Syndicate Bank
banner
 

ಬ್ಯಾಂಕ್ ಅಶುರೆನ್ಸ್ (ಜೀವ) – ಎಲ್ ಐ ಸಿ ಆಫ್ ಇಂಡಿಯಾ ದ ಸಹಯೋಗದಲ್ಲಿ

 

27.6.2013 ರಂದು ಎಲ್ಐಸಿ ಆಫ್ ಇಂಡಿಯಾ ತನ್ನ ಶಾಖೆ ನೆಟ್‍ವರ್ಕ್ ಮೂಲಕ ಜೀವವಿಮೆ ಉತ್ಪನ್ನಗಳನ್ನು ಮಾರಾಟ ಮಾಡಲು ಸಂಘಟಿತ ಏಜೆಂಟ್ ಎಂದು ಬ್ಯಾಂಕ್ ಒಪ್ಪಂದ ಮಾಡಿಕೊಂಡಿದೆ. ಈ ಸಹಯೋಗ ನಮ್ಮ ಅಮೂಲ್ಯ ಗ್ರಾಹಕರಿಗೆ ಸಮಗ್ರ ವಿಮೆ ಆಯ್ಕೆಯನ್ನು ಒದಗಿಸುತ್ತದೆ.

ಭಾರತದಲ್ಲಿ ವಿಮೆ ಉದ್ಯಮದಲ್ಲಿ ಹರಿಕಾರರಾದ ಎಲ್ಐಸಿ ಆಫ್ ಇಂಡಿಯಾ ಸಮಾಜದ ಪ್ರತಿಯೊಂದು ವಿಭಾಗಕ್ಕೂ ಅನ್ವಯವಾಗುವಂತಹ ಪಾಲಿಸಿಗಳನ್ನು ಒಳಗೊಂಡಿದೆ.

ಸಿಂಡಿಕೇಟ್ ಬ್ಯಾಂಕ್, ಎಲ್ ಐ ಸಿ ಆಫ್ ಇಂಡಿಯಾ ದ ಕಾರ್ಪೊರೇಟ್ ಏಜೆಂಟ್ ಆಗಿದೆ. ಬ್ಯಾಂಕಿನ ಗ್ರಾಹಕರು ವಿಮೆಯ ಉತ್ಪನ್ನಗಳಲ್ಲಿ ಪಾಲ್ಗೊಳ್ಳುವುದು ಸ್ವಯಂಪ್ರೇರಿತವಾಗಿದೆ. ವಿಮೆಯು ಒಂದು ವಿಜ್ಞಾಪನೆಯ ವಿಷಯವಾಗಿದೆ.

*ಜೀವ ವಿಮೆಯ ಬಗ್ಗೆ ಗ್ರಾಹಕರಿಗೆ ತಿಳುವಳಿಕೆ :

ಜೀವ ವಿಮೆಯು ಸಾವು, ಅಂಗವೈಕಲ್ಯ, ಅಪಘಾತ, ನಿವೃತ್ತಿ ಇತ್ಯಾದಿ ಮಾನವ ಜೀವನದ ಸಂಬಂಧಿ ಮುಂಜಾಗರೂಕತಾ, ಆರ್ಥಿಕ ರಕ್ಷಾಕವಚವಾಗಿದೆ. ಮಾನವ ಜೀವನವು ನೈಸರ್ಗಿಕ ಮತ್ತು ಆಕಸ್ಮಿಕ ಕಾರಣಗಳ ಸಾವು ಮತ್ತು ಅಂಗವೈಕಲ್ಯ ಅಪಾಯಗಳ ಸಾಧ್ಯತೆಗೆ ಒಳಪಟ್ಟಿರುತ್ತದೆ. ಜೀವನದಲ್ಲಿ ಒಬ್ಬ ವ್ಯಕ್ತಿ ತೀರಿಹೋದರೆ ಅಥವಾ ವ್ಯಕ್ತಿಯು ಶಾಶ್ವತವಾಗಿ ಅಥವಾ ತಾತ್ಕಾಲಿಕವಾಗಿ ನಿಷ್ಕ್ರಿಯನಾದರೆ ಮನೆಯ ಆದಾಯ ಕುಂಠಿತವಾಗುತ್ತದೆ. ಮಾನವ ಜೀವನಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲವಾದರೂ, ಆದಾಯದ ನಷ್ಟವನ್ನು ಆಧರಿಸಿ ಮುಂದಿನ ಭವಿಷ್ಯಕ್ಕಾಗಿ ನಿರ್ದಿಷ್ಟ ವಿತ್ತೀಯ ಮೊತ್ತವನ್ನು ನಿರ್ಣಯಿಸಬಹುದಾಗಿದೆ ಆದ್ದರಿಂದ, ಜೀವ ವಿಮೆಯಲ್ಲಿ, ವಿಮಾ ಮೊತ್ತ (ಅಥವಾ ನಷ್ಟ ಸಂಭವಿಸಿದಾಗ ಪಾವತಿಸಬೇಕಾದ ಪ್ರಮಾಣದ ಭರವಸೆ) ಒಂದು 'ಲಾಭ' ದ ರೂಪ ಎನ್ನಬಹುದು. ಜೀವ ವಿಮಾ ಉತ್ಪನ್ನಗಳು ಪಾಲಿಸಿಯ ಅವಧಿಯಲ್ಲಿ ವಿಮೆ ಪಡೆದವರು ತೀರಿಹೊದ ಸಂದರ್ಭದಲ್ಲಿ ನಿರ್ದಿಷ್ಟ ಮೊತ್ತದ ಹಣವನ್ನು ಒದಗಿಸುತ್ತವೆ.

ಜೀವ ವಿಮೆಯನ್ನು ನೀವು ಯಾಕೆ ಖರೀದಿಸಬೇಕು?

ಜೀವ ವಿಮೆಯ ಅವಶ್ಯಕತೆ – ಗಳಿಸುವ ವ್ಯಕ್ತಿಗೆ ದುರದೃಷ್ಟವಶಾತ್ ಏನಾದರೂ ಆದಲ್ಲಿ, ಆ ಕುಟುಂಬದ ಅವಲಂಬಿತ ಸದಸ್ಯರು ಕಷ್ಟ ಪಡುವಂತಾಗದೆ, ಹಣಕಾಸಿನ ಬೆಂಬಲದ ಭರವಸೆ ಹೊಂದಲು.

  • ನಿವೃತ್ತಿಯ ನಂತರವೂ ನಿರಂತರ ಆದಾಯದ ಮೂಲವನ್ನು ಹೊಂದಲು ಒಂದು ಉಳಿತಾಯ ಯೋಜನೆ.
  • ಗಂಭೀರ ಅನಾರೋಗ್ಯ ಅಥವಾ ಅಪಘಾತದ ಕಾರಣ ನಿಮ್ಮ ಗಳಿಕೆ ಕಡಿಮೆಯಾದಲ್ಲಿ ಹೆಚ್ಚುವರಿ ಆದಾಯವನ್ನು ಖಚಿತಪಡಿಸಿಕೊಳ್ಳಲು.
  • ಇತರ ಅನಿಶ್ಚಿತ ಖರ್ಚು ಹಾಗೂ ಜೀವನ ಶೈಲಿಯ ಅವಶ್ಯಕತೆಗಳನ್ನು ಪೂರೈಸಲು.

ಜೀವ ವಿಮೆಯು ಯಾರಿಗೆ ಅವಶ್ಯಕ?

ಪ್ರಾಥಮಿಕವಾಗಿ, ತಮ್ಮ ಆದಾಯದಿಂದ ಕುಟುಂಬದ ನಿರ್ವಹಣೆ ಮಾಡುವವರು ಮತ್ತು ಅವರೇ ಆದಾಯವನ್ನು ಗಳಿಸುವವರಾದಲ್ಲಿ, ಅಂತಹವರಿಗೆ ಜೀವ ವಿಮೆಯ ಅಗತ್ಯವಿದೆ. ಕುಟುಂಬಕ್ಕೆ ಅವರು ನೀಡುತ್ತಿರುವ ಕೊಡುಗೆಯನ್ನು ಆರ್ಥಿಕ ಮೌಲ್ಯ ದೃಷ್ಟಿಯಲ್ಲಿ ಗಮನಿಸಿದರೆ, ಗೃಹಿಣಿಯರಿಗೂ ಜೀವ ವಿಮೆಯ ಅಗತ್ಯವಿದೆ. ಭವಿಷ್ಯದ ಆದಾಯಕ್ಕೆ ಸಂಭಾವ್ಯ ಅಪಾಯವಿರಬಹುದು ಎಂಬ ದೃಷ್ಟಿಕೋನದಿಂದ ನೋಡಿದರೆ, ಮಕ್ಕಳನ್ನು ಸಹ ಜೀವವಿಮೆಗಾಗಿ ಪರಿಗಣಿಸಬಹುದು.

ಎಷ್ಟು ಜೀವ ವಿಮೆಯ ಅವಶ್ಯಕತೆ ಇದೆ?

ಎಷ್ಟು ಮೊತ್ತದ ಜೀವ ವಿಮೆಯ ಅವಶ್ಯಕತೆ ಇದೆ ಎನ್ನುವುದು ಈ ರೀತಿಯ ಹಲವಾರು ಅಂಶಗಳನ್ನು ಆಧರಿಸಿದೆ : ಎಷ್ಟು ಜನ ನಿಮ್ಮನ್ನು ಅವಲಂಬಿಸಿದ್ದಾರೆ, ನೀವು ಯಾವುದಾದರೂ ತೀರಿಸಬೇಕಾದ ಹೊಣೆ / ಸಾಲ / ಅಡಮಾನ ಗಳನ್ನು ಹೊಂದಿದ್ದೀರಾ, ನೀವು ನಿಮ್ಮ ಕುಟುಂಬಕ್ಕೆ ಯಾವ ರೀತಿಯ ಜೀವನ ಶೈಲಿಯನ್ನು ನೀಡಲು ಬಯಸುತ್ತೀರಿ, ನಿಮ್ಮ ಮಕ್ಕಳ ಭವಿಷ್ಯದ ವಿದ್ಯಾಭ್ಯಾಸಕ್ಕೆ ಎಷ್ಟು ಹಣದ ಅವಶ್ಯಕತೆ ಇದೆ, ನಿಮ್ಮ ಹೂಡಿಕೆಯ ಅವಶ್ಯಕತೆಗಳು ಏನೇನು, ನಿಮ್ಮ ಸಾಮರ್ಥ್ಯವೇನು, ಇತ್ಯಾದಿ.

longbanner

ಹಕ್ಕುತ್ಯಾಗ: ಈ ಜಾಲತಾಣದ ವಿಷಯ ಕೇವಲ ಮಾಹಿತಿ ಹಂಚಿಕೆಗಾಗಿ. ಯಾವುದೇ ರೀತಿಯ ವ್ಯವಹಾರಕ್ಕಾಗಿ ಆಕರ್ಷಿಸಲು ರೂಪಿಸಿದ್ದಲ್ಲ.

2015 ಸಿಂಡಿಕೇಟ್ ಬ್ಯಾಂಕ್ . ಎಲ್ಲ ಹಕ್ಕುಗಳನ್ನೂ ಕಾಯ್ದಿರಿಸಲಾಗಿದೆ     1280 x 800 ರಲ್ಲಿ ಈ ಜಾಲತಾಣವನ್ನು ಉತ್ತಮವಾಗಿ ವೀಕ್ಷಿಸಬಹುದು