Syndicate Bank
about
 

ಅನಿವಾಸಿ ಭಾರತೀಯರು (ಎನ್ಆರ್‌ಐ ) ಹಾಗೂ ಭಾರತೀಯ ಮೂಲದ ವ್ಯಕ್ತಿಗಳಿಗೆ (ಪಿಐಒಗಳು) ಸೌಲಭ್ಯಗಳು

 
ಅನಿವಾಸಿ ಭಾರತೀಯ (ಎನ್ಆರ್‌ಐ ) ಎಂದರೆ ಭಾರತದ ಹೊರಗೆ ವಾಸಿಸುತ್ತಿರುವ ಭಾರತೀಯ ನಾಗರಿಕ ಅಥವಾ ಭಾರತೀಯ ಮೂಲದ ವ್ಯಕ್ತಿ.

ಈ ಉದ್ದೇಶದಲ್ಲಿ ಭಾರತೀಯ ಮೂಲದ ಒಬ್ಬ ವ್ಯಕ್ತಿ (ಪಿಐಒ) ಎಂದರೆ, ಎಫ್ ಇ ಎಂ ಎ ನೋಟಿಫಿಕೇಶನ್ ನ ರೆಗ್ಯುಲೇಶನ್ 2 ರಲ್ಲಿ ವ್ಯಾಖ್ಯಾನಿಸಿದಂತೆ, ಬಾಂಗ್ಲಾದೇಶ ಮತ್ತು ಪಾಕಿಸ್ತಾನ ದೇಶಗಳನ್ನು ಹೊರತುಪಡಿಸಿ ಬೇರೆ ಯಾವುದೇ ದೇಶದ ಒಬ್ಬ ವ್ಯಕ್ತಿ ಎ) ಅವರು ಯಾವುದೇ ಸಮಯದಲ್ಲಿ ಭಾರತೀಯ ಪಾಸ್ ಪೋರ್ಟ್ ಹೊಂದಿದ್ದಲ್ಲಿ ಬಿ) ಭಾರತೀಯ ಸಂವಿಧಾನದ ಪ್ರಕಾರ ಅಥವಾ ನಾಗರಿಕತ್ವ ಕಾಯಿದೆ 1955 (1955 ರ 57) ಪ್ರಕಾರ ಆ ವ್ಯಕ್ತಿ ಅಥವಾ ಅವರ ತಂದೆ ತಾಯಿಗಳು ಅಥವಾ ಅವರ ಅಜ್ಜ-ಅಜ್ಜಿಯರು ಭಾರತೀಯ ನಾಗರಿಕರಾಗಿದ್ದಲ್ಲಿ ಸಿ) ಆ ವ್ಯಕ್ತಿ ಭಾರತೀಯ ನಾಗರಿಕನ/ಳ ಪತಿ/ಪತ್ನಿ ಯಾಗಿದ್ದಲ್ಲಿ ಅಥವಾ ಉಪಕಾಯಿದೆ ಎ ಅಥವಾ ಬಿ ಯಲ್ಲಿ ಉಲ್ಲೇಖಿಸಿದ ವ್ಯಕ್ತಿಯಾಗಿದ್ದಲ್ಲಿ ಭಾರತೀಯ ಮೂಲದ ವ್ಯಕ್ತಿ

ನಿಕಟ ಸಂಬಂಧಿ ಎಂದರೆ, ಕಂಪನಿ ಕಾಯಿದೆ 1956 ರಲ್ಲಿ ವ್ಯಾಖ್ಯಾನಿಸಿದಂತೆ.

ಒಬ್ಬ ವ್ಯಕ್ತಿ (ಪಾಕಿಸ್ತಾನ ಅಥವಾ ಬಾಂಗ್ಲಾದೇಶ ಅಥವಾ ಶ್ರೀಲಂಕಾ ಅಥವಾ ಅಫಘಾನಿಸ್ತಾನ ಅಥವಾ ಚೀನಾ ಅಥವಾ ಇರಾನ್ ಅಥವಾ ನೇಪಾಳ ಅಥವಾ ಭೂತಾನ್ ಅಥವಾ ಮಕಾಉ ಅಥವಾ ಹಾಂಗ್ ಕಾಂಗ್ ದೇಶಗಳ ನಾಗರಿಕನಲ್ಲದ) i) ಯಾವುದೇ ಸಮಯದಲ್ಲಿ ಭಾರತೀಯ ಪಾಸ್ ಪೋರ್ಟ್ ಹೊಂದಿದ್ದಲ್ಲಿ ii) ಭಾರತೀಯ ಸಂವಿಧಾನದ ಪ್ರಕಾರ ಅಥವಾ ನಾಗರಿಕತ್ವ ಕಾಯಿದೆ 1955 (1955 ರ 57) ಪ್ರಕಾರ ಆ ವ್ಯಕ್ತಿ ಅಥವಾ ಅವರ ತಂದೆ ತಾಯಿಗಳು ಅಥವಾ ಅವರ ಅಜ್ಜ-ಅಜ್ಜಿಯರು ಭಾರತೀಯ ನಾಗರಿಕರಾಗಿದ್ದಲ್ಲಿ ಅವನು ಭಾರತೀಯ ಮೂಲದ ವ್ಯಕ್ತಿ.

ಭಾರತದಲ್ಲಿ ಸ್ಥಿರ ಆಸ್ತಿಯ ಹಸ್ತಾಂತರದ ಉದ್ದೇಶಕ್ಕಾಗಿ, ಒಬ್ಬ ಎನ್ಆರ್‌ಐ ಎಂದರೆ, ಭಾರತದ ಹೊರಗೆ ವಾಸಿಸುವ ಒಬ್ಬ ಭಾರತೀಯ ನಾಗರಿಕ (ನೋಟಿಫಿಕೇಶನ್ ನಂಬರ್ ಎಫ್ ಇ ಎಂ ಎ 21/2000_ ಆರ್ ಬಿ ಐ, ದಿನಾಂಕ ಮೇ 3, 2000, ಕಾಲಕಾಲಕ್ಕೆ ತಿದ್ದುಪಡಿ ಮಾಡಿದಂತೆ)

ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆಯ (ಎಫ್ ಇ ಎಂ ಎ) 1999 ರ ಅನ್ವಯ ಭಾರತದಿಂದ ಹೊರಗೆ ನೆಲೆಸಿದ ವ್ಯಕ್ತಿ ಎಂದರೆ, ಭಾರತದಲ್ಲಿ ನೆಲೆಸದಿರುವ ವ್ಯಕ್ತಿ.

 

ಭಾರತದಲ್ಲಿ ಒಬ್ಬ ಎನ್ಆರ್‌ಐ / ಪಿಐಒ ನಿರ್ವಹಿಸಬಹುದಾದಂಥ ವಿವಿಧ ರೀತಿಯ ಖಾತೆಗಳು ಯಾವುವು?

ಒಬ್ಬ ವ್ಯಕ್ತಿ ಎನ್ಆರ್‌ಐ ಅಥವಾ ಪಿಐಒ ಆಗಿದ್ದಲ್ಲಿ, ಆರ್ ಬಿ ಐ ಅನುಮತಿ ಇಲ್ಲದೆ ಅವರು ಭಾರತದಲ್ಲಿ ಮಾನ್ಯತೆ ಪಡೆದ ಡೀಲರ್ ರೊಂದಿಗೆ ಅಂದರೆ, ವಿದೇಶಿ ವಿನಿಮಯ ನಡೆಸಲು ಅನುಮತಿ ಪಡೆದ ಬ್ಯಾಂಕಿನೊಂದಿಗೆ ಈ ಕೆಳಗೆ ನೀಡಿದ ಖಾತೆಗಳನ್ನು ಹೊಂದಬಹುದು ಮತ್ತು ನಿರ್ವಹಿಸಬಹುದು. ಭಾರತೀಯ ಅಂಚೆ ಕಚೇರಿಯಲ್ಲಿ ಎನ್ ಆರ್ ಒ ಉಳಿತಾಯ ಖಾತೆಯನ್ನೂ ಹೊಂದಿ ನಿರ್ವಹಿಸಬಹುದು.


ಭಾರತದಲ್ಲಿ ಒಬ್ಬ ಎನ್ಆರ್‌ಐ / ಪಿಐಒ ನಿರ್ವಹಿಸಬಹುದಾದಂಥ ವಿವಿಧ ರೀತಿಯ ಖಾತೆಗಳು

  1. ಅನಿವಾಸಿ ಸಾಮಾನ್ಯ ರೂಪಾಯಿ ಖಾತೆ (ಎನ್ ಆರ್ ಒ ಖಾತೆ)
  2. ಅನಿವಾಸಿ (ಬಾಹ್ಯ) ಸಾಮಾನ್ಯ ರೂಪಾಯಿ ಖಾತೆ (ಎನ್ಆರ್‌ಇ ಖಾತೆ)
  3. ವಿದೇಶಿ ಕರೆನ್ಸಿ ಅನಿವಾಸಿ (ಬ್ಯಾಂಕ್) ಖಾತೆ – ಎಫ್‌ಸಿಎನ್ಆರ್ (ಬಿ) ಖಾತೆ

ಬಾಂಗ್ಲಾದೇಶ / ಪಾಕಿಸ್ತಾನ ದೇಶದ ವ್ಯಕ್ತಿಗಳು / ಘಟಕಗಳು ಈ ಮೇಲೆ ತಿಳಿಸಿದ ಖಾತೆಗಳನ್ನು ತೆರೆಯಲು ಆರ್ ಬಿ ಐ ಯ ಅನುಮತಿಯ ಅಗತ್ಯ ಇದೆಯೇ?

ಪಾಕಿಸ್ತಾನ ದೇಶದ ವ್ಯಕ್ತಿಗಳು / ಘಟಕಗಳು ಮತ್ತು ಬಾಂಗ್ಲಾದೇಶದ ರಾಷ್ಟ್ರೀಯತೆಯ ಘಟಕಗಳು ಖಾತೆಗಳನ್ನು ತೆರೆಯಲು ಆರ್ ಬಿ ಐ ಯ ಪೂರ್ವಾನುಮತಿ ಅಗತ್ಯವಿದೆ. ಈ ರೀತಿಯ ಎಲ್ಲ ಕೋರಿಕೆಗಳನ್ನು ಜನರಲ್ ಮ್ಯಾನೇಜರ್, ವಿದೇಶಿ ವಿನಿಮಯ ಇಲಾಖೆ, ಕೇಂದ್ರೀಯ ಕಚೇರಿ ಘಟಕ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, 6, ಸಂಸದ್ ಮಾರ್ಗ, ನ್ಯೂ ದೆಹಲಿ 110 001 ಇಲ್ಲಿಗೆ ಸಲ್ಲಿಸಬೇಕು. ಆದರೆ, ಬಾಂಗ್ಲಾದೇಶದ ವ್ಯಕ್ತಿಗಳು ನಿಬಂಧನೆಗಳಿಗೆ ಅನ್ವಯವಾಗುವಂತೆ, ಆರ್ ಬಿ ಐ ನ ಪೂರ್ವಾನುಮತಿ ಇಲ್ಲದೆ ಎನ್ಆರ್ ಒ ಖಾತೆಯನ್ನು ತೆರೆಯಬಹುದು.


ಭಾರತೀಯ ನಿವಾಸಿ ವ್ಯಕ್ತಿಯೊಬ್ಬರು ಹೊರದೇಶದಲ್ಲಿ ವಾಸಿಸುವ ತನ್ನ ನಿಕಟ ಸಂಬಂಧಿಯ ಹತ್ತಿರ ಸಾಲ ತೆಗೆದುಕೊಳ್ಳಬಹುದೇ

ಹೌದು, ಒಬ್ಬ ಭಾರತೀಯ ನಿವಾಸಿ ಹೊರದೇಶದಲ್ಲಿ ನೆಲೆಸಿದ ತನ್ನ ನಿಕಟ ಸಂಬಂಧಿಯ ಹತ್ತಿರ ಯುಎಸ್‍ಡಿ 250,೦೦೦ ಅಥವಾ ಅದಕ್ಕೆ ಸರಿಸಮಾನವಾದ ಮೊತ್ತವನ್ನು ಮೀರದಂತೆ ಸಾಲ ಪಡೆಯಬಹುದು, ಅನ್ವಯವಾಗುವ ನಿಬಂಧನೆಗಳು:
  1. ಸಾಲ ಮುಕ್ತಾಯದ ಅವಧಿ ಕನಿಷ್ಠ ಒಂದು ವರ್ಷ
  2. ಸಾಲವು ಬಡ್ಡಿ ರಹಿತವಾಗಿರುತ್ತದೆ ಮತ್ತು
  3. ಸಾಲದ ಹಣವನ್ನು ಸಾಮಾನ್ಯ ಬ್ಯಾಂಕಿಂಗ್ ವಾಹಿನಿಯ ಮೂಲಕ ಉಚಿತ ವಿದೇಶಿ ವಿನಿಮಯದಲ್ಲಿ ಒಳ ರವಾನೆಯಾಗಿ ಸ್ವೀಕರಿಸಬಹುದು ಅಥವಾ ಎನ್ಆರ್‌ಐ ಯ ಎನ್ಆರ್‌ಇ / ಎಫ್‌ಸಿಎನ್ಆರ್ (ಬಿ) ಖಾತೆಗೆ ಡೆಬಿಟ್ ಮಾಡಬಹುದು.

ಒಬ್ಬ ಭಾರತೀಯ ನಿವಾಸಿ ತನ್ನ ನಿಕಟ ಸಂಬಂಧಿ ಎನ್ಆರ್‌ಐ / ಪಿಐಒ ವ್ಯಕ್ತಿಗೆ ಸಾಲ ಕೊಡಬಹುದೇ?

ಹೌದು. ಒಬ್ಬ ಭಾರತೀಯ ನಿವಾಸಿ ವೈಯಕ್ತಿಕವಾಗಿ ಕ್ರಾಸ್ ಚೆಕ್ / ವಿದ್ಯುನ್ಮಾನ ದ ಮೂಲಕ ವರ್ಗಾವಣೆಯ ವಿಧಾನಗಳಲ್ಲಿ, ತನ್ನ ವೈಯಕ್ತಿಕ ಅಥವಾ ವ್ಯವಹಾರದ ಕಾರಣಗಳಿಗಾಗಿ, ನಿಬಂಧನೆಗಳ ಅನ್ವಯ, ಉದಾರೀಕರಣಗೊಳಿಸಿದ ರವಾನೆ ಯೋಜನೆಯ ಅಡಿಯಲ್ಲಿ ಉಲ್ಲೇಖಿಸಿರುವ ಮಿತಿಯ ಒಳಗೆ ಸಾಲವನ್ನು ಪಡೆಯಬಹುದು. ಆ ಸಾಲವು ಬಡ್ಡಿ ರಹಿತವಾಗಿರಬೇಕು, ಕನಿಷ್ಠ ಒಂದು ವರ್ಷದ ಅವಧಿಯಲ್ಲಿ ಮುಕ್ತಾಯವಾಗಬೇಕು ಮತ್ತು ಇದನ್ನು ಭಾರತದಿಂದ ಹೊರಗೆ ರವಾನಿಸಲಾಗದು.


ಒಬ್ಬ ಭಾರತೀಯ ನಿವಾಸಿ ತನ್ನ ನಿಕಟ ಸಂಬಂಧಿ ಎನ್ಆರ್‌ಐ ವ್ಯಕ್ತಿಯ ಭಾರತದಲ್ಲಿನ ಬ್ಯಾಂಕಿನ ಸಾಲ ಮರುಪಾವತಿ ಮಾಡಬಹುದೇ?

ಹೌದು. ಒಂದು ಮಾನ್ಯತೆ ಪಡೆದ ಡೀಲರ್ ಒಬ್ಬ ಎನ್ಆರ್‌ಐ ಗೆ ನೀಡಿದ ಸಾಲವನ್ನು ಅವರ ನಿಕಟ ಸಂಬಂಧಿ (ನಿಕಟ ಸಂಬಂಧಿ ಎಂದರೆ, ಕಂಪನಿ ಕಾಯಿದೆ 1956 ರಲ್ಲಿ ವ್ಯಾಖ್ಯಾನಿಸಿದಂತೆ) ಭಾರತೀಯ ನಿವಾಸಿಯು ಆ ವ್ಯಕ್ತಿಯು ಸಾಲ ಪಡೆದ ಖಾತೆಗೆ ತನ್ನ ಖಾತೆಯಿಂದ ಕ್ರೆಡಿಟ್ ಮಾಡುವ ಮೂಲಕ ಮರುಪಾವತಿ ಮಾಡಬಹುದು.
 

ಎನ್ಆರ್‌ಐ / ಪಿಐಒ ಗಳಿಗೆ ಇರುವ ಇತರ ಸೌಲಭ್ಯಗಳು ಯಾವುವು?

  1. ಎನ್ಆರ್‌ಐ ಗಳಿಗಾಗಿ ಹೂಡಿಕೆ ಸೌಲಭ್ಯಗಳು

    ಎನ್ಆರ್‌ಐ ಗಳು ವಾಪಸಾತಿ ಆಧಾರದ ಮೇಲೆ ಮಿತಿ ಇಲ್ಲದಂತೆ ಖರೀದಿಸಬಹುದು.
    1. ಸರಕಾರೀ ಭದ್ರತಾ ಠೇವಣಿಗಳು / ಖಜಾನೆ ಬಿಲ್ ಗಳು,
    2. ದೇಶೀಯ ಮ್ಯೂಚುಯಲ್ ಫಂಡ್ಸ್ ಯೂನಿಟ್ ಗಳು
    3. ಭಾರತದ ಪಬ್ಲಿಕ್ ಸೆಕ್ಟರ್ ಅಡಿಯಲ್ಲಿನ ಬಾಂಡ್ ಗಳು
    4. ಭಾರತದ ಕಂಪನಿಗಳ ಜೊತೆಗೂಡಿದ ಕಂಪನಿಗಳ ನಾನ್-ಕನ್ವರ್ಟಿಬಲ್ ಡಿಬೆಂಚರ್ಸ್
    5. ಭಾರತದಲ್ಲಿ ಹೊರಡಿಸಲಾದ ಸಾರ್ವಕಾಲಿಕ ಸಾಲದ ಸಾಧನಗಳು ಮತ್ತು ಬ್ಯಾಂಕುಗಳ ಸಾಲ ಬಂಡವಾಳದ ಸಾಧನಗಳು
    6. ಭಾರತ ಸರಕಾರದಿಂದ ಒದಗಿಸಲ್ಪಟ್ಟ ಪಬ್ಲಿಕ್ ಸೆಕ್ಟರ್ ಷೇರುಗಳು, ಬಿಡ್ ಆಹ್ವಾನಿಸಿ ಖರೀದಿ ನಿಯಮ, ನಿಬಂಧನೆಗಳಿಗೆ ಒಳಪಟ್ಟಿದ್ದಲ್ಲಿ ಮಾತ್ರ.
    7. ಕಾಲಕಾಲಕ್ಕೆ ತಿದ್ದುಪಡಿ ಮಾಡಲಾದ ಶೆಡ್ಯೂಲ್ 1 ರಲ್ಲಿ ಉಲ್ಲೇಖಿಸಿರುವ. ಎಫ್ ಇ ಎಂ ಎ ನೋಟಿಫಿಕೇಶನ್ ಸಂಖ್ಯೆ 20/2000-ಆರ್ ಬಿ ಐ, ದಿನಾಂಕ ಮೇ 3, 2000 ನಿಯಮ ನಿಬಂಧನೆಗಳಿಗೆ ಒಳಪಟ್ಟು ಖರೀದಿಸಲಾದ ಎಫ್ ಡಿ ಐ ಯೋಜನೆಯ ಅಡಿಯಲ್ಲಿನ ಭಾರತೀಯ ಕಂಪನಿಗಳ ಷೇರುಗಳು ಮತ್ತು ಕನ್ವರ್ಟಿಬಲ್ ಡಿಬೆಂಚರುಗಳು (ಸ್ವಯಂಚಾಲಿತ ಮಾರ್ಗ ಮತ್ತು ಎಫ್ ಐ ಪಿ ಬಿ),
    8. ಕಾಲಕಾಲಕ್ಕೆ ತಿದ್ದುಪಡಿ ಮಾಡಲಾದ ಶೆಡ್ಯೂಲ್ 3 ರಲ್ಲಿ ಉಲ್ಲೇಖಿಸಿರುವ. ಎಫ್ ಇ ಎಂ ಎ ನೋಟಿಫಿಕೇಶನ್ ಸಂಖ್ಯೆ 20/2000-ಆರ್ ಬಿ ಐ, ದಿನಾಂಕ ಮೇ 3, 2000 ನಿಯಮ ನಿಬಂಧನೆಗಳಿಗೆ ಒಳಪಟ್ಟು, ಎಫ್ ಡಿ ಐ ಯೋಜನೆಯ ಅಡಿಯಲ್ಲಿನ ಭಾರತೀಯ ಕಂಪನಿಗಳ ಷೇರುಗಳು ಮತ್ತು ಕನ್ವರ್ಟಿಬಲ್ ಡಿಬೆಂಚರ್ಸ್ (ಸ್ವಯಂಚಾಲಿತ ಮಾರ್ಗ ಮತ್ತು ಎಫ್ ಐ ಪಿ ಬಿ),ಬಂಡವಾಳ ಹೂಡಿಕೆ ಯೋಜನೆಯ ಅಡಿಯಲ್ಲಿ ಸ್ಟಾಕ್ ಎಕ್ಸ್ಚೇಂಜ್ ಮೂಲಕ ಖರೀದಿಸಲಾದ ಭಾರತೀಯ ಕಂಪನಿಗಳ ಷೇರುಗಳು ಮತ್ತು ಕನ್ವರ್ಟಿಬಲ್ ಡಿಬೆಂಚರ್ಸ್,

    9. ಎನ್ಆರ್‌ಐ ಗಳು ವಾಪಸಾತಿಯಾಗದ ಆಧಾರದ ಮೇಲೆ ಮಿತಿ ಇಲ್ಲದಂತೆ ಖರೀದಿಸಬಹುದು.

    10. ಸರಕಾರೀ ಭದ್ರತಾ ಠೇವಣಿಗಳು / ಖಜಾನೆ ಬಿಲ್ ಗಳು,
    11. ದೇಶೀಯ ಮ್ಯೂಚುಯಲ್ ಫಂಡ್ಸ್ ಯೂನಿಟ್ ಗಳು
    12. ಮನಿ ಮಾರ್ಕೆಟ್ ಮ್ಯೂಚುಯಲ್ ಫಂಡ್ ಯೂನಿಟ್ ಗಳು
    13. ರಾಷ್ಟ್ರೀಯ ಯೋಜನೆ / ಉಳಿತಾಯ ಸರ್ಟಿಫಿಕೇಟ್
    14. ಭಾರತದ ಕಂಪನಿಯೊಂದಿಗೆ ಜೊತೆಗೂಡಿದ ಕಂಪನಿಗಳ ನಾನ್-ಕನ್ವರ್ಟಿಬಲ್ ಡಿಬೆಂಚರುಗಳು
    15. ಕಾಲಕಾಲಕ್ಕೆ ತಿದ್ದುಪಡಿ ಮಾಡಲಾದ ಶೆಡ್ಯೂಲ್ 3 ಮತ್ತು 4 ರಲ್ಲಿ ಉಲ್ಲೇಖಿಸಿರುವ. ಎಫ್ ಇ ಎಂ ಎ ನೋಟಿಫಿಕೇಶನ್ ಸಂಖ್ಯೆ 20/2000-ಆರ್ ಬಿ ಐ, ದಿನಾಂಕ ಮೇ 3, 2000 ನಿಯಮ ನಿಬಂಧನೆಗಳಿಗೆ ಒಳಪಟ್ಟು, ಎಫ್ ಡಿ ಐ ಯೋಜನೆಯ ಅಡಿಯಲ್ಲಿನ ಭಾರತೀಯ ಕಂಪನಿಗಳ ಷೇರುಗಳು ಮತ್ತು ಕನ್ವರ್ಟಿಬಲ್ ಡಿಬೆಂಚರುಗಳು (ಸ್ವಯಂಚಾಲಿತ ಮಾರ್ಗ ಮತ್ತು ಎಫ್ ಐ ಪಿ ಬಿ),ಬಂಡವಾಳ ಹೂಡಿಕೆ ಯೋಜನೆಯ ಅಡಿಯಲ್ಲಿ ಸ್ಟಾಕ್ ಎಕ್ಸ್ಚೇಂಜ್ ಮೂಲಕ ಖರೀದಿಸಲಾದ ಭಾರತೀಯ ಕಂಪನಿಗಳ ಷೇರುಗಳು ಮತ್ತು ಕನ್ವರ್ಟಿಬಲ್ ಡಿಬೆಂಚರುಗಳು
    16. ಭಾರತೀಯ ರೂಪಾಯಿ ನಿಧಿಯ, ವಾಪಸಾತಿಯಾಗದ ಆಧಾರದ ಮೇಲೆ, ಸೆಬಿ ಉಲ್ಲೇಖಿಸಿದ ಮಿತಿಯ ಅಡಿಯಲ್ಲಿ, ಕಾಲಕಾಲಕ್ಕೆ ಸೆಬಿಯಿಂದ ಅನುಮೋದನೆ ಪಡೆದ ವಿನಿಮಯ ಉತ್ಪನ್ನದ ಒಪ್ಪಂದಗಳು,
    ಸೂಚನೆ : ಎನ್ಆರ್‌ಐ ಗಳು ಚಿಕ್ಕ ಉಳಿತಾಯ ಮತ್ತು ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್) ನಲ್ಲಿ ಹೂಡಿಕೆ ಮಾಡಲು ಅನುಮತಿ ಇರುವುದಿಲ್ಲ.

  2. ಸ್ಥಿರ ಆಸ್ತಿಯ ಮೇಲೆ ಹೂಡಿಕೆ

    1. ಎನ್ಆರ್‍ಐ / ಪಿಐಒ ವ್ಯಕ್ತಿಯು ವಾಪಸಾತಿಯ ಅಥವಾ ವಾಪಸಾತಿಯಾಗದ ನಿಧಿಯಿಂದ ಭಾರತದಲ್ಲಿ ಕೃಷಿ ಭೂಮಿ / ತೋಟ/ ಅಥವಾ ತೋಟದ ಮನೆಯ ಹೊರತಾಗಿ ಯಾವುದೇ ರೀತಿಯ ಸ್ಥಿರ ಅಸ್ತಿಯನ್ನು ಗಳಿಸಿಕೊಳ್ಳಬಹುದು / ವರ್ಗಾಯಿಸಿಕೊಳ್ಳಬಹುದು.
    2. ಭಾರತೀಯ ನಿವಾಸಿಯಲ್ಲದ ಹೊರದೇಶದ ಮೂಲದ ನಿವಾಸಿಗಳು ಭಾರತೀಯ ರಿಸರ್ವ್ ಬ್ಯಾಂಕಿನ ಪೂರ್ವಾನುಮತಿ ಇಲ್ಲದೆ, 5 ವರ್ಷಕ್ಕೆ ಮೀರದಂತೆ ಭೋಗ್ಯಕ್ಕೆ ತೆಗೆದುಕೊಳ್ಳುವುದರ ಹೊರತಾಗಿ ಯಾವುದೇ ರೀತಿಯ ಸ್ಥಿರ ಆಸ್ತಿಯನ್ನು ಗಳಿಸುವಂತಿಲ್ಲ / ವರ್ಗಾಯಿಸಿಕೊಳ್ಳುವಂತಿಲ್ಲ.
    3. ಯಾವುದಾದರೂ ಖರೀದಿಗೆ ಹಣ ಪಾವತಿಸಬೇಕಾದಲ್ಲಿ ಅದನ್ನು:
      1. ಭಾರತದಲ್ಲಿ ಸಾಮಾನ್ಯ ಬ್ಯಾಂಕಿಂಗ್ ಮೂಲಕ, ಹೊರದೇಶಗಳಿಂದ ಒಳರವಾನೆಯ ವಿಧಾನದಲ್ಲಿ ಸ್ವೀಕರಿಸಲ್ಪಟ್ಟ ಹಣಕಾಸನ್ನು ಬಳಸಬಹುದು ಅಥವಾ
      2. ರಿಸರ್ವ್ ಬ್ಯಾಂಕಿನ ಕಾಯಿದೆಯಲ್ಲಿ ನೀಡಿದ ಅವಕಾಶಗಳ ಅನ್ವಯ ನಿರ್ವಹಿಸಲ್ಪಟ್ಟ ಅನಿವಾಸಿ ಖಾತೆಯಲ್ಲಿನ ಹಣಕಾಸನ್ನು ಬಳಸಬಹುದು
      ಸೂಚನೆ :ಸ್ಥಿರ ಆಸ್ತಿ ಗಳಿಸಲು, ಈ ಮೇಲೆ ತಿಳಿಸಿದ ನಿರ್ದಿಷ್ಟವಾಗಿ ಅನುಮತಿಸಿದ ವಿಧಾನಗಳ ಹೊರತಾಗಿ, ಟ್ರಾವೆಲ್ಲರ್ ಚೆಕ್, ಅಥವಾ ವಿದೇಶಿ ಕರೆನ್ಸಿ ಅಥವಾ ಬೇರೆ ಯಾವುದೇ ವಿಧಾನಗಳಲ್ಲಿ ಹಣ ಪಾವತಿ ಮಾಡುವಂತಿಲ್ಲ.
    4. ಎನ್ಆರ್‌ಐ ವ್ಯಕ್ತಿಯು ಭಾರತದಲ್ಲಿ ಕೃಷಿ ಭೂಮಿ / ತೋಟ/ ಅಥವಾ ತೋಟದ ಮನೆಯ ಹೊರತಾಗಿ ಯಾವುದೇ ರೀತಿಯ ಸ್ಥಿರ ಅಸ್ತಿಯನ್ನು ನಿವಾಸಿ ಭಾರತೀಯ ಅಥವಾ ಅನಿವಾಸಿ ಭಾರತೀಯರಿಂದ ಅಥವಾ ಭಾರತೀಯ ಮೂಲದ ಆದರೆ ಹೊರದೇಶದಲ್ಲಿ ವಾಸಿಸುವ ವ್ಯಕ್ತಿಗಳಿಂದ ಕಾಣಿಕೆಯಾಗಿ ಪಡೆಯಬಹುದು.
    5. ಭಾರತದಿಂದ ಹೊರಗೆ ವಾಸಿಸುವ ವ್ಯಕ್ತಿಯು ಆಸ್ತಿಯನ್ನು ಗಳಿಸುವಾಗ, ವಿದೇಶಿ ವಿನಿಮಯ ಕಾನೂನಿನ ಅಡಿಯಲ್ಲಿ, ಆ ಸಮಯದಲ್ಲಿ ಜಾರಿಯಲ್ಲಿರುವ ನಿಯಮಗಳ ಅನುಸಾರ ಗಳಿಸಿದ್ದಾದಲ್ಲಿ ಅಂತಹ ಆಸ್ತಿಯನ್ನು ಎನ್ಆರ್‌ಐ ವ್ಯಕ್ತಿಯು ಪಿತ್ರಾರ್ಜಿತವಾಗಿ ಪಡೆದುಕೊಳ್ಳಬಹುದು.
    6. ಒಬ್ಬ ಎನ್ಆರ್‌ಐ ಭಾರತದಲ್ಲಿನ ತನ್ನ ಯಾವುದೇ ಸ್ಥಿರ ಆಸ್ತಿಯನ್ನು ಒಬ್ಬ ಭಾರತೀಯ ನಿವಾಸಿಗೆ ವರ್ಗಾಯಿಸಬಹುದು.
    7. ಎನ್ಆರ್‌ಐ ವ್ಯಕ್ತಿಯು ಭಾರತದಲ್ಲಿ ಕೃಷಿ ಭೂಮಿ / ತೋಟ/ ಅಥವಾ ತೋಟದ ಮನೆಯ ಹೊರತಾಗಿ ಯಾವುದೇ ರೀತಿಯ ಸ್ಥಿರ ಅಸ್ತಿಯನ್ನು ಅನಿವಾಸಿ ಭಾರತೀಯ, ಆದರೆ ಭಾರತೀಯ ನಾಗರಿಕನಾದ ಯಾವುದೇ ವ್ಯಕ್ತಿಗೆ ಅಥವಾ ಭಾರತೀಯ ಮೂಲದ ಆದರೆ ಹೊರದೇಶದಲ್ಲಿ ವಾಸಿಸುವ ವ್ಯಕ್ತಿಗೆ ವರ್ಗಾಯಿಸಬಹುದು.
  3. ಈ ಕೆಳಗಿನ ಹೂಡಿಕೆಗಳ ಕಾರಣಗಳಿಂದ, ಅನಿವಾಸಿ ಭಾರತೀಯರು ನಿಧಿ ವಾಪಸಾತಿ ಮಾಡಲು ಅರ್ಹರಾಗಿರುತ್ತಾರೆ:

    1. ಆಸ್ತಿ ಗಳಿಸುವ ಸಮಯದಲ್ಲಿ, ಹಣವನ್ನು ವಿದೇಶಿ ಕರೆನ್ಸಿಯನ್ನು ಸಾಮಾನ್ಯ ಬ್ಯಾಂಕಿಂಗ್ ಮೂಲಕ ರವಾನೆ ಮಾಡಿದ್ದಲ್ಲಿ ಅಥವಾ ಎನ್ಆರ್‌ಇ / ಎಫ್‌ಸಿಎನ್ಆರ್ (ಬಿ) ಖಾತೆಯಿಂದ ಡೆಬಿಟ್ ಮಾಡಿದ್ದಲ್ಲಿ, ಮಾರಾಟ ಪ್ರಕ್ರಿಯೆಗಾಗಿ,
    2. ಸಾಮಾನ್ಯ ಬ್ಯಾಂಕಿಂಗ್ ಮೂಲಕ ರವಾನೆ ಮಾಡಿದ ಅಥವಾ ಎನ್ಆರ್‌ಇ / ಎಫ್‌ಸಿಎನ್ಆರ್ (ಬಿ) ಖಾತೆಯಿಂದ ಡೆಬಿಟ್ ಮಾಡಿದ ವಿದೇಶಿ ವಿನಿಮಯವು ಆಸ್ತಿ ಖರೀದಿಗೆ ಅವಶ್ಯವಿದ್ದ ಹಣಕ್ಕಿಂತ ಅಧಿಕವಾಗಿರುವಂತಿಲ್ಲ (ಪಾವತಿಸುವ ದಿನಾಂಕದಂದು ವಿದೇಶಿ ಕರೆನ್ಸಿಯ ಮೌಲ್ಯದ ಸಮಾನದಷ್ಟು).
    3. ಭಾರತದಲ್ಲಿ, ಕೃಷಿ ಭೂಮಿ / ತೋಟ / ಅಥವಾ ತೋಟದ ಮನೆಯ ಹೊರತಾಗಿ ಯಾವುದೇ ರೀತಿಯ ಸ್ಥಿರ ಅಸ್ತಿಯ ಮಾರಾಟದ ಸಮಯದಲ್ಲಿ, ಅನಿವಾಸಿ ಭಾರತೀಯ, ಆದರೆ ಭಾರತೀಯ ನಾಗರಿಕನಾದ ಯಾವುದೇ ವ್ಯಕ್ತಿ / ಪಿಐಒ ವಾಪಸಾತಿಯ ಕಾರಣಗಳಿಂದ, ನಿಬಂಧನೆಗಳ ಅನ್ವಯ, ಎರಡು ಮನೆಗಳಕ್ಕಿಂತ ಹೆಚ್ಚಿನ ಆಸ್ತಿಯನ್ನು ಮಾರುವಂತಿಲ್ಲ.
    4. ಆಸ್ತಿಯನ್ನು (ಪಿತ್ರಾರ್ಜಿತ ಅಥವಾ ಒಪ್ಪಂದದ ಪ್ರಕಾರದ ಆಸ್ತಿ ಸಹಿತ) ರೂಪಾಯಿ ಮೂಲದಿಂದ ಗಳಿಸಿದಲ್ಲಿ, ಎನ್ಆರ್‌ಐ / ಪಿಐಒ ವ್ಯಕ್ತಿಯು ಕೇವಲ ಸದುದ್ದೇಶದಿಂದ, ಅಧಿಕೃತ ಡೀಲರ್ ಬ್ಯಾಂಕಿನ ತೃಪ್ತಿಗನುಸಾರ ಮತ್ತು ತೆರಿಗೆಯ ಅನುಪಾಲನೆಗೆ ಅನುಸಾರ, ತನ್ನ ಎನ್ ಆರ್ ಒ ಖಾತೆಯಿಂದ, ಒಂದು ಹಣಕಾಸು ವರ್ಷಕ್ಕೆ ಒಂದು ಮಿಲಿಯನ್ ಯು ಎಸ್ ಡಿ ಯಷ್ಟು ಹಣವನ್ನು ರವಾನೆ ಮಾಡಬಹುದು.
    5. ಎ) ಫ್ಲಾಟ್ / ಸೈಟ್ ಗಳ ವಿತರಣೆಯಾಗದ ಕಾರಣ ಮತ್ತು ಬಿ) ಮನೆ / ವಾಣಿಜ್ಯ ಆಸ್ತಿಗಳ ಕಾಯ್ದಿರಿಸಿದ / ರದ್ದಾದ ವ್ಯವಹಾರದ ಕಾರಣದಿಂದ ಹಣ ಬಿಲ್ಡರ್ ಏಜೆನ್ಸಿ / ಮಾರಾಟಗಾರರಿಂದ ಬಡ್ಡಿ ಮತ್ತು ತೆರಿಗೆ ಸಹಿತ ಖರೀದಿಯ ಅರ್ಜಿ ಹಣ / ಮುಂಗಡ ಹಣ ಅವರಿಂದ ಮರುಪಾವತಿಯಾದಲ್ಲಿ, ಆ ಹಣ ಎನ್ಆರ್‌ಇ / ಎಫ್‌ಸಿಎನ್ಆರ್ (ಬಿ) ಖಾತೆಯಿಂದ / ಒಳರವಾನೆ ಮಾಡಿದ್ದಲ್ಲಿ.

    ಎನ್ ಆರ್ ಐ / ಪಿಐಒ ಗಳ ನಿಕಟ ಸಂಬಂಧಿ ಭಾರತೀಯ ನಿವಾಸಿಗಳಿಂದ ಮನೆ ಸಾಲ ಮರುಪಾವತಿ

    ಎನ್ ಆರ್ ಐ / ಪಿಐಒ ಗಳು ಏ.ಡಿ / ಹಣಕಾಸು ಸಂಸ್ಥೆಗಳಿಂದ ಭಾರತದಲ್ಲಿ ರೂಪಾಯಿ ಕರೆನ್ಸಿಯಲ್ಲಿ ಸಾಲ ಪಡೆದಿದ್ದಲ್ಲಿ, ಅವರ ನಿಕಟ ಸಂಬಂಧಿ ಭಾರತೀಯ ನಿವಾಸಿ ಅದನ್ನು ಮರುಪಾವತಿ ಮಾಡಬಹುದು.

  4. ಮರಳಿ ಬರಲಿರುವ ಎನ್ ಆರ್ ಐ / ಪಿಐಒ ಗಳಿಗೆ ಇರುವ ಸೌಲಭ್ಯಗಳು

    1. ಮರಳಿ ಬರಲಿರುವ ಎನ್ ಆರ್ ಐ / ಪಿಐಒ ಗಳು ವಿದೇಶಿ ಕರೆನ್ಸಿ / ವಿದೇಶಿ ಭದ್ರತಾ ಠೇವಣಿಗಳು ಅಥವಾ ಭಾರತದ ಹೊರಗಿರುವ ಯಾವುದೇ ಸ್ಥಿರ ಆಸ್ತಿಯನ್ನು ಹೊಂದಬಹುದು / ವರ್ಗಾಯಿಸಬಹುದು ಅಥವಾ ಅವುಗಳ ಮೇಲೆ ಹೂಡಿಕೆ ಮಾಡಬಹುದು.
    2. ಇಂಥ ಯಾವುದೇ ಕರೆನ್ಸಿ, ಭದ್ರತಾ ಠೇವಣಿಗಳು ಅಥವಾ ಸ್ಥಿರ ಆಸ್ತಿಯನ್ನು ಭಾರತದಿಂದ ಹೊರಗಿರುವಾಗ ಗಳಿಸಿದ್ದಲ್ಲಿ ಅಂತಹ ಆದಾಯ ಅಥವಾ ಮಾರಾಟದ ಪ್ರಕ್ರಿಯೆಯನ್ನು ಮರಳಿ ತರುವ ಅವಶ್ಯಕತೆಯಿಲ್ಲ.

    ವಿದೇಶಿ ಕರೆನ್ಸಿ ಖಾತೆ

    1. ವಿದ್ಯಾಭ್ಯಾಸಕ್ಕಾಗಿ ಅಥವಾ ಭೇಟಿಗಾಗಿ ವಿದೇಶಕ್ಕೆ ಹೋದ ವ್ಯಕ್ತಿಯು ಭಾರತದಿಂದ ಹೊರಗೆ, ತಾನು ಇರುವಷ್ಟು ಅವಧಿಗೆ ವಿದೇಶಿ ಕರೆನ್ಸಿ ಖಾತೆಯನ್ನು ತೆರೆಯಬಹುದು ಮತ್ತು ನಿರ್ವಹಿಸಬಹುದು, ಆದರೆ, ಅವರು ಮರಳುವಾಗ ಅವರ ಖಾತೆಯಲ್ಲಿನ ಬಾಕಿ ಮೊತ್ತವನ್ನು ಭಾರತಕ್ಕೆ ಮರಳಿ ತರಬೇಕು. ಆದರೆ, ವಿದ್ಯಾಭ್ಯಾಸಕ್ಕೆಂದು ಹೋದ ವಿದ್ಯಾರ್ಥಿಯು ಭೇಟಿಗೆಂದು ಮರಳಿ ಬಂದರೆ ಅದನ್ನು ಅವರ ವಾಪಸಾತಿ ಎಂದು ಪರಿಗಣಿಸುವಂತಿಲ್ಲ..
    2. ಭಾರತೀಯ ನಿವಾಸಿಯೊಬ್ಬರು ಪ್ರದರ್ಶನ / ಟ್ರೇಡ್ ಫೇರ್ ಸಲುವಾಗಿ ವಿದೇಶಕ್ಕೆ ಹೋದಲ್ಲಿ, ಅವರು ಟ್ರೇಡ್ ಫೇರ್ ನಲ್ಲಿ ವಸ್ತುಗಳ ಮಾರಾಟವಾದ ಹಣವನ್ನು ಕ್ರೆಡಿಟ್ ಮಾಡಲು ವಿದೇಶಿ ಕರೆನ್ಸಿ ಖಾತೆಯನ್ನು ತೆರೆಯಬಹುದು ಮತ್ತು ನಿರ್ವಹಿಸಬಹುದು, ಆದರೆ, ಅವರು ಮರಳುವಾಗ ಅವರ ಖಾತೆಯಲ್ಲಿನ ಬಾಕಿ ಮೊತ್ತವನ್ನು ಟ್ರೇಡ್ ಫೇರ್ ನ ಮುಕ್ತಾಯದ ದಿನಾಂಕದ ಒಂದು ತಿಂಗಳ ಒಳಗಾಗಿ ಸಾಮಾನ್ಯ ಬ್ಯಾಂಕಿಂಗ್ ವಾಹಿನಿಯ ಮೂಲಕ ಭಾರತಕ್ಕೆ ಮರಳಿ ತರಬೇಕು.

    ನಿವಾಸಿ ಭಾರತೀಯ ವಿದೇಶಿ ಕರೆನ್ಸಿ ಖಾತೆ (ಆರ್ ಎಫ್ ಸಿ ಖಾತೆ)

    • ಒಬ್ಬ ಭಾರತೀಯ ನಿವಾಸಿ ಭಾರತದಲ್ಲಿ ಅಧಿಕೃತ ಡೀಲರ್ ಬ್ಯಾಂಕಿನಲ್ಲಿ ನಿವಾಸಿ ವಿದೇಶಿ ಕರೆನ್ಸಿ ಖಾತೆಯನ್ನು ತೆರೆದು ನಿರ್ವಹಿಸಬಹುದು.
    • ಆರ್ ಎಫ್ ಸಿ ಖಾತೆಯಲ್ಲಿನ ವಿದೇಶಿ ಕರೆನ್ಸಿ ಬಾಕಿಯ ಹಣವನ್ನು ಯಾವುದೇ ನಿರ್ಬಂಧವಿಲ್ಲದೆ ಭಾರತದ ಹೊರಗೆ ಹೂಡಿಕೆ ಸಹಿತ ಯಾವುದೇ ಕಾರಣಗಳಿಗೆ ವಿನಿಯೋಗಿಸಬಹುದಾಗಿದೆ.
    • ಆರ್ ಎಫ್ ಸಿ ಖಾತೆಯನ್ನು ಚಾಲ್ತಿ, ಉಳಿತಾಯ ಅಥವಾ ನಿಯಮಿತ ಅವಧಿಯ ಠೇವಣಿಯ ರೂಪದಲ್ಲಿರಬಹುದು, ಚಾಲ್ತಿ ಮತ್ತು ನಿಯಮಿತ ಅವಧಿಯ ಠೇವಣಿಯೂ ಸೇರಿ ಎಲ್ಲ ಖಾತೆಗಳೂ ವೈಯಕ್ತಿಕವಾಗಿರಬೇಕು
    • ಆರ್ ಎಫ್ ಸಿ ಖಾತೆಗಳನ್ನು ತಮ್ಮ ನಿಕಟ ಸಂಬಂಧಿಗಳೊಂದಿಗೆ ಜಂಟಿಯಾಗಿ ಹೊಂದಬಹುದು. ನಿಕಟ ಸಂಬಂಧಿಗಳು ಎಂದರೆ, ಕಂಪನಿ ಕಾಯಿದೆ 1956 ರಲ್ಲಿ ಉಲ್ಲೇಖಿಸಿದಂತೆ, ಹಿಂದಿನಿಂದ ಇಲ್ಲಿರುವ ಅಥವಾ ಇಲ್ಲಿ ಉಳಿದಿರುವ ಎಂದರ್ಥ. ಆದರೆ, ಈ ಜಂಟಿ ಖಾತೆದಾರನಾಗಲು ಅರ್ಹ ಸಂಬಂಧಿಯು ತನ್ನ ಜೀವನಪರ್ಯಂತ ಖಾತೆಯನ್ನು ನಿರ್ವಹಿಸಲು ಅನರ್ಹನಾಗಿರುತ್ತಾನೆ.

    ಸಾಮಾನ್ಯ ಸೌಲಭ್ಯಗಳು

    ವಿನಿಮಯ ಗಳಿಕೆಯ ವಿದೇಶಿ ಕರೆನ್ಸಿ ಖಾತೆಯನ್ನು ಭಾರತೀಯ ನಿವಾಸಿಯೊಂದಿಗೆ ಜಂಟಿಯಾಗಿ ಹೊಂದಬಹುದೆ?

    ಹೌದು. ವಿನಿಮಯ ಗಳಿಕೆಯ ವಿದೇಶಿ ಕರೆನ್ಸಿ ಖಾತೆಯನ್ನು ತಮ್ಮ ಹಿಂದಿನಿಂದ ಇಲ್ಲಿರುವ ಅಥವಾ ಪ್ರಸ್ತುತದಲ್ಲಿ ಉಳಿದಿರುವ ನಿಕಟ ಸಂಬಂಧಿಗಳೊಂದಿಗೆ ಜಂಟಿಯಾಗಿ ಹೊಂದಬಹುದು.
    ಈ ಸಂಬಂಧಿಯು ತನ್ನ ಜೀವನಪರ್ಯಂತ ಖಾತೆಯನ್ನು ನಿರ್ವಹಿಸಲು ಅನರ್ಹನಾಗಿರುತ್ತಾನೆ.

    ಉಳಿತಾಯ ಖಾತೆಯನ್ನು ಹೊಂದಿರುವ ಒಬ್ಬ ಭಾರತೀಯ ನಿವಾಸಿಯು ತನ್ನ ನಿಕಟ ಸಂಬಂಧಿ ಅನಿವಾಸಿ ಭಾರತೀಯನನ್ನು ಜಂಟಿ ಖಾತೆದಾರನಾಗಿ ಸೇರಿಸಬಹುದೇ?

    ಹೌದು. ಭಾರತೀಯ ನಿವಾಸಿಯೊಬ್ಬರು ಭಾರತದಲ್ಲಿ ತಮ್ಮ ಉಳಿತಾಯ ಖಾತೆಗೆ ಹಿಂದಿನಿಂದ ಸಂಬಂಧಿಯಾಗಿರುವ ಅಥವಾ ಪ್ರಸ್ತುತದಲ್ಲಿ ಉಳಿದಿರುವ ನಿಕಟ ಸಂಬಂಧಿ ಅನಿವಾಸಿ ಭಾರತೀಯನನ್ನು ಜಂಟಿ ಖಾತೆದಾರನಾಗಿ ಸೇರಿಸಲು ಅನುಮತಿ ಇದೆ. ನಿಬಂಧನೆಗಳು ಅನ್ವಯ.

    ಒಬ್ಬ ಭಾರತೀಯ ನಿವಾಸಿಯು ತನ್ನ ನಿಕಟ ಸಂಬಂಧಿ ಅನಿವಾಸಿ ಭಾರತೀಯನಿಗೆ ಷೇರುಗಳು / ಭದ್ರತೆಗಳು / ಕನ್ವರ್ಟಿಬಲ್ ಡಿಬೆಂಚರ್ಸ್ ಗಳನ್ನು ಕಾಣಿಕೆಯಾಗಿ ನೀಡಬಹುದೇ?

    ಹೌದು. ಒಬ್ಬ ಭಾರತೀಯ ನಿವಾಸಿಯು ತನ್ನ ನಿಕಟ ಸಂಬಂಧಿ ಎನ್ ಆರ್ ಐ ಗೆ ಷೇರುಗಳು / ಭದ್ರತೆಗಳು / ಕನ್ವರ್ಟಿಬಲ್ ಡಿಬೆಂಚರ್ಸ್ ಗಳನ್ನು ಒಂದು ಹಣಕಾಸು ವರ್ಷಕ್ಕೆ ಒಟ್ಟು ಯು ಎಸ್ ಡಿ 50,೦೦೦ ಮೌಲ್ಯದಷ್ಟು ಕಾಣಿಕೆಯನ್ನು ನೀಡಬಹುದು. ನಿಬಂಧನೆಗಳು ಅನ್ವಯ.

    ಒಬ್ಬ ಭಾರತೀಯ ನಿವಾಸಿಯು ತನ್ನ ನಿಕಟ ಸಂಬಂಧಿ ಎನ್ ಆರ್ ಐ / ಪಿಐಒ ಗೆ ಭೇಟಿಯ ಸಂದರ್ಭದಲ್ಲಿ ರೂಪಾಯಿಗಳನ್ನು ಕಾಣಿಕೆಯಾಗಿ ನೀಡಬಹುದೇ?

    ಹೌದು. ಒಬ್ಬ ಭಾರತೀಯ ನಿವಾಸಿಯು ತನ್ನ ನಿಕಟ ಸಂಬಂಧಿ ಎನ್ ಆರ್ ಐ / ಪಿಐಒ ಗೆ ಭೇಟಿಯ ಸಂದರ್ಭದಲ್ಲಿ ಕ್ರಾಸ್ ಚೆಕ್ / ವಿದ್ಯುನ್ಮಾನ ವಾಹಿನಿಯ ಮೂಲಕ ಹಣ ವರ್ಗಾವಣೆಯ ಮೂಲಕ, ಉದಾರೀಕರಣಗೊಳಿಸಿದ ರವಾನೆ ಯೋಜನೆಯಲ್ಲಿ ಉಲ್ಲೇಖಿಸಿದ ಒಟ್ಟು ಮೊತ್ತದ ಮಿತಿಯಲ್ಲಿ ರೂಪಾಯಿಗಳನ್ನು ಕಾಣಿಕೆಯಾಗಿ ನೀಡಬಹುದು ಮತ್ತು ಕಾಣಿಕೆಯಾಗಿ ನೀಡಿದ ಹಣವು ಫಲಾನುಭಾವಿಯ ಎನ್ಆರ್‍ಒ ಖಾತೆಗೆ ಜಮೆ ಆಗಬೇಕು.

    ಒಬ್ಬ ಭಾರತೀಯ ನಿವಾಸಿಯು ತನ್ನ ನಿಕಟ ಸಂಬಂಧಿ ಅನಿವಾಸಿ ಭಾರತೀಯ ವ್ಯಕ್ತಿಗೆ ಯಾವ ರೀತಿಯ ಸೇವೆಗಳನ್ನು ಒದಗಿಸಬಹುದು?

    ಒಬ್ಬ ಭಾರತೀಯ ನಿವಾಸಿಯು ಒಬ್ಬ ಅನಿವಾಸಿ ಭಾರತೀಯನ ಭೇಟಿಯ ಖರ್ಚು ವೆಚ್ಚಗಳನ್ನು, ವಸತಿ, ಪ್ರಯಾಣ ಮತ್ತಿತರ ಸೇವಾ ಖರ್ಚುಗಳನ್ನು ಮತ್ತು ಭಾರತದಲ್ಲಿ ಪ್ರಯಾಣದ, ಹೋಗಿ ಬರುವ ಖರ್ಚುಗಳನ್ನು ಭರಿಸಬಹುದು. ಒಬ್ಬ ನಿವಾಸಿ ಭಾರತೀಯ ತನ್ನ ನಿಕಟ ಸಂಬಂಧಿ ಅನಿವಾಸಿ ಭಾರತೀಯನ ವೈದ್ಯಕೀಯ ಖರ್ಚುಗಳನ್ನು ಭರಿಸಿದ್ದಲ್ಲಿ, ಈ ಸ್ವರೂಪದ ವೆಚ್ಚವನ್ನು ಒಬ್ಬ ನಿವಾಸಿ ಇನ್ನೊಬ್ಬ ನಿವಾಸಿಗೆ ಒದಗಿಸಿದ ಸೇವೆ ಒಂದು ಪರಿಗಣಿಸಬಹುದು
longbanner rect1 rect2 rect3 rect4

ಹಕ್ಕುತ್ಯಾಗ: ಈ ಜಾಲತಾಣದ ವಿಷಯ ಕೇವಲ ಮಾಹಿತಿ ಹಂಚಿಕೆಗಾಗಿ. ಯಾವುದೇ ರೀತಿಯ ವ್ಯವಹಾರಕ್ಕಾಗಿ ಆಕರ್ಷಿಸಲು ರೂಪಿಸಿದ್ದಲ್ಲ.

2015 ಸಿಂಡಿಕೇಟ್ ಬ್ಯಾಂಕ್ . ಎಲ್ಲ ಹಕ್ಕುಗಳನ್ನೂ ಕಾಯ್ದಿರಿಸಲಾಗಿದೆ     1280 x 800 ರಲ್ಲಿ ಈ ಜಾಲತಾಣವನ್ನು ಉತ್ತಮವಾಗಿ ವೀಕ್ಷಿಸಬಹುದು