Syndicate Bank
banner
 

ನಿಷ್ಕ್ರಿಯ (ಕಾರ್ಯ ನಿರ್ವಹಿಸದ ಅಥವಾ ಹಕ್ಕು ಪ್ರತಿಪಾದಿಸದ) ಖಾತೆ ಮಾಹಿತಿ

 

ಪ್ರಿಯ ಗ್ರಾಹಕರೆ,

  10 ವರ್ಷ ಹಾಗೂ ಅದಕ್ಕಿಂತ ಹೆಚ್ಚಿನ ಅವಧಿಯವರೆಗೆ ನಿಷ್ಕ್ರಿಯವಾದ / ಹಕ್ಕು ಪ್ರತಿಪಾದಿಸದ ಠೇವಣಿಗಳ ವಿವರಗಳಿಗಾಗಿ ನಮ್ಮ ಜಾಲತಾಣಕ್ಕೆ ಭೇಟಿ ನೀಡಿದ್ದಕ್ಕೆ ಧನ್ಯವಾದಗಳು.

  ನಿಮ್ಮ ಹೆಸರು ಹಾಗೂ ವಿಳಾಸವು ಪಟ್ಟಿಯಲ್ಲಿ ಲಭ್ಯವಿರುವ ಡಾಟಾದೊಂದಿಗೆ ಹೊಂದಾಣಿಕೆಯಾಗುತ್ತಿದ್ದರೆ, ಈ ಕೆಳಗೆ ನೀಡಿದ ದಾಖಲಾತಿಗಳೊಂದಿಗೆ ಸಂಬಂಧಪಟ್ಟ ಶಾಖೆಗೆ ಭೇಟಿ ನೀಡಲು ವಿನಂತಿಸುತ್ತೇವೆ :

  1. ಠೇವಣಿಯ ಪುನಶ್ಚೇತನ / ಮರುಪಾವತಿಗಾಗಿ ವಿನಂತಿ ಪತ್ರ
  2. ಪಾಸ್-ಬುಕ್ / ಪ್ರಮಾಣಪತ್ರ / ಠೇವಣಿಗಳ ಪುರಾವೆಯ ದಾಖಲಾತಿಗಳು

  ಖಾತೆ ಲಭ್ಯವಿದೆಯೆಂದು ಶಾಖೆಯು ಖಚಿತಪಡಿಸಿದರೆ, ಶಾಖೆಯು ಮುಖ್ಯ ಕಚೇರಿಯೊಂದಿಗೆ ಸಂಬಂಧಪಟ್ಟ ಶಾಖೆಗೆ ಠೇವಣಿಗಳ ವರ್ಗಾವಣೆಗಾಗಿ ಕ್ರಮ ತೆಗೆದುಕೊಳ್ಳುತ್ತದೆ.

  ಮುಖ್ಯ ಕಚೇರಿಯಿಂದ ಶಾಖೆಗೆ ಖಾತೆಗಳನ್ನು ವರ್ಗಾವಣೆ ಮಾಡುವ ಅವಧಿಯು ಹಕ್ಕು ಪ್ರತಿಪಾದನೆಗೆ ಸಲ್ಲಿಸಿದ ಹಾಗೂ ಅದರ ಪರಿಶೀಲನೆಯ ದಿನಾಂಕದಿಂದ 1 ರಿಂದ 2 ವಾರಗಳವರೆಗೆ ಇರುತ್ತದೆ.

  ನಿಮ್ಮ ವಿವರ ಜಾಲತಾಣದಲ್ಲಿ ಲಭ್ಯವಿರುವ ಮಾಹಿತಿಯೊಂದಿಗೆ ಹೊಂದಿಕೆಯಾಗದ ಸಂದರ್ಭದಲ್ಲಿ, ಆದರೆ, ನಿಮ್ಮ ಖಾತೆಗೆ ಸಂಬಂಧಪಟ್ಟಂತೆ ತೋರುತ್ತದೆ ಎಂದಾದಲ್ಲಿ, ಸಂಬಂಧಪಟ್ಟ ಶಾಖೆಗಳೊಂದಿಗೆ ಅವಶ್ಯಕ ಗುರುತಿನ ಪುರಾವೆಗಳು ಹಾಗೂ ವಿಳಾಸವನ್ನೂ ಪುರಾವೆಯಾಗಿ ತೆಗೆದುಕೊಳ್ಳಬಹುದು.

  Iಮೇಲಿನ ಎರಡೂ ಸಂದರ್ಭಗಳಲ್ಲಿ, ಶಾಖೆಗಳು ಖಾತೆಯ ಸ್ಥಿತಿಗತಿಯ ಬಗ್ಗೆ ಮಾಹಿತಿ ನೀಡಲು ಸಾಧ್ಯವಾಗದಿದ್ದರೆ, ಆಗ ಮಾತ್ರ ನೀವು ಸಂಬಂಧಪಟ್ಟ ಪ್ರಾದೇಶಿಕ ಕಚೇರಿಗಳ ಗ್ರಾಹಕ ಸೇವಾ ವಿಭಾಗಗಳೊಂದಿಗೆ ವಿಷಯವನ್ನು ತೆಗೆದುಕೊಂಡು ಹೋಗಲು ನಾವು ನಿಮಗೆ ಮನವಿ ಮಾಡುತ್ತೇವೆ, ಅವರು ಪ್ರಧಾನ ಕಚೇರಿಯ ನಿಷ್ಕ್ರಿಯ ಠೇವಣಿ ವಿಭಾಗಕ್ಕೆ ಅವಶ್ಯಕ ಪರಿಶೀಲನೆ ಹಾಗೂ ಸೂಕ್ತ ಕ್ರಮಕ್ಕಾಗಿ ಸಲ್ಲಿಸುತ್ತಾರೆ.

 • Please click here to Search Your Dormant Account

ಹಕ್ಕು ಪ್ರತಿಪಾದನೆಯ ವಿಧಾನ:

 • ಖಾತೆದಾರರು ಠೇವಣಿಯ ಹಕ್ಕು ಪ್ರತಿಪಾದನೆಗೆ ಅಥವಾ ನಿಷ್ಕ್ರಿಯ ಖಾತೆಯನ್ನು ಸಕ್ರಿಯಗೊಳಿಸುವಿಕೆಗಾಗಿ ಅವರ ಖಾತೆಯಿರುವ ಶಾಖೆಗೆ ಪತ್ರ ಮುಖೇನ ವಿನಂತಿಸಬೇಕು.
 • ಖಾತೆದಾರರು ಠೇವಣಿ / ಖಾತೆಯ ಮಾಲೀಕತ್ವದ ಬಗ್ಗೆ ಪುರಾವೆ, ಅಂದರೆ, ಠೇವಣಿ ರಸೀದಿ / ಪಾಸ್ ಬುಕ್, ಸಲ್ಲಿಸಬೇಕು.
 • ಖಾತೆದಾರರು ಕೆವೈಸಿ ಅವಶ್ಯಕತೆಗಳಿಗೆ ಅನುಸಾರವಾಗಿ ಗುರುತಿನ ಪುರಾವೆ ಮತ್ತು ವಿಳಾಸ ಪುರಾವೆಗಳನ್ನು ಸಲ್ಲಿಸಬೇಕು ಹಾಗೂ ಅವು ಹಕ್ಕು ಪ್ರತಿಪಾದಿಸುವವರ ಸರಿಯಾದ ಗುರುತಿಸುವಿಕೆಯಾಗಿರಬೇಕು.
 • ಕಾಲಾವಧಿ ಠೇವಣಿ 20,000 / - ಹಾಗೂ ಅಧಿಕ ಮೊತ್ತವಾಗಿದ್ದಲ್ಲಿ, ಇದನ್ನು ನಗದು ರೂಪದಲ್ಲಿ ನೀಡಲಾಗುವುದಿಲ್ಲ, ಅದನ್ನು ಗ್ರಾಹಕರ ಇತರ ಬ್ಯಾಂಕಿನ ಖಾತೆಗೆ ಎನ್ ಇ ಎಫ್ ಟಿ / ಆರ್ ಟಿ ಜಿ ಎಸ್ ಮೂಲಕ ಜಮೆ ಮಾಡಲಾಗುವುದು, / ಖಾತೆದಾರ ಹೆಸರಿಗೆ ಡಿಡಿ ನೀಡಲಾಗುವುದು.
longbanner

ಹಕ್ಕುತ್ಯಾಗ: ಈ ಜಾಲತಾಣದ ವಿಷಯ ಕೇವಲ ಮಾಹಿತಿ ಹಂಚಿಕೆಗಾಗಿ. ಯಾವುದೇ ರೀತಿಯ ವ್ಯವಹಾರಕ್ಕಾಗಿ ಆಕರ್ಷಿಸಲು ರೂಪಿಸಿದ್ದಲ್ಲ.

2015 ಸಿಂಡಿಕೇಟ್ ಬ್ಯಾಂಕ್ . ಎಲ್ಲ ಹಕ್ಕುಗಳನ್ನೂ ಕಾಯ್ದಿರಿಸಲಾಗಿದೆ     1280 x 800 ರಲ್ಲಿ ಈ ಜಾಲತಾಣವನ್ನು ಉತ್ತಮವಾಗಿ ವೀಕ್ಷಿಸಬಹುದು