Syndicate Bank
about
 

ಉದಾರೀಕರಣಗೊಂಡ ರವಾನೆ ಯೋಜನೆ

ನಿವಾಸಿ ನಾಗರಿಕರಿಗೆ ಲಭ್ಯವಿರುವ ವಿದೇಶಿ ವಿನಿಮಯ ಸೌಲಭ್ಯಗಳನ್ನು ಮತ್ತಷ್ಟು ಸರಳೀಕರಣ ಮತ್ತು ಉದಾರೀಕರಣಗೊಳಿಸುವ ಒಂದು ಹೆಜ್ಜೆಯಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಉದಾರೀಕೃತ ರವಾನೆ ಯೋಜನೆಯನ್ನು (ಯೋಜನೆ) 2004 ರ ಫೆಬ್ರುವರಿಯಲ್ಲಿ ಪ್ರಕಟಿಸಿತ್ತು. ಈ ಯೋಜನೆಯ ಪ್ರಕಾರ, ನಿವಾಸಿ ಭಾರತೀಯ ನಾಗರಿಕರು ಪ್ರತಿ ಆರ್ಥಿಕ ವರ್ಷದಲ್ಲಿ 125,000 ಡಾಲರ್ ವರೆಗಿನ ಮೊತ್ತವನ್ನು ಯಾವುದೇ ಅನುಮತಿ ಹೊಂದಿದ ಬಂಡವಾಳ ಮತ್ತು ಪ್ರಸ್ತುತ ಖಾತೆಯ ವಹಿವಾಟು ಅಥವಾ ಎರಡರ ಸಂಯೋಜನೆಯ ಮೂಲಕ ರವಾನಿಸಬಹುದು. ಈ ಯೋಜನೆಯನ್ನು ಎ.ಪಿ. (ಡಿ ಆರ್ ಸರಣಿ) ಸುತ್ತೋಲೆ ಸಂ. 64, ಫೆಬ್ರುವರಿ 4, 2004 ರ ಆಧಾರದ ಮೇಲೆ ಕಾರ್ಯಗತಗೊಳಿಸಲಾಗಿದೆ.
 

ಭಾಗ ಅ:

ಪ್ರ 1: 125,000 ಡಾಲರ್ ನ ಉದಾರೀಕರಣ ರವಾನೆ ಯೋಜನೆ (LRS) ಎಂದರೇನು?

ಉ: ಉದಾರೀಕರಣ ರವಾನೆ ಯೋಜನೆ ಅಡಿಯಲ್ಲಿ, ಅಪ್ರಾಪ್ತ ವಯಸ್ಕರೂ ಸೇರಿದಂತೆ , ಎಲ್ಲಾ ನಿವಾಸಿ ಭಾರತೀಯ ವ್ಯಕ್ತಿಗಳು, ಪ್ರತಿ ಹಣಕಾಸು ವರ್ಷದಲ್ಲಿ (ಏಪ್ರಿಲ್ - ಮಾರ್ಚ್) ಯಾವುದೇ ಅನುಮತಿ ಪಡೆದ (ಅಂಗೀಕಾರಾರ್ಹ) ಚಾಲ್ತಿ ಖಾತೆ ಅಥವಾ ಬಂಡವಾಳ ಖಾತೆ ವಹಿವಾಟು ಅಥವಾ ಎರಡರ ಸಂಯೋಜನೆಯಲ್ಲಿ , ಮುಕ್ತವಾಗಿ 125,000 ಡಾಲರ್ ವರೆಗಿನ ಮೊತ್ತವನ್ನು ರವಾನಿಸಲು ಅನುಮತಿಸಲಾಗಿದೆ.

ಪ್ರ . ೨: ಯೋಜನೆ ಅಡಿಯಲ್ಲಿ ಅನುಮತಿ ನೀಡಲಾದ ‘ಬಂಡವಾಳ ಖಾತೆ ವಹಿವಾಟುಗಳು’ ಎಂದರೇನು ಎಂದು ವಿವರಿಸಿ.

ಉ: ಈ ಯೋಜನೆಯಡಿಯಲ್ಲಿ, ನಿವಾಸಿ ಭಾರತೀಯ ವ್ಯಕ್ತಿಗಳು ರಿಸರ್ವ್ ಬ್ಯಾಂಕಿನ ಪೂರ್ವಾನುಮತಿಯಿಲ್ಲದೆಯೇ ಷೇರುಗಳು ಅಥವಾ ಸಾಲ ದಾಖಲಾತಿ ಪತ್ರ ಅಥವಾ ಹೊರದೇಶದಲ್ಲಿನ ಆಸ್ತಿಗಳನ್ನೂ ಸೇರಿದಂತೆ ಇತರ ಯಾವುದೇ ಆಸ್ತಿಗಳನ್ನು ಕೊಳ್ಳಬಹುದು ಹಾಗೂ ಸ್ವಾಧೀನಪಡಿಸಿಕೊಳ್ಳಬಹುದು. ಈ ಯೋಜನೆಯಡಿಯಲ್ಲಿ ನೀಡಿದ ಅನುಮತಿಯ ಆಧಾರದ ಮೇಲೆ, ನಾಗರಿಕರು, ವಹಿವಾಟು ನಡೆಸಲು ಭಾರತದ ಹೊರಗೂ ಕೂಡ ವಿದೇಶಿ ಕರೆನ್ಸಿ ಬ್ಯಾಂಕ್ ಖಾತೆಗಳನ್ನು ತೆರೆಯಬಹುದು, ಹೊಂದಬಹುದು ಹಾಗೂ ನಿರ್ವಹಿಸಬಹುದಾಗಿದೆ.

ಪ್ರ 3: ಯೋಜನೆಯಡಿಯಲ್ಲಿ ನಿಷೇಧಿತ ಅಂಶಗಳು ಯಾವವು?

ಉ: ಯೋಜನೆಯಡಿಯಲ್ಲಿ, ಈ ಕೆಳ ತಿಳಿಸಿದವುಗಳಿಗೆ ರವಾನೆ ಸೌಲಭ್ಯ ಲಭ್ಯವಿಲ್ಲ
  • ವಿದೇಶಿ ವಿನಿಮಯ ನಿರ್ವಹಣೆ ನಿಯಮಗಳು, 2000 ದ ಶೆಡ್ಯೂಲ್ -1 ರ ಅಡಿಯಲ್ಲಿ, ಯಾವುದೇ ಉದ್ದೇಶಕ್ಕಾಗಿಯಾದರೂ (ಲಾಟರಿ ಟಿಕೆಟ್ ಗಳು/ ಸ್ವೀಪ್ ಸ್ಟೇಕ್ ಗಳು (ಜೂಜು) / ನಿಷೇಧಿತ ನಿಯತಕಾಲಿಕಗಳು, ಇತ್ಯಾದಿಗಳ ಖರೀದಿ) ಅಥವಾ ಶೆಡ್ಯೂಲ್ – 2 ರ ಅಡಿಯಲ್ಲಿ ನಿರ್ಬಂಧಿತ ಯಾವುದೇ ವಸ್ತುಗಳ (ಚಾಲ್ತಿ ಖಾತೆ ವಹಿವಾಟು) ರವಾನೆಯನ್ನು ನಿರ್ದಿಷ್ಟವಾಗಿ ನಿಷೇಧಿಸಲಾಗಿದೆ;
  • ಸಾಗರೋತ್ತರ ವಿನಿಮಯ / ಸಾಗರೋತ್ತರ ಪ್ರತಿ-ವ್ಯಾವಹಾರಿ (ಕೌಂಟರ್ ಪಾರ್ಟಿ) ಗಳಿಗೆ ಠೇವಣಿ ಹಣ ಅಥವಾ ಠೇವಣಿ ಹಣ ಕರೆಗಳಿಗಾಗಿ ಭಾರತದಿಂದ ಹಣ ರವಾನೆ;
  • ಸಾಗರೋತ್ತರ ದ್ವಿತೀಯ ಮಾರುಕಟ್ಟೆಯಲ್ಲಿ ಭಾರತೀಯ ಕಂಪನಿಗಳು ಹೊರಡಿಸಿದ ಎಫ್ ಸಿ ಸಿ ಬಿ ಗಳ ಖರೀದಿಗೆ ಪಾವತಿ;
  • ವಿದೇಶದಲ್ಲಿ ವಿದೇಶಿ ವಿನಿಮಯ ವ್ಯಾಪಾರ ಮಾಡಲು ರವಾನೆ;
  • ನೇರವಾಗಿ ಅಥವಾ ಪರೋಕ್ಷವಾಗಿ, ನೇಪಾಳ, ಭೂತಾನ್, ಮಾರಿಷಸ್ ಮತ್ತು ಪಾಕಿಸ್ತಾನ ಗಳಿಗೆ ಹಣ ರವಾನೆ;
  • ಕಾಲಕಾಲಕ್ಕೆ, ಹಣಕಾಸು ಕ್ರಿಯೆ ಕಾರ್ಯಪಡೆ (ಎಫ್ ಎ ಟಿ ಎಫ್) ಯಿಂದ ‘ಅಸಹಕಾರಿ ರಾಷ್ಟ್ರಗಳು ಮತ್ತು ಪ್ರದೇಶಗಳು’ ಎಂದು ಗುರುತಿಸಲ್ಪಟ್ಟ ದೇಶಗಳಿಗೆ ನೇರವಾಗಿ ಅಥವಾ ಪರೋಕ್ಷವಾಗಿ ಹಣ ರವಾನೆ; ಹಾಗೂ
  • ಭಯೋತ್ಪಾದನೆಗಳಂಥ ದುಷ್ಪರಿಣಾಮವನ್ನು ಉಂಟುಮಾಡಬಹುದಾದ ವ್ಯಕ್ತಿಗಳು ಅಥವಾ ಸಂಘಟನೆಗಳು ಎಂದು ರಿಸರ್ವ್ ಬ್ಯಾಂಕಿನಿಂದ ಗುರುತಿಸಲ್ಪಟ್ಟು ಈ ಬಗ್ಗೆ ಪ್ರತ್ಯೇಕವಾಗಿ ಬ್ಯಾಂಕುಗಳಿಗೆ ಸಲಹೆ ನೀಡಿದಾಗ ಅಂಥವರಿಗೆ ನೇರವಾಗಿ ಅಥವಾ ಪರೋಕ್ಷವಾಗಿ ಹಣ ರವಾನೆ.

ಪ್ರ 4: ಎಲ್ ಆರ್ ಎಸ್ ಸೌಲಭ್ಯವು ಹಣ ರವಾನೆ ಶೆಡ್ಯೂಲ್ – 3 ರ ಅಡಿಯಲ್ಲಿ ವಿವರಿಸಲಾದ ಅಸ್ತಿತ್ವದಲ್ಲಿರುವ ಸೌಲಭ್ಯಗಳೊಂದಿಗೆ ಇರುವ ಹೆಚ್ಚುವರಿ ಸೌಲಭ್ಯವೆ?

ಉ: ಹೌದು, ವಿದೇಶಿ ವಿನಿಮಯ ನಿರ್ವಹಣೆ ಶೆಡ್ಯೂಲ್ III ನೇ (ಚಾಲ್ತಿ ಖಾತೆ ವಹಿವಾಟು) ನಿಯಮಗಳು, 2000 ದಲ್ಲಿ ವಿವರಿಸಿದಂತೆ, ಈ ಯೋಜನೆ ಅಡಿಯಲ್ಲಿ ದೊರಕುತ್ತಿರುವ ಸೌಲಭ್ಯವು, ಈಗಾಗಲೇ ಇರುವ ಖಾಸಗಿ ಪ್ರಯಾಣ, ವ್ಯಾಪಾರ ಪ್ರಯಾಣ, ಅಧ್ಯಯನಕ್ಕೆ, ವೈದ್ಯಕೀಯ ಚಿಕಿತ್ಸೆ, ಇತ್ಯಾದಿ ಸೌಲಭ್ಯದೊಂದಿಗೆ ದೊರಕುವ ಹೆಚ್ಚುವರಿಯಾದ ಸೌಲಭ್ಯವಾಗಿದೆ.ಈ ಯೋಜನೆಗಳನ್ನು ಈ ಉದ್ದೇಶಗಳಿಗಾಗಿ ಕೂಡ ಬಳಸಬಹುದು .

ಆದಾಗ್ಯೂ, ಉಡುಗೊರೆ ಮತ್ತು ದೇಣಿಗೆಗಳಿಗೆ ಪಾವತಿಯನ್ನು ಪ್ರತ್ಯೇಕಗೊಳಿಸುವುದು ಸಾಧ್ಯವಿಲ್ಲ ಆದುದರಿಂದ, ಪ್ರಸ್ತುತ ಎಲ್ ಆರ್ ಎಸ್ ನ ಅಡಿಯಲ್ಲಿ ಲಭ್ಯವಿರುವ ಮಿತಿಯಡಿಯಲ್ಲೆ ಇವುಗಳೂ ಒಳಗೊಂಡಿರುತ್ತವೆ. ಅಂತೆಯೇ, ನಿವಾಸಿ ಭಾರತೀಯ ವ್ಯಕ್ತಿಗಳು ಈ ಯೋಜನೆ ಅಡಿಯಲ್ಲಿ ಪ್ರತಿ ಆರ್ಥಿಕ ವರ್ಷಕ್ಕೆ 125,000 ಡಾಲರ್ ಮೊತ್ತದ ಉಡುಗೊರೆಗಳನ್ನು ಮತ್ತು ದೇಣಿಗೆಗಳಿಗೆ ಹಣ ಪಾವತಿ ಮಾಡಬಹುದು.

ಇದಲ್ಲದೆ, ಪ್ರತಿ ಆರ್ಥಿಕ ವರ್ಷಕ್ಕೆ ನಿವಾಸಿ ಭಾರತೀಯ ವ್ಯಕ್ತಿಯು 125,000 ಡಾಲರ್ ಮೊತ್ತದ ಒಟ್ಟಾರೆ ಮಿತಿಯೊಳಗೆಯೇ, ‘ರೂಪಾಯಿ’ ಉಡುಗೊರೆಯನ್ನು ತನ್ನನ್ನು ಭೇಟಿಯಾಗಲು ಬರುವ ಅನಿವಾಸಿ ಭಾರತೀಯರಿಗೆ / ನಿಕಟ ಸಂಬಂಧಿ ಭಾರತೀಯ ಮೂಲದ ವ್ಯಕ್ತಿಗಳಿಗೆ (ಇಲ್ಲಿ ಸಂಬಂಧಿಕರು ಎಂದರೆ, ಕಂಪನಿ ಕಾಯಿದೆ 1956 ರ ವಿಭಾಗ 6 ರಲ್ಲಿ ವ್ಯಾಖ್ಯಾನಿಸಿದಂತೆ) ಕ್ರಾಸ್ಡ್ ಚೆಕ್ / ಎಲೆಕ್ಟ್ರಾನಿಕ್ ವರ್ಗಾವಣೆ ಮೂಲಕ ಕೊಡಬಹುದಾಗಿದೆ ಮತ್ತು ಉಡುಗೊರೆಯಾಗಿ ನೀಡುವ ಈ ಮೊತ್ತವನ್ನು ಫಲಾನುಭವಿಯ ಎನ್ ಆರ್ ಒ ಖಾತೆಗೆ ಜಮೆ ಮಾಡಬಹುದಾಗಿದೆ.

ಭಾರತದಲ್ಲಿ, ಸಾಲಗಾರನ ವೈಯಕ್ತಿಕ ಅಥವಾ ವ್ಯಾವಹಾರಿಕ ಅಗತ್ಯಗಳನ್ನು ಪೂರೈಸಲು ಪ್ರತಿ ಆರ್ಥಿಕ ವರ್ಷಕ್ಕೆ ಉದಾರೀಕರಣಗೊಂಡ ರವಾನೆ ಯೋಜನೆಯಡಿಯಲ್ಲಿ ನಿವಾಸಿ ಭಾರತೀಯ ವ್ಯಕ್ತಿಯು 125,000 ಡಾಲರ್ ಮೊತ್ತದ ಒಟ್ಟಾರೆ ಮಿತಿಯೊಳಗೆಯೇ, ಹಣವನ್ನು ಅನಿವಾಸಿ ಭಾರತೀಯರಿಗೆ / ನಿಕಟ ಸಂಬಂಧಿ ಭಾರತೀಯ ಮೂಲದ ವ್ಯಕ್ತಿಗಳಿಗೆ (ಇಲ್ಲಿ ಸಂಬಂಧಿಕರು ಎಂದರೆ, ಕಂಪನಿ ಕಾಯಿದೆ 1956 ರ ವಿಭಾಗ 6 ರಲ್ಲಿ ವ್ಯಾಖ್ಯಾನಿಸಿದಂತೆ) ಕ್ರಾಸ್ಡ್ ಚೆಕ್ / ಎಲೆಕ್ಟ್ರಾನಿಕ್ ವರ್ಗಾವಣೆ ಮೂಲಕ ಸಾಲ ಕೊಡಬಹುದಾಗಿದೆ, ಆದರೆ, ಸಾಲ ಬಡ್ಡಿ ರಹಿತವಾಗಿರಬೇಕು ಮತ್ತು ಕನಿಷ್ಠ ಒಂದು ವರ್ಷದ ಮುಕ್ತಾಯಾವಧಿ (ಮ್ಯಾಚುರಿಟಿ) ಇರಬೇಕು ಮತ್ತು ಭಾರತದ ಹೊರಗೆ ರವಾನೆ ಮಾಡುವ ಹಾಗಿಲ್ಲದ ಷರತ್ತುಗಳಿಗೆ ಅನ್ವಯಿಸುತ್ತವೆ.

ಪ್ರ 5: ಈ ಯೋಜನೆಯಡಿಯಲ್ಲಿ ಇರುವ ನಿವಾಸಿ ಭಾರತೀಯ ವ್ಯಕ್ತಿಗಳು ಸಂಚಿತ ಬಡ್ಡಿ / ಠೇವಣಿಗಳ ಮೇಲೆ ಲಾಭಾಂಶ / ವಿದೇಶದಲ್ಲಿನ ಹೂಡಿಕೆಗಳ ಲಾಭಾಂಶಗಳನ್ನು ಹಾಗೂ ಎಲ್ಲಕ್ಕಿಂತ ಪ್ರಮುಖವಾಗಿ ಮೂಲ ಹಣವನ್ನು ತಾಯ್ನಾಡಾದ ಭಾರತಕ್ಕೆ ಹಿಂದಿರುಗಿಸುವ ಅಗತ್ಯವಿದೆಯೇ?

ಉ: ಹೌದು, ಭಾರತದಲ್ಲಿ, ಸಾಲಗಾರನ ವೈಯಕ್ತಿಕ ಅಥವಾ ವ್ಯಾವಹಾರಿಕ ಅಗತ್ಯಗಳನ್ನು ಪೂರೈಸಲು ಪ್ರತಿ ಆರ್ಥಿಕ ವರ್ಷಕ್ಕೆ ಉದಾರೀಕರಣಗೊಂಡ ರವಾನೆ ಯೋಜನೆಯಡಿಯಲ್ಲಿ ನಿವಾಸಿ ಭಾರತೀಯ ವ್ಯಕ್ತಿಯು 125,000 ಡಾಲರ್ ಮೊತ್ತದ ಒಟ್ಟಾರೆ ಮಿತಿಯೊಳಗೆಯೇ, ಹಣವನ್ನು ಅನಿವಾಸಿ ಭಾರತೀಯರಿಗೆ / ನಿಕಟ ಸಂಬಂಧಿ ಭಾರತೀಯ ಮೂಲದ ವ್ಯಕ್ತಿಗಳಿಗೆ (ಇಲ್ಲಿ ಸಂಬಂಧಿಕರು ಎಂದರೆ, ಕಂಪನಿ ಕಾಯಿದೆ 1956 ರ ವಿಭಾಗ 6 ರಲ್ಲಿ ವ್ಯಾಖ್ಯಾನಿಸಿದಂತೆ) ಕ್ರಾಸ್ಡ್ ಚೆಕ್ / ಎಲೆಕ್ಟ್ರಾನಿಕ್ ವರ್ಗಾವಣೆ ಮೂಲಕ ಸಾಲ ಕೊಡಬಹುದಾಗಿದೆ. ಷರತ್ತುಗಳಿಗೆ ಅನ್ವಯಿಸುತ್ತವೆ. ಸಾಲ ಬಡ್ಡಿ ರಹಿತವಾಗಿರಬೇಕು ಮತ್ತು ಕನಿಷ್ಠ ಒಂದು ವರ್ಷದ ಮುಕ್ತಾಯಾವಧಿ (ಮ್ಯಾಚುರಿಟಿ) ಇರಬೇಕು ಮತ್ತು ಭಾರತದ ಹೊರಗೆ ರವಾನೆ ಮಾಡುವ ಹಾಗಿಲ್ಲ.

ಪ್ರ 6: ಈ ಯೋಜನೆ ಅಡಿಯಲ್ಲಿ ನ ಪಾವತಿ ಒಟ್ಟು ಆಧಾರದ ಮೇಲೆಯೇ ಅಥವಾ ನಿವ್ವಳ ಆಧಾರದ ಮೇಲೆಯೇ? (ವಿದೇಶದಿಂದ ವಾಪಸಾತಿ ನಿವ್ವಳ)

ಉ: ಈ ಯೋಜನೆ ಅಡಿಯಲ್ಲಿ ನ ಪಾವತಿ ಒಟ್ಟು ಆಧಾರದ ಮೇಲೆ.
 

ಪ್ರ 7: ಈ ಸೌಲಭ್ಯದಡಿಯಲ್ಲಿ ನ ಹಣ ಪಾವತಿ ಕುಟುಂಬ ಸದಸ್ಯರಿಗೆ ಸಂಬಂಧಿಸಿದಂತೆ ಕ್ರೋಢೀಕರಿಸಲು ಸಾಧ್ಯವೇ?

ಉ: ವೈಯಕ್ತಿಕ ಕುಟುಂಬ ಸದಸ್ಯರು ಯೋಜನೆಯ ನಿಯಮಗಳು ಮತ್ತು ಷರತ್ತುಗಳನ್ನು ಅನುಸರಿಸಿದಲ್ಲಿ, ಈ ಸೌಲಭ್ಯದಡಿಯಲ್ಲಿ ನ ಹಣ ಪಾವತಿ ಕುಟುಂಬ ಸದಸ್ಯರಿಗೆ ಸಂಬಂಧಿಸಿದಂತೆ ಕ್ರೋಢೀಕರಿಸಲು ಸಾಧ್ಯ.

ಪ್ರ 8: ಈ ಯೋಜನೆಯನ್ನು ನೇರವಾಗಿ ಅಥವಾ ಹರಾಜಿನ ಮೂಲಕ ಕಲಾ ಕೃತಿಗಳನ್ನು (ವರ್ಣಚಿತ್ರಗಳು, ಇತ್ಯಾದಿ) ಖರೀದಿಸಲು ಬಳಸಬಹುದೆ?

ಉ: ಭಾರತ ಸರ್ಕಾರದ ಉಪಲಬ್ಧ ವಿದೇಶಿ ವ್ಯಾಪಾರ ನೀತಿ ಹಾಗೂ ಇತರ ಕಾನೂನುಗಳಿಗೆ ಅನ್ವಯವಾಗುವಂತೆ, ಈ ಯೋಜನೆಯನ್ನು ನೇರವಾಗಿ ಅಥವಾ ಹರಾಜಿನ ಮೂಲಕ ಕಲಾ ಕೃತಿಗಳನ್ನು ಖರೀದಿಸಲು ಬಳಸಬಹುದು.

ಪ್ರ 9: ಎ ಡಿ, ಹಣ ಪಾವತಿಯ ಅನುಮತಿಯನ್ನು ವ್ಯವಹಾರ ಸ್ವರೂಪದ ಆಧಾರದ ಮೇಲೆ ಪರಿಶೀಲಿಸುವ ಅಗತ್ಯತೆ ಇದೆಯೇ ಅಥವಾ ಪಾವತಿದಾರನ ಅರಿಕೆ (ಘೋಷಣೆ) ಯನ್ನು ಆಧರಿಸಿ ಹಣ ಪಾವತಿಗೆ ಅನುಮತಿಸಬಹುದೇ?

ಉ: ಪಾವತಿದಾರ ಘೋಷಿಸಿದ ವ್ಯವಹಾರ ಸ್ವರೂಪದ ಆಧಾರದ ಮೇಲೆ ಎ.ಡಿ. ಮಾಹಿತಿ ಪಡೆಯುತ್ತದೆ (ಮಾರ್ಗದರ್ಶಿಸಲ್ಪಡುತ್ತದೆ) ಹಾಗೂ ಈ ಹಣ ಪಾವತಿಯು ಭಾರತೀಯ ರಿಸರ್ವ್ ಬ್ಯಾಂಕ್ ಕಾಲ ಕಾಲಕ್ಕೆ ಹೊರಡಿಸಿದ ಸೂಚನೆಗಳೊಂದಿಗೆ ಅನುಸರಣೆ ಹೊಂದಿದೆ ಎಂಬುದನ್ನು ಪ್ರಮಾಣೀಕರಿಸುತ್ತದೆ.

ಪ್ರ 10: ಈ ಯೋಜನೆ ಅಡಿಯಲ್ಲಿ , ಇ ಎಸ್ ಒ ಪಿ ಗಳನ್ನು ( ESOPs) ಸ್ವಾಧೀನ ಪಡಿಸಿಕೊಳ್ಳಲು ಹಣ ಪಾವತಿ ಮಾಡಬಹುದೇ?

ಉ: ಈ ಯೋಜನೆಯನ್ನು ಇ ಎಸ್ ಒ ಪಿ ಗಳನ್ನು ( ESOPs) ಸ್ವಾಧೀನ ಪಡಿಸಿಕೊಳ್ಳಲು ಹಣ ಪಾವತಿ ಮಾಡಲು ಕೂಡ ಬಳಸಬಹುದು.

ಪ್ರ 11: ಇ ಎಸ್ ಒ ಪಿ ಗಳನ್ನು ( ESOPs) ಸ್ವಾಧೀನದ ಜೊತೆಗೆ ಈ ಯೋಜನೆ ಎಡಿಆರ್ / ಜಿಡಿಆರ್ ಗೆ ಸಂಬಂಧ ಹೊಂದಿದೆಯೇ? (ಅಂದರೆ ಡಾಲರ್ 50,000 / - 5 ಕ್ಯಾಲೆಂಡರ್ ವರ್ಷಗಳ ಅವಧಿಗೆ)

ಉ: ಈ ಯೋಜನೆ ಅಡಿಯಲ್ಲಿ ಹಣ ಪಾವತಿಯು, ಇ ಎಸ್ ಒ ಪಿ ಗಳನ್ನು ( ESOPs) ಸ್ವಾಧೀನ ಪಡಿಸಿಕೊಳ್ಳುವುದರೊಂದಿಗೆ, ಹೆಚ್ಚುವರಿಯಾಗಿ ಎಡಿಆರ್ / ಜಿಡಿಆರ್ ನೊಂದಿಗೆ ಕೂಡ ಸಂಬಂಧ (ಲಿಂಕ್) ಹೊಂದಿದೆ.

ಪ್ರ 12: ಈ ಯೋಜನೆಯು ಹೆಚ್ಚುವರಿಯಾಗಿ ಅರ್ಹತೆ ಷೇರುಗಳ ಸ್ವಾಧೀನಕ್ಕೆ ಬಳಸಬಹುದೇ? (ಅರ್ಥಾತ್ ಡಾಲರ್ 7,500 ಅಥವಾ ಸಾಗರೋತ್ತರ ಕಂಪನಿಯ 1% ರಷ್ಟು ಬಂಡವಾಳ ಪಾವತಿಸಲು. ಯಾವುದು ಕಡಿಮೆಯೋ ಅದನ್ನು ಪರಿಗಣಿಸುವುದು)

ಉ: ಈ ಯೋಜನೆ ಅಡಿಯಲ್ಲಿ, ಹೆಚ್ಚುವರಿಯಾಗಿ ಅರ್ಹತೆ ಷೇರುಗಳ ಸ್ವಾಧೀನಕ್ಕೆ ಹಣ ಪಾವತಿಸಬಹುದು.

ಪ್ರ 13: ನಿವಾಸಿ ಭಾರತೀಯ ವ್ಯಕ್ತಿಯು, ಈ ಯೋಜನೆಯಡಿಯಲ್ಲಿ, ಮ್ಯೂಚುಯಲ್ ಫಂಡ್ ಗಳು, ವೆಂಚರ್ ಫಂಡ್ ಗಳು, ರೇಟಿಂಗ್ ಇಲ್ಲದ ಸಾಲ ಭದ್ರತೆ , ಪ್ರಾಮಿಸರಿ, ಇತ್ಯಾದಿ ಯೂನಿಟ್ ಗಳ ಮೇಲೆ ಹೂಡಿಕೆ ಮಾಡಬಹುದೆ?

ಉ: ನಿವಾಸಿ ಭಾರತೀಯ ವ್ಯಕ್ತಿಯು, ಈ ಯೋಜನೆಯಡಿಯಲ್ಲಿ, ಮ್ಯೂಚುಯಲ್ ಫಂಡ್ ಗಳು, ವೆಂಚರ್ ಫಂಡ್ ಗಳು, ರೇಟಿಂಗ್ ಇಲ್ಲದ ಸಾಲ ಭದ್ರತೆ , ಪ್ರಾಮಿಸರಿ, ಇತ್ಯಾದಿ ಯೂನಿಟ್ ಗಳ ಮೇಲೆ ಹೂಡಿಕೆ ಮಾಡಬಹುದು. ಇದಲ್ಲದೆ, ನಿವಾಸಿ ಭಾರತೀಯ ವ್ಯಕ್ತಿಯು, ಈ ಯೋಜನೆ ಅಡಿಯಲ್ಲಿ ಇದೇ ಉದ್ದೇಶಕ್ಕಾಗಿ ವಿದೇಶದಲ್ಲಿ ತೆರೆದ ಬ್ಯಾಂಕ್ ಖಾತೆಯ ಮೂಲಕವೂ ಇಂಥ ಭದ್ರತೆಗಳ ಮೇಲೆ ಹೂಡಿಕೆ ಮಾಡಬಹುದು.

ಪ್ರ 14: ಸಾಗರೋತ್ತರ ಕಂಪನಿಯೊಂದರ ಪಟ್ಟಿಯಲ್ಲಿ ಸೇರಿದ ಹಾಗೂ ಪಟ್ಟಿಯಲ್ಲಿ ಸೇರಿಸದ ಷೇರುಗಳ ಸ್ವಾಧೀನಕ್ಕೆ ಎಲ್ ಆರ್ ಎಸ್ ನ್ನು ಬಳಸಬಹುದೇ?

ಉ: ಉಪಲಬ್ಧ ಎಫ್ ಈ ಎಮ್ ಎ (FEMA) ನಿಬಂಧನೆಗಳ ಪರಿಭಾಷೆಯಲ್ಲಿ, ಸಾಗರೋತ್ತರ ಕಂಪನಿಯ ಪಟ್ಟಿಯಲ್ಲಿ ಸೇರಿದ ಹಾಗೂ ಪಟ್ಟಿಯಲ್ಲಿ ಸೇರಿಸದ ಷೇರುಗಳನ್ನು ಪಡೆಯಲು ಎಲ್ ಆರ್ ಎಸ್ ( LRS) ನ್ನು ಬಳಸಬಹುದು.

ಪ್ರ 15: ಈ ಯೋಜನೆ ಅಡಿಯಲ್ಲಿ, ಒಬ್ಬ ವ್ಯಕ್ತಿಯು ಅನಿವಾಸಿ ಭಾರತೀಯ ಆಗಿದ್ದಾಗ ವಿದೇಶದಲ್ಲಿ ಸಾಲ ಪಡೆದಿದ್ದರೆ, ಭಾರತಕ್ಕೆ ಹಿಂದಿರುಗಿದ ಮೇಲೆ, ನಿವಾಸಿ ಭಾರತಿಯ ವ್ಯಕ್ತಿಯಾಗಿ ಆ ಸಾಲವನ್ನು ಮರುಪಾವತಿ ಮಾಡಬಹುದೆ?

ಉ: ಹೌದು. ಮಾಡಬಹುದು.

ಪ್ರ 16: ಈ ಯೋಜನೆ ಅಡಿಯಲ್ಲಿ , ನಿವಾಸಿ ಭಾರತೀಯ ವ್ಯಕ್ತಿಯು, ಬಾಹ್ಯ ಪಾವತಿ ಮಾಡಲು ಪ್ಯಾನ್ ಸಂಖ್ಯೆಯನ್ನು ಹೊಂದಿರುವುದು ಕಡ್ಡಾಯವೆ?

ಉ: ಈ ಯೋಜನೆ ಅಡಿಯಲ್ಲಿ , ನಿವಾಸಿ ಭಾರತೀಯ ವ್ಯಕ್ತಿಯು, ಪಾವತಿ ಮಾಡಲು ಪ್ಯಾನ್ ಸಂಖ್ಯೆಯನ್ನು ಹೊಂದಿರುವುದು ಕಡ್ಡಾಯ.

ಪ್ರ 17: ಒಂದು ವೇಳೆ, ನಿವಾಸಿ ಭಾರತೀಯ ವ್ಯಕ್ತಿಯು ವಿದೇಶದಲ್ಲಿ ತನ್ನ ಖಾಸಗಿ ಭೇಟಿ ಸಮಯದಲ್ಲಿ ಡಿಮ್ಯಾಂಡ್ ಡ್ರಾಫ್ಟ್ ವಿನಂತಿಗಳನ್ನು (ತನ್ನ ಸ್ವಂತ ಹೆಸರಿನಲ್ಲಿ ಅಥವಾ ಯಾರ ಜೊತೆಯಲ್ಲಿ ಅನುಮೋದಿತ ವ್ಯವಹಾರ ಮಾಡುವ ಉದ್ದೇಶವಿದೆಯೋ, ಆ ಫಲಾನುಭವಿಯ ಹೆಸರಿನಲ್ಲಿ) ಸಲ್ಲಿಸುವ ಮೂಲಕ ಬಾಹ್ಯ ಪಾವತಿ ಮಾಡುವುದಾಗಿ ವಿನಂತಿಸಿಕೊಂಡರೆ, ಸ್ವಯಂ ಘೋಷಣೆಯ ಆಧಾರದ ಮೇಲೆ ಬಾಹ್ಯ ಪಾವತಿಯ ಸಾಧ್ಯತೆ ಇದೆಯೇ?

ಉ: ಈ ಯೋಜನೆ ಅಡಿಯಲ್ಲಿ ತಿಳಿಸಲಾದ ವಿಧಾನದಲ್ಲಿ, ನಿವಾಸಿ ಭಾರತೀಯ ವ್ಯಕ್ತಿಯು ತನ್ನ ಘೋಷಣೆಯ ಆಧಾರದ ಮೇಲೆ ಇಂಥ ಬಾಹ್ಯ ಹಣ ಪಾವತಿಯನ್ನು ಡಿಡಿ ರೂಪದಲ್ಲಿ ಮಾಡಬಹುದು.

Qಪ್ರ 18: ಪಾವತಿ ಆವರ್ತನಗಳ ಮೇಲೆ ಯಾವುದಾದರೂ ನಿರ್ಬಂಧಗಳಿವೆಯೇ?

ಉ: ಆವರ್ತನಗಳ ಮೇಲೆ ಯಾವುದೇ ನಿರ್ಬಂಧಗಳಿಲ್ಲ. ವಿದೇಶಿ ವಿನಿಮಯದಿಂದ ಖರೀದಿಸಿದ ಅಥವಾ ಪಾವತಿಸಿದ ಒಟ್ಟು ಮೊತ್ತ, ಭಾರತದಲ್ಲಿ, ಎಲ್ಲ ಮೂಲಗಳಿಂದ, ಒಂದು ಆರ್ಥಿಕ ವರ್ಷದಲ್ಲಿ, ಡಾಲರ್ 125,000 ಸಂಚಿತ ಮಿತಿಯೊಳಗೆ ಇರಬೇಕು.

ಪ್ರ 19: ಪಾವತಿದಾರನು ಅನುಸರಿಸಬೇಕಾದ ಅಗತ್ಯತೆಗಳೇನು?

ಉ: ಈ ಯೋಜನೆಯಡಿಯಲ್ಲಿ ಹಣ ಪಾವತಿ ಮಾಡಲು ವ್ಯಕ್ತಿಯು ಎ ಡಿ ಯ ಒಂದು ಶಾಖೆಯನ್ನು ನೇಮಿಸಬೇಕು. ಅಭ್ಯರ್ಥಿಗಳು ಹಣ ಪಾವತಿ ಮಾಡುವ ಮೊದಲು ಕನಿಷ್ಠ ಒಂದು ವರ್ಷದ ಕಾಲ ಈ ಬ್ಯಾಂಕ್ ಖಾತೆಯನ್ನು ನಿರ್ವಹಣೆ ಮಾಡಿರಬೇಕು. ಹಣ ಪಾವತಿ ಮಾಡಲು ಬಯಸುವ ಅರ್ಜಿದಾರ ಬ್ಯಾಂಕಿನ ಹೊಸ ಗ್ರಾಹಕರಾದ ಪಕ್ಷದಲ್ಲಿ, ಅಧಿಕೃತ ಡೀಲರುಗಳ ಖಾತೆ ತೆರೆಯುವ, ಕಾರ್ಯಾಚರಣೆ ಮತ್ತು ನಿರ್ವಹಣೆ ಕಾರ್ಯದಲ್ಲಿ ತೊಡಗಿಕೊಳ್ಳುವ ಅಗತ್ಯವಿರುತ್ತದೆ. ಇದಲ್ಲದೆ, ಹಣದ ಮೂಲ ತೃಪ್ತಿಕರವಾಗಿದೆಯೇ ಎಂದು ಪರಿಶೀಲಿಸಲು, ಎ ಡಿ ಯು, ಅರ್ಜಿದಾರರಿಂದ ಹಿಂದಿನ ವರ್ಷದ ಸ್ಟೇಟ್‍ಮೆಂಟ್‍ ಪಡೆಯಬೇಕು. ಅಂಥ ಬ್ಯಾಂಕ್ ಸ್ಟೇಟ್‍ಮೆಂಟ್‍ ಲಭ್ಯವಿಲ್ಲದಿದ್ದರೆ, ಅರ್ಜಿದಾರ ಸಲ್ಲಿಸಿದ ಇತ್ತೀಚಿನ ಆದಾಯ ತೆರಿಗೆ ನಿರ್ಧಾರಣ ಆದೇಶ ಅಥವಾ ರಿಟರ್ನ್ ನ ಪ್ರತಿಗಳನ್ನು ಪಡೆಯಬಹುದು. ಅವರು ಅರ್ಜಿ – ಕಮ್ – ಘೋಷಣೆಯನ್ನು ಈ ಉದ್ದೇಶಕ್ಕಾಗಿ ಇರುವ ನಿರ್ಧಾರಿತ ವಿಧಾನದಲ್ಲಿ ಒದಗಿಸಬೇಕು ಹಾಗೂ ಹಣವು ತನಗೇ ಸೇರಿದ್ದು ಹಾಗೂ ಯೋಜನೆ ಅಡಿಯಲ್ಲಿ ನಿಷೇಧಿಸಲಾದ ಹಾಗೂ ನಿರ್ಬಂಧಿಸಲಾದ ಉದ್ದೇಶಗಳಿಗಾಗಿ ಬಳಸಲಾಗುವುದಿಲ್ಲ ಎಂದು ಘೋಷಿಸಬೇಕು.

ಪ್ರ 20: ಒಂದು ಹಣಕಾಸು ವರ್ಷದಲ್ಲಿ ಪಾವತಿ ಮಾಡಿದ ಹಣವನ್ನು ವಾಪಾಸು ಮಾಡಿದ ಒಬ್ಬ ವ್ಯಕ್ತಿಯು, ಮತ್ತೊಮ್ಮೆ ಈ ಸೌಲಭ್ಯ ಪಡೆದುಕೊಳ್ಳಬಹುದೆ?

ಉ: ಈ ಯೋಜನೆಯಡಿಯಲ್ಲಿ ಡಾಲರ್ 125,000 ವರೆಗಿನ ಮೊತ್ತವನ್ನು ಪಾವತಿ ಮಾಡಿದ ಮೇಲೆ, ಬಂಡವಾಳದ ಆದಾಯವು ಮತ್ತೆ ದೇಶದಲ್ಲಿ ಮರಳಿ ಬಂದಿದ್ದರೂ ಕೂಡ ಒಮ್ಮೆ, ಒಂದು ಹಣಕಾಸು ವರ್ಷದಲ್ಲಿ ಮತ್ತೆ ಹಣ ಪಾವತಿ ಮಾಡಲು ಅವರು ಅರ್ಹರಾಗಿರುವುದಿಲ್ಲ.

ಪ್ರ 21: ಹಣ ಪಾವತಿಯನ್ನು ಅಮೆರಿಕಾದ ಡಾಲರ್ ಗಳಲ್ಲಿ ಮಾತ್ರವೇ ಮಾಡುವ ಅಗತ್ಯತೆ ಇದೆಯೆ?

ಉ: ಒಂದು ಆರ್ಥಿಕ ವರ್ಷದಲ್ಲಿ, ಅಮೇರಿಕಾದ ಡಾಲರ್ 125,000 ಗೆ ಸಮಾನ ಮೊತ್ತದ ಯಾವುದೇ ಮುಕ್ತವಾಗಿ ಪರಿವರ್ತಿಸಲಾಗುವ (ಕನ್ವರ್ಟಿಬಲ್) ವಿದೇಶಿ ಕರೆನ್ಸಿಯಲ್ಲಿ ಹಣ ಪಾವತಿ ಮಾಡಬಹುದು.

ಪ್ರ 22: ಈ ಹಿಂದೆ, ನಿವಾಸಿ ಭಾರತೀಯ ವ್ಯಕ್ತಿಗಳು ವಿದೇಶದಲ್ಲಿ ಮಾನ್ಯತೆ ಪಡೆದ ಷೇರು ವಿನಿಮಯ ಕೇಂದ್ರದಲ್ಲಿ ಪಟ್ಟಿಯಾದ ಮತ್ತು ಭಾರತದಲ್ಲಿ ಮಾನ್ಯತೆ ಪಡೆದ ಷೇರು ವಿನಿಮಯ ಕೇಂದ್ರದಲ್ಲಿ ಪಟ್ಟಿಯಾದ, ಭಾರತೀಯ ಕಂಪನಿಯಲ್ಲಿ ಕನಿಷ್ಠ ಶೇ 10 ಷೇರುಗಳನ್ನು ಹೊಂದಿದ ವಿದೇಶಿ ಕಂಪನಿಗಳಲ್ಲಿ ಹೂಡಿಕೆ ಮಾಡಬಹುದಾಗಿತ್ತು. ಈ ಪರಿಸ್ಥಿತಿ ಇನ್ನೂ ಅಸ್ತಿತ್ವದಲ್ಲಿರುವುದೆ?

ಉ: ನಿವಾಸಿ ಭಾರತೀಯ ವ್ಯಕ್ತಿಯಿಂದ ವಿದೇಶಿ ಕಂಪನಿಗಳಲ್ಲಿ ಬಂಡವಾಳ ಹೂಡಿಕೆಯು, ಡಾಲರ್ 125,000 ಯೋಜನೆ ಅಡಿಯಲ್ಲಿ ಅವಲಂಬಿತವಾಗಿರುತ್ತದೆ (ಒಳಗೊಂಡಿರುತ್ತದೆ). ಇಂತಹ ವಿದೇಶಿ ಕಂಪನಿಗಳಿಂದ ಭಾರತೀಯ ಪಟ್ಟಿಯಾದ ಕಂಪೆನಿಗಳಲ್ಲಿ ಶೇಕಡ 10 ರಷ್ಟು ಪರಸ್ಪರ ಷೇರು ಹೊಂದಬೇಕೆಂಬ ಅವಶ್ಯಕತೆಯನ್ನು ಈಗ ನಿವಾರಿಸಲಾಗಿದೆ.

ಪ್ರ 23: ನಿವಾಸಿ ಭಾರತೀಯ ವ್ಯಕ್ತಿಗಳು, ವಿದೇಶದಲ್ಲಿ ಕಂತು ಆಧಾರದ ಮೇಲೆ ಸ್ವಾಧೀನಪಡಿಸಿಕೊಂಡ ಸ್ಥಿರಾಸ್ತಿ ಗಳ ಮೇಲೆ ಹೂಡಿಕೆಗಳಿಗೆ ಸಂಬಂಧಿಸಿದಂತೆ ಎಲ್ ಆರ್ ಎಸ್ ನ ಅಡಿಯಲ್ಲಿ ಹಣ ಪಾವತಿ ಮಾಡಬಹುದೆ?

ಉ: ನಿವಾಸಿ ಭಾರತೀಯ ವ್ಯಕ್ತಿಗಳು ಡಾಲರ್ 125,000 ವಾರ್ಷಿಕ ಮಿತಿಯೊಳಗೆ ಸ್ಥಿರ ಆಸ್ತಿ ಸ್ವಾಧೀನಕ್ಕೆ ಪಾವತಿ ಮಾಡಲು ಅನುಮತಿ ಇರುತ್ತದೆ..

ಪ್ರ 24: ವಿದೇಶದಲ್ಲಿ ಜಂಟಿ ಉದ್ಯಮಗಳನ್ನು ಸ್ವಾಧೀನ ಪಡಿಸಿಕೊಳ್ಳಲು ಪಾವತಿ ಮಾಡಬಹುದೆ?

ಉ: ಆಗಸ್ಟ್ 05, 2013 ರಿಂದ ಜಾರಿಗೆ ಬಂದಿರುವಂತೆ, ಈ ಯೋಜನೆಯನ್ನು, ನಿವಾಸಿ ಭಾರತೀಯ ವ್ಯಕ್ತಿಗಳು, ಎಫ್ ಈ ಎಮ್ ಎ (FEMA) ಅಧಿಸೂಚನೆ No.263 ರ ನಿಯಮಗಳು ಹಾಗೂ ಷರತ್ತುಗಳಿಗೆ ನಿಗದಿತವಾಗಿ, ಭಾರತದ ಹೊರಗೆ ನೈಜ ಹಾಗೂ ನ್ಯಾಯಯುತ ಚಟುವಟಿಕೆ ಹೊಂದಿರುವ ಡಾಲರ್ 125,000 ಸಂಚಿತ ಮಿತಿಯೊಳಗೆ ಜಂಟಿ ಉದ್ಯಮಗಳನ್ನು (JV)/ ಸಂಪೂರ್ಣ ಮಾಲೀಕತ್ವ ಅಧೀನ (WOS) ಉದ್ಯಮಗಳನ್ನು ಸ್ಥಾಪಿಸಲು ಬಳಸಬಹುದು.

ಭಾಗ - ಬ:

ಹಣಕಾಸಿನ ಮಧ್ಯಸ್ಥಗಾರರಿಗೆ ಮಾರ್ಗ ಸೂಚಿಗಳು.

ಪ್ರ 25: ಮಧ್ಯವರ್ತಿಗಳು, ಗ್ರಾಹಕರಿಗಾಗಿ ಲಭ್ಯವಿರುವ ಸಾಗರೋತ್ತರ ಹೂಡಿಕೆ ಮಾಡಲು ನಿರ್ದಿಷ್ಟ ಅನುಮತಿ ಪಡೆಯಬೇಕೆಂದು ನಿರೀಕ್ಷಿಸಲಾಗುವುದೆ?

ಉ: ಭಾರತದಲ್ಲಿ ಕಾರ್ಯಕಾರಿ ಉಪಸ್ಥಿತಿಯನ್ನು ಹೊಂದದ ಬ್ಯಾಂಕ್ ಗಳನ್ನೂ ಒಳಗೊಂಡಂತೆ, ಎಲ್ಲ ಬ್ಯಾಂಕ್ ಗಳೂ ಬ್ಯಾಂಕಿಂಗ್ ಕಾರ್ಯಾಚರಣೆ ಮತ್ತು ಅಭಿವೃದ್ಧಿ ಇಲಾಖೆ, ಕೇಂದ್ರ ಕಛೇರಿ, ಭಾರತೀಯ ರಿಸರ್ವ್ ಬ್ಯಾಂಕ್, ಕೇಂದ್ರ ಕಛೇರಿ ಕಟ್ಟಡ, ಶಹೀದ್ ಭಗತ್ ಸಿಂಗ್ ಮಾರ್ಗ, ಮುಂಬೈ ಯಿಂದ ತಮ್ಮ ವಿದೇಶಿ / ಸಾಗರೋತ್ತರ ಶಾಖೆಗಳಿಗೆ ಠೇವಣಿಗಳನ್ನು ಕೋರುವುದಕ್ಕೋಸ್ಕರ ಅಥವಾ ಸಾಗರೋತ್ತರ ಮ್ಯೂಚುಯಲ್ ನಿಧಿಗಳು ಅಥವಾ ಯಾವುದೇ ವಿದೇಶಿ ಹಣಕಾಸು ಸೇವೆಗಳ ಕಂಪನಿಗೆ ಏಜೆಂಟ್ ಆಗಿ ಕಾರ್ಯ ನಿರ್ವಹಿಸಲು ಮುಂಚೆಯೇ ಅನುಮೋದನೆ ಪಡೆಯುವ ಅಗತ್ಯವಿದೆ.

ಪ್ರ 26: ಒಬ್ಬ ವ್ಯಕ್ತಿಯು, ಸಾಲದ ವಿಧ / ಗುಣಮಟ್ಟ ಅಥವಾ ಇಕ್ವಿಟಿ ಇನ್ಸ್ಟ್ರುಮೆಂಟ್ ಗಳ ಮೇಲೆ ಹೂಡಿಕೆ ಮಾಡಲು ಯಾವುದೇ ನಿರ್ಬಂಧಗಳು ಇವೆಯೆ?

ಉ: ಉದಾರೀಕರಣ ರವಾನೆ ಯೋಜನೆ ಅಡಿಯಲ್ಲಿ ಯಾವುದೇ ರೇಟಿಂಗ್ ಅಥವಾ ಮಾರ್ಗದರ್ಶನಗಳನ್ನು ಶಿಫಾರಸು ಮಾಡಲಾಗಿಲ್ಲ. ಆದಾಗ್ಯೂ, ಹೂಡಿಕೆದಾರ ಈ ಯೋಜನೆಯಡಿ ಹೂಡಿಕೆ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಾಗ ಕಾರ್ಯತತ್ಪರತೆ ಆಚರಿಸಲು ನಿರೀಕ್ಷಿಸಲಾಗುವುದು.

ಪ್ರ 27: ಭಾರತೀಯ ರೂಪಾಯಿ ಅಥವಾ ವಿದೇಶಿ ಕರೆನ್ಸಿಯ ಸಾಲ ಸೌಲಭ್ಯಗಳನ್ನು ಅಂತಹ ಠೇವಣಿಗಳ ಭದ್ರತೆಯ ಪ್ರತಿಯಾಗಿ ಅನುಮತಿಸಲಾಗುವುದೆ?

ಉ: ಇಲ್ಲ. ಈ ಯೋಜನೆಯು ಠೇವಣಿಗಳ ಭದ್ರತೆಯ ಪ್ರತಿಯಾಗಿ ಸಾಲ ಸೌಲಭ್ಯದ ವಿಸ್ತರಣೆಯನ್ನು ನಿರೀಕ್ಷಿಸುವುದಿಲ್ಲ. ಇದಲ್ಲದೆ, ಈ ಯೋಜನೆಯಡಿಯಲ್ಲಿ, ಬ್ಯಾಂಕುಗಳು ಬಾಹ್ಯ ಪಾವತಿ ಸುಲಭಗೊಳಿಸಲು ನಿವಾಸಿ ಭಾರತೀಯ ವ್ಯಕ್ತಿಗಳಿಗೆ ಸಾಲ ಸೌಲಭ್ಯಗಳನ್ನು ಸುಲಭಗೊಳಿಸಲು ಯಾವುದೇ ವಿಧದ ವಿಸ್ತರಣೆ ನೀಡುವಂತಿಲ್ಲ.

ಪ್ರ 28: ಈ ಯೋಜನೆ ಅಡಿಯಲ್ಲಿ ಬ್ಯಾಂಕರ್ ಗಳು ಭಾರತೀಯ ನಿವಾಸಿಗಳಿಗೆ ಭಾರತದಲ್ಲಿ ಮುಕ್ತ ವಿದೇಶಿ ಕರೆನ್ಸಿ ಖಾತೆಗಳನ್ನು ತೆರೆಯಬಹುದೆ?

ಉ: ಇಲ್ಲ. ಈ ಯೋಜನೆ ಅಡಿಯಲ್ಲಿ ಬ್ಯಾಂಕ್ ಗಳು ಭಾರತೀಯ ನಿವಾಸಿಗಳಿಗೆ ಭಾರತದಲ್ಲಿ ಮುಕ್ತ ವಿದೇಶಿ ಕರೆನ್ಸಿ ಖಾತೆಗಳನ್ನು ತೆರೆಯುವಂತಿಲ್ಲ.

ಪ್ರ 29: ಈ ಯೋಜನೆ ಅಡಿಯಲ್ಲಿ, ಭಾರತದಲ್ಲಿನ ಕಡಲಾಚೆಯ ಬ್ಯಾಂಕಿಂಗ್ ಘಟಕ (OBU) ವನ್ನು, ಭಾರತೀಯ ನಿವಾಸಿಗಳು ವಿದೇಶಿ ಕರೆನ್ಸಿ ಖಾತೆಗಳನ್ನು ತೆರೆಯುವ ಉದ್ದೇಶದಲ್ಲಿ, ಭಾರತದ ಹೊರಗಿನ ಒಂದು ಬ್ಯಾಂಕ್ ಶಾಖೆಗೆ ಸರಿ ಸಮಾನವೆಂದು ಪರಿಗಣಿಸಬಹುದೆ?

ಉ: ಇಲ್ಲ. ಯೋಜನೆಯ ಉದ್ದೇಶಕ್ಕಾಗಿ, ಭಾರತದಲ್ಲಿನ ಕಡಲಾಚೆಯ ಬ್ಯಾಂಕಿಂಗ್ ಘಟಕ (OBU) ವೊಂದನ್ನು ಭಾರತದಲ್ಲಿ ಬ್ಯಾಂಕ್ ನ ಕಡಲಾಚೆಯ ಶಾಖೆ ಎಂದು ಪರಿಗಣಿಸಲಾಗುವುದಿಲ್ಲ.
ಸದರಿ ಪ್ರಶ್ನೋತ್ತರಗಳನ್ನು ಆರ್ ಬಿ ಐ ನ ಜಾಲತಾಣದಿಂದ ಸಂಗ್ರಹಿಸಲಾಗಿದೆ.
longbanner rect1 rect2 rect3 rect4

ಹಕ್ಕುತ್ಯಾಗ: ಈ ಜಾಲತಾಣದ ವಿಷಯ ಕೇವಲ ಮಾಹಿತಿ ಹಂಚಿಕೆಗಾಗಿ. ಯಾವುದೇ ರೀತಿಯ ವ್ಯವಹಾರಕ್ಕಾಗಿ ಆಕರ್ಷಿಸಲು ರೂಪಿಸಿದ್ದಲ್ಲ.

2015 ಸಿಂಡಿಕೇಟ್ ಬ್ಯಾಂಕ್ . ಎಲ್ಲ ಹಕ್ಕುಗಳನ್ನೂ ಕಾಯ್ದಿರಿಸಲಾಗಿದೆ     1280 x 800 ರಲ್ಲಿ ಈ ಜಾಲತಾಣವನ್ನು ಉತ್ತಮವಾಗಿ ವೀಕ್ಷಿಸಬಹುದು