Syndicate Bank
banner
 

ಸಾರ್ವಜನಿಕ ಹಿತಾಸಕ್ತಿ ಸಂಬಂಧಿ ಬಹಿರಂಗ

 
ಕೇಂದ್ರ ವಿಜಿಲೆನ್ಸ್ ಆಯೋಗದಿಂದ 17.05.2004 ದಿನಾಂಕದ ಕಚೇರಿ ಪ್ರಕಟಣೆ ಸಂಖ್ಯೆ 004 / ವಿಜಿಎಲ್ / 26 (ಆಫೀಸ್ ಆರ್ಡರ್ ನಂಬರ್ 33/5/2004) ರವಾನಿಸಲಾದ ಸಾರ್ವಜನಿಕ ಪ್ರಕಟಣೆಗಳು.


ಸಾರ್ವಜನಿಕ ಹಿತಾಸಕ್ತಿ ಸಂಬಂಧಿ ಬಹಿರಂಗಪಡಿಸುವುದು ಹಾಗೂ ಮಾಹಿತಿದಾರರ ರಕ್ಷಣೆಯ ಕುರಿತು ಭಾರತ ಸರ್ಕಾರದ ನಿರ್ಣಯ

 1. ಭ್ರಷ್ಟಾಚಾರ ಅಥವಾ ದುರ್ಬಳಕೆಯ ಯಾವುದೇ ಆರೋಪದ ಬಗ್ಗೆ ಮಾಹಿತಿ ಬಹಿರಂಗಗೊಳಿಸಲು ಲಿಖಿತ ದೂರುಗಳನ್ನು ಸ್ವೀಕರಿಸಲು ಮತ್ತು ಸರಿಯಾದ ಕ್ರಮವನ್ನು ಶಿಫಾರಸು ಮಾಡಲು ಭಾರತ ಸರ್ಕಾರ ಕೇಂದ್ರ ಜಾಗೃತಿ ಆಯೋಗವನ್ನು 'ಅಧಿಕೃತ ಏಜೆನ್ಸಿ' ಎಂದು ಅಧಿಕೃತಗೊಳಿಸಿದೆ
 2. ಈ ನಿಟ್ಟಿನಲ್ಲಿ, ಈ ಆಯೋಗದ ವ್ಯಾಪ್ತಿಯು ಕೇಂದ್ರ ಸರ್ಕಾರ ಅಥವಾ ಯಾವುದೇ ಕೇಂದ್ರ ಕಾಯ್ದೆಯ ಅಡಿಯ ಕಾರ್ಪೋರೇಶನ್ ಗಳ, ಸರ್ಕಾರಿ ಕಂಪನಿಗಳು, ಸೊಸೈಟಿಗಳು ಅಥವಾ ಸ್ಥಳೀಯ ಅಧಿಕಾರಿಗಳು ಅಥವಾ ಕೇಂದ್ರ ಸರಕಾರದಿಂದ ನಿಯಂತ್ರಿಸಲ್ಪಟ್ಟಿರುವ ಅಥವಾ ಯಾವುದೇ ನಿಗಮದ ಉದ್ಯೋಗಿಗಳಿಗೆ ಸೀಮಿತವಾಗಿರುತ್ತದೆ. ರಾಜ್ಯ ಸರ್ಕಾರಗಳು ನೇಮಕ ಮಾಡಿಕೊಂಡ ಉದ್ಯೋಗಿಗಳು ಅಥವಾ ಅದರ ಕಾರ್ಪೊರೇಷನ್ ಚಟುವಟಿಕೆಗಳು ಇತ್ಯಾದಿ ಆಯೋಗದ ವ್ಯಾಪ್ತಿಯೊಳಗೆ ಬರುವುದಿಲ್ಲ.
 3. ಈ ನಿಟ್ಟಿನಲ್ಲಿ, ಅಂತಹ ದೂರುಗಳನ್ನು ಸ್ವೀಕರಿಸುವ ಆಯೋಗವು ದೂರುದಾರರ ಗುರುತನ್ನು ರಹಸ್ಯವಾಗಿಡುವ ಜವಾಬ್ದಾರಿಯನ್ನು ಹೊಂದಿದೆ ಹಾಗೂ ಈ ಕೆಳಗಿನ ಅಂಶಗಳನ್ನು ಅನುಸರಿಸಲು ಸೂಚಿಸಲಾಗಿದೆ

 4. ಸಲ್ಲಿಸಿದ ದೂರು ಮುಚ್ಚಿದ / ಸುರಕ್ಷಿತ ಲಕೋಟೆಯಲ್ಲಿರಬೇಕು.
  ಲಕೋಟೆಯು ಕಾರ್ಯದರ್ಶಿ, ಕೇಂದ್ರೀಯ ಜಾಗೃತಿ ಆಯೋಗಕ್ಕೆ ಉದ್ದೇಶಿಸಿರಬೇಕು, ಹಾಗೂ "ಸಾರ್ವಜನಿಕ ಹಿತಾಸಕ್ತಿ ಸಂಬಂಧಿ ಬಹಿರಂಗ ಅಡಿಯಲ್ಲಿ ದೂರು" ಎಂದು ನಮೂದಿಸಿರಬೇಕು. ಲಕೋಟೆಯ ಮೇಲೆ ನಮೂದಿಸಿರದಿದ್ದರೆ ಹಾಗೂ ಸರಿಯಾಗಿ ಮುಚ್ಚಿರದಿದ್ದರೆ, ಆಯೋಗವು ದೂರುದಾರರನ್ನು ಮೇಲಿನ ನಿರ್ಣಯದಂತೆ ರಕ್ಷಿಸಲು ಸಾಧ್ಯವಾಗುವುದಿಲ್ಲ ಹಾಗೂ ಆಯೋಗದ ಸಾಮಾನ್ಯ ದೂರು ನೀತಿಯಂತೆ ದೂರುಗಳನ್ನು ನಿಭಾಯಿಸಲಾಗುತ್ತದೆ. ದೂರುದಾರರು ಅವರ ಹೆಸರು ಮತ್ತು ವಿಳಾಸವನ್ನು ಆರಂಭದಲ್ಲಿ ಅಥವಾ ದೂರಿನ ಅಂತ್ಯದಲ್ಲಿ ಅಥವಾ ಲಗತ್ತಿಸಲಾದ ಪತ್ರದಲ್ಲಿ ನೀಡಬೇಕು
  ಆಯೋಗವು ಅನಾಮಧೇಯ / ಹುಸಿ ದೂರುಗಳನ್ನು ಪರಿಗಣಿಸುವುದಿಲ್ಲ.
  ಯಾರ ಬಗ್ಗೆ ದೂರು ನೀಡುತ್ತಿರುವರೋ ಅವರ ಸುಳಿವು / ಗುರುತು ತಿಳಿಯದಂತೆ ದೂರಿನ ವಿಷಯವನ್ನು ಎಚ್ಚರಿಕೆಯಿಂದ ಬರೆಯಬೇಕು. ಆದರೆ, ದೂರಿನಲ್ಲಿ ನಿರ್ದಿಷ್ಟ ಮತ್ತು ಪರಿಶೀಲನೆ ಮಾಡಬಲ್ಲ ವಿವರಣೆ ಇರಬೇಕು

  ವ್ಯಕ್ತಿಯ ಗುರುತನ್ನು ರಕ್ಷಿಸಲು ಆಯೋಗವು ಯಾವುದೇ ಸ್ವೀಕೃತಿ ಪತ್ರವನ್ನು ನೀಡುವುದಿಲ್ಲ ಹಾಗೂ ದೂರುದಾರರು ತಮ್ಮದೇ ಹಿತಕ್ಕೋಸ್ಕರ ಆಯೋಗದೊಂದಿಗೆ ಯಾವುದೇ ಹೆಚ್ಚಿನ ಪತ್ರವ್ಯವಹಾರ ಮಾಡದಂತೆ ಸಲಹೆ ನೀಡಲಾಗುತ್ತದೆ ಪ್ರಕರಣದ ಸತ್ಯಗಳನ್ನು ಪರಿಶೀಲಿಸಬಹುದಾಗಿದೆ ಎಂದು ಕಂಡುಬಂದಲ್ಲಿ, ಮೇಲೆ ತಿಳಿಸಲಾದ ಭಾರತ ಸರ್ಕಾರದ ನಿರ್ಣಯದಡಿಯಲ್ಲಿ ಒದಗಿಸಲಾದ ಅಗತ್ಯ ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಆಯೋಗವು ಭರವಸೆ ನೀಡುತ್ತದೆ. ಮತ್ತಷ್ಟು ಸ್ಪಷ್ಟೀಕರಣ ಅಗತ್ಯವಿದ್ದರೆ, ದೂರುದಾರರೊಂದಿಗೆ ಆಯೋಗವು ಸಂಪರ್ಕದಲ್ಲಿರುತ್ತದೆ.


 5. ಈ ನಿರ್ಣಯದ ಅಡಿಯಲ್ಲಿ ಪ್ರಚೋದಿತ / ಕೆರಳಿಸಲ್ಪಟ್ಟ ಕಾರಣದಿಂದ ದೂರುಗಳನ್ನು ನೀಡುವ ದೂರುದಾರರ ವಿರುದ್ಧ ಆಯೋಗವೂ ಕ್ರಮ ಕೈಗೊಳ್ಳಬಹುದು.
 6. ವಿವರವಾದ ಪ್ರಕಟಣೆಯ ಒಂದು ಪ್ರತಿಯು ಆಯೋಗದ http://www.cvc.nic.in ಜಾಲತಾಣದಲ್ಲಿ ಲಭ್ಯವಿದೆ

ಕೇಂದ್ರ ಜಾಗೃತಿ ಆಯೋಗ ಸತರ್ಕತಾ ಭವನ್ ನವದೆಹಲಿ ಇವರಿಂದ ಸಾರ್ವಜನಿಕ ಹಿತಾಸಕ್ತಿಗಾಗಿ ನೀಡಲಾಗಿದೆ

ಸಹಿ ಮಾಡಲಾಗಿದೆ
ಕಾರ್ಯದರ್ಶಿ
ಕೇಂದ್ರ ಜಾಗೃತಿ ಆಯೋಗ

~~~~~~

ಕೇಂದ್ರೀಯ ಜಾಗೃತಿ ಆಯೋಗ, ನವದೆಹಲಿ ಯ 12.03.1999 ರ ದಿನಾಂಕದ ಅಧಿಸೂಚನೆಯ ಸಂಖ್ಯೆ 8 (1) (ಜಿ) / 99 / (4) ಮತ್ತು ಡಿಡಿ ಎಲ್ಆರ್ 99: ವಿ.ಜಿ.ಎಲ್: 16-8003, 17.05.2004 ದಿನಾಂಕದ ತಿದ್ದುಪಡಿ :

ಲಂಚ ನೀಡಬೇಡಿ. ಈ ಬ್ಯಾಂಕಿನ ಯಾರಾದರೂ ಲಂಚ ಕೇಳಿದರೆ ಅಥವಾ ಈ ಬ್ಯಾಂಕಿನಲ್ಲಿ ಭ್ರಷ್ಟಾಚಾರದ ಬಗ್ಗೆ ನಿಮ್ಮಲ್ಲಿ ಯಾವುದೇ ಮಾಹಿತಿಯಿದ್ದರೆ ಅಥವಾ ನೀವು ಈ ಬ್ಯಾಂಕಿನಲ್ಲಿ ಭ್ರಷ್ಟಾಚಾರಕ್ಕೆ ಬಲಿಯಾಗಿದ್ದರೆ, ನೀವು ಇಲಾಖೆಯ ಮುಖ್ಯಸ್ಥ ಅಥವಾ ಮುಖ್ಯ ವಿಚಾರಣಾಧಿಕಾರಿ ಹಾಗೂ ಈ ಕೆಳಗೆ ವಿಳಾಸ ನೀಡಲಾದ ಕೇಂದ್ರ ಜಾಗೃತಿ ಆಯೋಗಕ್ಕೆ ದೂರು ನೀಡಬಹುದು.


ಶ್ರೀ.ಚ.ಪ್ರಭಾಕರ ರಾವ್,
ಮುಖ್ಯ ಜಾಗೃತಿ ಅಧಿಕಾರಿ,
ಸಿಂಡಿಕೇಟ್ ಬ್ಯಾಂಕ್,
ಕಾರ್ಪೊರೇಟ್ ಕಚೇರಿ,
2ನೇ ಅಡ್ಡರಸ್ತೆ
ಗಾಂಧಿನಗರ
ಬೆಂಗಳೂರು – 560 009

ದೂರವಾಣಿ
ಕಚೇರಿ : 080-22267741
ಕಾರ್ಯದರ್ಶಿಗಳು
ಕೇಂದ್ರ ಜಾಗೃತಿ ಆಯೋಗ
ಸತರ್ಕತಾ ಭವನ
ಜಿ ಪಿ ಒ ಸಂಕೀರ್ಣ
ಬ್ಲಾಕ್ ಎ, ಐ ಎನ್ ಎ
ನವದೆಹಲಿ - 110 023.

ದೂರವಾಣಿ : 011-24618891
longbanner

ಹಕ್ಕುತ್ಯಾಗ: ಈ ಜಾಲತಾಣದ ವಿಷಯ ಕೇವಲ ಮಾಹಿತಿ ಹಂಚಿಕೆಗಾಗಿ. ಯಾವುದೇ ರೀತಿಯ ವ್ಯವಹಾರಕ್ಕಾಗಿ ಆಕರ್ಷಿಸಲು ರೂಪಿಸಿದ್ದಲ್ಲ.

2015 ಸಿಂಡಿಕೇಟ್ ಬ್ಯಾಂಕ್ . ಎಲ್ಲ ಹಕ್ಕುಗಳನ್ನೂ ಕಾಯ್ದಿರಿಸಲಾಗಿದೆ     1280 x 800 ರಲ್ಲಿ ಈ ಜಾಲತಾಣವನ್ನು ಉತ್ತಮವಾಗಿ ವೀಕ್ಷಿಸಬಹುದು