾಗ: ಈ ಜಾಲತಾಣದ ವಿಷಯ ಕೇವಲ ಮಾಹಿತಿ ಹಂಚಿಕೆಗಾಗಿ. ಯಾವುದೇ ರೀತಿಯ ವ್ಯವಹಾರಕ್ಕಾಗಿ ಆಕರ್ಷಿಸಲು ರೂಪಿಸಿದ್ದಲ್ಲ.

2015 ಸಿಂಡಿಕೇಟ್ ಬ್ಯಾಂಕ್ . ಎಲ್ಲ ಹಕ್ಕುಗಳನ್ನೂ ಕಾಯ್ದಿರಿಸಲಾಗಿದೆ     1280 x 800 ರಲ್ಲಿ ಈ ಜಾಲತಾಣವನ್ನು ಉತ್ತಮವಾಗಿ ವೀಕ್ಷಿಸಬಹುದು